ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

March, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಒಂದು ವಿದಾಯ

ಮುನುಷ್ಯಂಗೆ ಭಾವವನ್ನ ಭಾಷಯಲ್ಲಿ ಹಿಡಿದಿಡುವುದು ಸದಾ ಸವಾಲಿನ ಕೆಲಸವೇ ಸರಿ. ಸದಾ ಸ್ಥಾಪಿತ ಅರ್ಥಗಳಿಂದ ಕೂಡಿದ ಭಾಷೆಯಲ್ಲಿ, ಅರ್ಥಕ್ಕೇ ಧಕ್ಕದ ಭಾವವನ್ನ ಹಿಡಿದಿಟ್ಟು ಅದನ್ನ ಮುಟ್ಟಿಸಬೇಕು. ಒಂದು ವಿದಾಯವನ್ನ ನಾನೀಗ ತಿಳಿಸಬೇಕಿದೆ. ವಿದಾಯದ ನೋವು ಮತ್ಯಾವುದೋ ಸ್ವಾಗತದ ಸಂಭ್ರಮದಲ್ಲಿ ತೆರೆದುಕೊಳ್ಳುತ್ತೆ. ಹೀಗೆ ಒಂದು ಕಡೆ ವಿದಾಯ ಮತ್ತೊಂದು ಕಡೆ ಸ್ವಾಗತ. ಎರೆಡನ್ನೂ ಒಮ್ಮೆಗೇ ಹಿಡಿದಿಡಲು ಭಾಷೆ ಸೋಲಬೊಹುದು, ಆದರೆ ಭಾಷೆಗೂ ಮೀರಿದ ಭಾವದೊಂದಿಗೆ ಅದು ತಮ್ಮನ್ನ ತಲುಪಬೊಹುದೆಂದು ಆಶಿಸುತ್ತೇನೆ. ಹಾಗೆ ನೋಡಿದರೆ ಪ್ರತೀ ಕ್ಷಣವೂ ಹಿಂದಿನ ಕ್ಷಣದ ವಿದಾಯವನ್ನ ಹೊತ್ತೂ ಮುಂದಿನ ಕ್ಷಣದ ಸ್ವಾಗತಕ್ಕೆ ತೆರೆದುಕೊಂಡೇ ಇರುತ್ತದೆ.

ಸುಮಾರು ಒಂದು ವರ್ಷಗಳ ಕಾಲ ನನಗೆ ಆಶ್ರಯ ಕೊಟ್ಟ, ಬಂಟ್ವಾಳವನ್ನ, ಧಕ್ಷಿಣ ಕನ್ನಡವನ್ನ ಬೌತಿಕವಾಗಿ ತೊರೆದು ದೂರ ಹೊರಡುತ್ತಿದ್ದೇನೆ. ಹಾಗೆ ನೋಡಿದರೆ ನನಗೆ ಈ ರೀತಿಯ ವಿಧಾಯ ಏನೂ ಹೊಸದಲ್ಲ, ನಾನೊಬ್ಬ ಅಲೆಮಾರಿಯೆ. ಆದರೆ ಈ ಅಲೆಮಾರಿಗೂ ಒಂದು ನೆಲೆಯನ್ನ ಈ ಸ್ಥಳ, ಈ ಸಂಸ್ಥೆ(SVS College, ಬಂಟ್ವಾಳ), ಇಲ್ಲಿನ ಜನ ನೀಡಿದ್ದರು. ಆದ್ದರಿಂದ ಈಗ ಈ ಸ್ಥಳವನ್ನ ಬಿಟ್ಟು ಹೋಗುವಾಗ ಏನೋ ಬೇಸರ. ಏನನ್ನೋ ಕಳೆದುಕೊಳ್ಳುತ್ತಿರುವ ಬೇಸರ. ಆದರೆ ಹೊರಡಲೇ ಬೇಕು, ಒಳಗಿನ ಧ್ವನಿಗೆ ಗೌರವ ನೀಡಿ, ಕೂಗುತ್ತಿರುವ ಹಾದಿಗೆ ಕಿವಿಗೊಟ್ಟು ನಡೆಯಬೇಕು. ಆದ್ದರಿಂದ ಮುಂದಿನ ಪಯಣಕ್ಕೆ ಇಲ್ಲಿಂದ ಹೊರಟಿದ್ದೇನೆ.

