ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

September, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕತೆ

[ ಇಲ್ಲಿನ ಪಾತ್ರಗಳು ಹಾಗು ಸನ್ನಿವೇಶಗಳು ಕೇವಲ ಕಾಲ್ಪನಿಕ. ಯಾರನ್ನಾದರೂ, ಯಾವುದನ್ನಾದರೂ ಹೋಲುತ್ತಿದ್ದರೆ, ಅದಕ್ಕೆ ಈ "ಕತೆ" ಕಾರಣವಲ್ಲ ]

"ಅಜ್ಜಿ, ಕತೆ ಹೇಳಜ್ಜಿ..."
"ಯಾವ ಕತೇನೋ...?"
"ಯಾವುದೋ ಒಂದು ಕತೆ ಹೇಳಜ್ಜಿ"
"ಒಂದಾನೊಂದು ಕಾಲದಲ್ಲಿ, ಆ ಒಂದು ಊರಲ್ಲಿ...........................................................................................

-------------------೦----------------------೦-------------------------
ದಾಸಯ್ಯ ಅದೇ ಕಂಬಾಲರಾಯನ ಗುಡ್ಡದ ಮೇಲೆ ಕೂತಿದ್ದ.  ಅದೇ ಸ್ಥಿತೀಲಿ, ಯಾವಾಗಲೂ ಕೂತಂತೆ, ಯಾವಗಲೂ ನಿಂತಂತೆ ಹಾಗೇ ಇದ್ದ. ವಯಸ್ಸಾಗಿತ್ತು. ಕಾಲ ಚಲಿಸಿತ್ತು. ಅದರ ಗುರುತು ದೇಹದಲ್ಲಿ ಕಾಣುತ್ತಿತ್ತು. ಏನೇ ಬದಲಾದರೂ ದಾಸಯ್ಯ ಮಾತ್ರ ಹಾಗೇ ಕೂತಿದ್ದ. ಕಂಬಾಲರಾಯನ ಗುಡ್ಡ ಹಾಗೇ ಇತ್ತು, ಕಂಬಾಲರಾಯನೂ ಹಾಗೇ ಇದ್ದ. ನಾನು ಹುಡುಕಿ ಹೊರಟಿದ್ದೆ. ದಾಸಯ್ಯನ್ನ ಕಾಣಬೇಕಿತ್ತು. ಕತೆ ಬೇಕಿತ್ತು ನಂಗೆ.
ಕಂಬಾಲರಾಯನ ಗುಡ್ಡದ ಹತ್ತಿರಕ್ಕೆ ಬರುತ್ತಾ ಇದ್ದಾಂಗೆ ಅಲ್ಲೆ ಇದ್ದ ಗುಹೆ ಕಾಣಿಸ್ತು. ಇದೇ ಗುಹೇನ ತೋರಿಸಿ ಅಜ್ಜಿ ಕತೆ ಹೇಳ್ತಿದ್ಲು. ಈ ಗುಹೇಲಿ ಒಬ್ಬ ದೊಡ್ಡ ರಾಕ್ಷಸ ಇದ್ದಾನೆ. ಆ ರಾಕ್ಷಸ ನಮ್ಮನ್ನೆಲ್ಲಾ ತಿಂದಾಕ್ತಾನೆ. ಯಾವುದಕ್ಕೇ ಹಟ ಮಾಡಿದ್ರೂನು ಮನೇಲಿ ತೋರಿಸ್ತಾ ಇದ್ದದ್ದು ಈ ಗುಹೆ ಹಾಗು ಅದರೊಳಗಿರೋ ರಾಕ್ಷಸ. ಎಷ್ಟು ಕಲ…