ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

May, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ದೇಶ ಕಾಲ ಚಲನ

(೧)
ಬೇರೆ ಯಾವ ದೇಶದ್ದೋ
ದೂರದ್ದೋ
ಸಮಯವನ್ನ
ನಮ್ಮಲ್ಲಿರುವ ಗಡಿಯಾರವನ್ನ
ಹಿಂದಕ್ಕೋ ಮುಂದಕ್ಕೋ
ಮಾಡಿ
ಹೊಂದಿಸಿಕೊಂಡುಬಿಡುತ್ತೇವೆ

(೨)
ರಾತ್ರಿಯೆಲ್ಲಾ ಮಳೆಸುರಿದ
ಮಾರನೆಯ ದಿನದ
ಬೆಳಗಲಿ ಮೋಡಗಳು
ಅದೆಷ್ಟು
ನಿಧಾನಕ್ಕೆ ಚಲಿಸುತ್ತದೆಯೆಂದರೆ
ಗೊತ್ತೇ ಆಗದಂತೆ

(೩)
ಗೂಡು ಕಟ್ಟಲು ಹಕ್ಕಿ
ತೆಗೆದುಕೊಂಡು
ಹೋಗುತ್ತಿದ್ದ ಹುಲ್ಲು
ಕೆಳಕ್ಕೆ ಬಿದ್ದಾಗ
ಹುಳವೊಂದು ಹೊರಗೆ ಬಂದು
ಹಾರಿಹೋಯಿತು
ಯುದ್ಧ

No mans landಲ್ಲಿ
ಬೆಳೆದ ತರಕಾರಿ
ಯಾವ ದೇಶಕ್ಕೆ
ಯಾವ ರಾಜನರಮನೆಯ
ಬೆಳಗಿನ ಉಪಹಾರಕ್ಕೆ?

ಕುಯ್ದದ್ದು ಎರಡೇ ಎರಡು
ನರ
ರಕ್ತದ್ದೊಂದು ಉಸಿರಿನದ್ದಿನ್ನೊಂದು
ಬೆಳಗಿನುಪಹಾರಕ್ಕೆ ನಂಜಿಕೊಳ್ಳಲಿಕ್ಕೆ

ಅಂಬಂಡೆ: ಊರಿನ ಹೆಸರು
ಅರೆ ಮನಸ್ಸಿನ ಆಡೊಂದು ಆಡುತ್ತಿದ್ದ ಬಂಡೆ
ಆಡಿಗೆ ಕೊಂಬು ಬಂದು ಹಾರಿ ಹೋಯಿತು
ಊರಿನ ಹೆಸರು
ಹಾಗೆ ಉಳಿಯಿತು
ಅಪಭ್ರಂಶವಾಗಿ
ಹಾರಿ ಹೋದ ಆಡು ಮನುಷ್ಯನಾಗಿ
ಮರಳಿ ಊರಿಗೆ ಬಂದಾಗ
ಮದ್ಯಾನ್ಹದ ಊಟಕ್ಕೆ
ಕಟ್ಟು ಮಸ್ತಾದ
ಮಸಾಲೆ ಲೇಪಿತ
ಅರಮನೆಯ ಪ್ರಸಾದ

ಮೂಲತಃ ಕ್ರೌರ್ಯ

ಬೇಡವಮ್ಮ ಕಣಿ
ತಮಿಳು ಬರೋಲ್ಲ
ಹೇಳಿದ್ದು ತಿಳಿಯೋಲ್ಲ
ಹೊರಗಿನವ
ನಮ್ಮ ಕಡೆ ಹೀಗೆ ಬೀಚಿನಲ್ಲಿ
ಸಿಗುವುದಿಲ್ಲ ಯಾರೂ
ಕಣಿ ಹೇಳುವವರು

ಬಣ್ಣ ಮಾಸಿದ್ದರೂ
ಕೆಂಪು ಪಾನು, ಕೇರಂ ಬೋರ್ಡಿನದು
ಹಳೇ ಜಿಪ್ಪು ಕಿತ್ತು
ಹೋದ ವ್ಯಾನಿಟಿ ಬ್ಯಾಗು
ಅದೆಲ್ಲಿಂದ ಬರುತ್ತಿದು
ತೆಂಗಿನ ಕಾಯಿಯೂ
ನೀರಿನಲೆಗಳ ಜೊತೆ
ಕಾಲಿಗೆ ಬಡಿದಾಗ

ಬೀಚಿನಲ್ಲೂ
ಮುತ್ತಾ ಅದು
ಕಾಲ ಬಳಿ ಬರಿ ಬಿಳಿ ನೊರೆ

ಕೊಂದೇ ಬಿಟ್ಟರಲ್ಲ
ಆ ಕಣಿ ಹೇಳುವವಳನ್ನ
ಒಂದು ಮರಿ ಮೀನು ಕೊಳ್ಳಲ್ಲಿಕ್ಕಾಗಿ
ಈ ಬೀಚು ಈ ಕಣಿ
ನೋಡಲಿಕ್ಕಲ್ಲವ ಬಂದದ್ದು
ಸಮುದ್ರವನ್ನ
ಕೊಂದೇ ಬಿಡುವುದ?