ಇಲ್ಲಿನ ಪರಿಸರದಲ್ಲಿ ನ…

ತಿರುಬೋಕಿಯ ಸ್ವಗತ ೩

ಪರಸ್ಪರ ವಿರೋಧಾತ್ಮಕವಾಗಬಲ್ಲ ಪ್ರತೀ ರಚನೆಯೂ ಸ್ವ-ಸ್ಥಿರವಾಗಿರುತ್ತದೆ. ಅಥವಾ ಪ್ರತೀ ಅಸಂಗತ ರಚನೆಯೂ ಸ್ವ-ಸ್ಥಿರವಾಗಿರುತ್ತದೆ. ಅಥವಾ ಯಾವುದೇ ಶಬ್ದಕ್ಕೂ ಅರ್ಥಗಳಿರುವುದಿಲ್ಲ. ಅಥವಾ ಪ್ರತೀ ಶಬ್ದಕ್ಕೂ ಜೀವವಿರುತ್ತದೆ.


ಕತ್ತಲ ರಾತ್ರಿಗಳು ಒಂಟಿಯಾಗಿದ್ದಾಗ ಭೀಕವೆನಿಸುತ್ತದೆ. ಎಷ್ಟೇ ಪ್ರಯತ್ನಿಸಿದರೂ ನಿದ್ರೆ ಹತ್ತುವುದಿಲ್ಲ. ಏನೋ ದಿಗಿಲು, ಭಯ. ಶಬ್ದವೇ ಇಲ್ಲದ ಕಡೆ ಏನೋ ಶಬ್ದವನ್ನ ಭಾವಿಸೋದು. ಶೂನ್ಯದಿಂದ ಏನೋ ರೂಪಗೊಳ್ಳುತ್ತಾ ಇದೆ ಅಂತ ಅಂದು ಕೊಳ್ಳುವುದು. ಹಗಲಿನಲ್ಲಿ ಇದನ್ನೇ ಏಕಾಂತ ಅಂತ ತಬ್ಬಿಕೊಂಡದ್ದು. ಈಗ ರಾತ್ರಿಯಾದಾಗ ತಬ್ಬಿಕೊಂಡದ್ದು ಶರೀರವನ್ನೇ ಸುಡುತ್ತಿದೆ. ಭಯ ಯಾಕೆ ಅಂತ ಚಿಂತಿಸತೊಡಗಿ, ಆ ಚಿಂತನೆಯೇ ಭಯದ ಮೂಲವಾಗಿ ಹೋದಾಗ ತೀವ್ರ ಭಯದಿಂದ ನರಳುತ್ತೇನೆ. ಒಮ್ಮೆ ಮನೆಯ ಬಾಗಿಲುಗಳನ್ನೆಲ್ಲಾ ಗಟ್ಟಿಯಾಗಿ ಭದ್ರಪಡಿಸಿ ಬರುತ್ತೇನೆ. ಸಾದ್ಯವಾಗುವುದಿಲ್ಲ, ಮತ್ತೇ ಹೋಗಿ ಎಲ್ಲಾ ಬಾಗಿಲುಗಳನ್ನ ಹಾಕಿದ್ದೀನ ಅಂತ ಪರೀಕ್ಷಿಸುತ್ತೇನೆ. ಎಷ್ಟೇ ಬಾರಿ ಪರೀಕ್ಷಿಸಿದರೂ ಭಯವೇನು ಹೋಗಲಿಲ್ಲ. ಕಡೆಗೆ ಬಚ್ಚಲಿಗೋಗಿ ಬಂದು ಎಲ್ಲಾ ಬಾಗಿಲುಗಳನ್ನ ಹಾಕಿದ್ದೀನಿ ಎಂಬೋ ನಂಬಿಕೆಯಲ್ಲಿ ಮಲಗುತ್ತೇನೆ.ನಿದ್ರೆ ಬಾರದಾದಾಗ ಹಸ್ತಮೈಥುನ ಮಾಡಿಕೊಳ್ಳುತ್ತೇನೆ.ಎಲ್ಲೋ ದೂರದಲ್ಲಿ ನಾಯಿಯೊಂದು ಬೊಗಳುತ್ತಿರುತ್ತದೆ. ಗಾಳಿಗೆ ಕ್ಯಾಲೆಂಡರಿನ ಹಾಳೆಗಳು ಪಟ ಪಟ ಅಂತ ಸದ್ದುಮಾಡಿದಾಗ ಬೆದರಿ ಕಾಲದ ಪರಿವೆಯೆ ಭೀಕರತೆಯನ್ನ ತೆಗಳಿ ,ಇಡೀ ಕ್ಯಾಲೆಂಡರನ್ನೇ ಹೊರಗೆಸ…