ಕರಿಬೇವಿನ ಸೊಪ್ಪು

“ಅಲ್ಲೇ, ಊರಲ್ಲಿ ಒಂದೂ ಕರಿಬೇವಿನ ಮರ ಇಲ್ವಾ?, ಊರೋರೆಲ್ಲ ನಮ್ಮನೇಲಿದ್ದ ಕರಿಬೇವನ್ನ ಕಿತ್ತು ಕಿತ್ತು ಮರ ಎಲ್ಲ ಬೋಳು ಮಾಡಿದರು, ಆ ಮರಾನೋ ಮತ್ತೆ ಬೆಳೀಲೇ ಇಲ್ಲ. ಬರೀ ಬೋಳು ಮರ. ನೀರು ಹಾಕಿದ್ದೇ ಹಾಕಿದ್ದು. ಒಮ್ಮೆ ಅದಕ್ಕೊಂದಿಷ್ಟು ಗೊಬ್ಬರಾನೂ ಹಾಕಿದ್ದಾಗಿತ್ತು. ಕಡೆಗೂ ಒಂದು ಎಲೆ ಸಹ ಚಿಗುರಲಿಲ್ಲ. ಉಪ್ಪಿಟ್ಟು ತಿನ್ಬೇಕು ಅಂತ ಅನ್ಸಿದ್ರೆ , ಒಗ್ಗರಣೆಗೆ ಒಂದೂ ಕರಿಬೇವು ಇಲ್ಲ ಅಂದ್ರೆ !, ಮಾಡೋದೆ ಆದ್ರೆ ಸರಿಯಾಗೇ ಮಾಡ್ಬೇಕು ಕರಿಬೇವಿನ ಒಗ್ಗರಣೆ ಇಲ್ಲದ ಉಪ್ಪಿಟ್ಟನ್ನ ಮನುಷ್ಯ ಅನ್ನೋನು ತಿನ್ನೋಕ್ಕಾಗುತ್ತ " ಅಂತ ಹೊರಟ ಶೇಷಣ್ಣನಿಗೆ ಹಿಂದೆ ಒಮ್ಮೆ ತಾನು ರೈಲ್ವೇ ನಿಲ್ದಾಣದ ಹಿಂದಿನ ಬೀಡಿನಲ್ಲಿ ಯಾವಾಗಲೋ ಒಂದು ಕರಿಬೇವಿನ ಪುಟ್ಟ ಗಿಡವನ್ನು ಇಟ್ಟದ್ದು ನೆನಪಾಗಿ ಅದು ಈಗ ದೊಡ್ಡದಾಗಿರಬಹುದು, ಹೋದರೆ ಒಂದು ಎಳೆಯಾದರೂ ಸಿಗಬಹುದೆಂದು ರೈಲ್ವೇ ನಿಲ್ದಾಣದ ಕಡೆ ಹೊರಟ.
ರಾಮಕ್ಕನಿಗೆ ಈ ವಯ್ಯ ಈಗ್ಯಾಕೆ ತನ್ನ ಮನೆಗೆ ಬಂದು ಹೀಗೆ ಉಪ್ಪಿಟ್ಟು ಮಾಡ್ತೀನಿ ಅಂತ ಕುಂತಿದ್ದಾನೋ, ಊರೋರ ಬಾಯಿಗೆ ಎಲ್ಲಿ ಸಿಗಬೇಕಾಗುತ್ತೋ ಅನ್ನೋದು ಅವಳಿಗಿದ್ದ ಭಯ. ಎಲ್ಲರಿಗೂ ಮರೆವು ಬೇಗ ಸಂಭವಿಸಿದರೂ ತನಗಲ್ಲ.
“ಈ ವಯ್ಯಂಗೆ ಈಗ ಉಪ್ಪಿಟ್ಟು ಮಾಡು ಅಂತ ಹೇಳ್ದೋರಾದ್ರು ಯಾರು, ಅದೂ ನಮ್ಮನೆಗೆ ಬಂದು ಮಾಡ್ಬೇಕಾ ಹೇಳು?, ನಂಗೋ ಬೇಡ ಅನ್ಲಿಕ್ಕೆ ಆಗ್ಲಿಲ್ಲ ನೋಡು. ಹಿಂದೆ ಆಗಿದ್ದನ್ನ ಮರೆತಿದ್ದಿ ನೀನು? ಅಲ್ಲಾ, ಈ ವಯ್ಯನ ಹೋಟೇಲಿಗೆ ನಾನು ಸುಮ್ಮನೆ ಹೋದದ್…