ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

February, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ತಿರುಬೋಕಿಯ ಸ್ವಗತ ೨

ನಂದೊಂದು ದುರಂತ ಬದುಕು. ಈ ದುರಂತ ನಾಟಕ ಅಂತಾರಲ್ಲ ಹಾಗೆ. ಏನೋ ಸಂಭವಿಸಿಬಿಟ್ಟು ದುರಂತವಾಗಿಹೋಗಿದೆ ಅಂತ ಭಾವಿಸಬೇಡಿ. ಏನೂ ಸಂಭವಿಸಲೇ ಇಲ್ಲ ಅದಕ್ಕೇ ದೊಡ್ಡ ದುರಂತ ಅಂತ ಅಂದದ್ದು. ನನ್ನ ಬದುಕಲ್ಲಿ ಕಥೇನೇ ಇಲ್ಲ ಕಣ್ರೀ. ಕಥೇ ಇಲ್ಲದ ಬದುಕೂ ಒಂದು ಬದುಕೇನಾ? ಛೇ, ನನ್ನ ಬದುಕಲ್ಲಿ ಯಾಕೋ ಕಥೇನೇ ಸಂಭವಿಸಲಿಲ್ಲ. ಹಾಗಾಗಿ ನನ್ನ ಬದುಕು ದುರಂತವಾಗಿ ಹೋಯಿತು. ಅಷ್ಟೇ ಆಗಿದ್ದಿದ್ದರೆ ಪರವಾಗಿಲ್ಲ, ಒಂದೇ ಒಂದು ತತ್ವ, ಸಿದ್ದಾಂತ, ತಾತ್ವಿಕಥೆ ಏನೂ ಇಲ್ಲದೆ ಹಾಳು ಬಿದ್ದೋಯ್ತು. ಆದರೆ ಈಗ, ತಿರುಬೋಕಿ ಆದ ನಂತರ ಅನ್ನಿಸ್ತಿದೆ, ಬದುಕಿಗ್ಯಾಕೆ ಕಥೆ, ಅದಕ್ಯಾಕೆ ತತ್ವ.? ಒಂದು ತತ್ವವನ್ನಿಟ್ಟು ಬದುಕನ್ಯಾಕೆ ಕಥೆಯಾಗಿಸಬೇಕು ಅಂತ? ಇರಲಿ ಈ ಎಲ್ಲಾ ದ್ವಂದ್ವಗಳ ನಡುವೆಯೂ ಬದುಕು ಅದ್ಭುತ ಹಾಗು ಅಷ್ಟೇ ನಿಗೂಢ.
ನಮ್ಮೂರ ಕಂಬಾಲರಾಯನ ಒಂಟಿ ಕಲ್ಲಿನ ಗುಡ್ಡದ ಮೇಲೆ ಯಾರೋ ಕಟ್ಟಿದ ನಾಲ್ಕು ಕಂಬಗಳಿವೆ, ಅವುಗಳ ಪಕ್ಕ ಒಂದಿಷ್ಟು ಮಣ್ಣು, ಒಂದಿಷ್ಟು ಕಲ್ಲು. ಅಲ್ಲಿ ದೇವರು ತುಂಬಾ ಸುಲಭದಲ್ಲಿ ಸಿಕ್ಕಿ ಬಿಡುತ್ತಾನೆ. ಅಲ್ಲೇ ಇರೋ ಮೂರು ಕಲ್ಲನ್ನ ತೊಳೆದು ಅದಕ್ಕೆ ಹರಿಸಿನ ಕುಂಕುಮ ಹಚ್ಚಿಬಿಟ್ರೆ ಮುಗೀತು ಅದೇ ದೇವ್ರು. ನಮಸ್ಕಾರ ಮಾಡಿ, ದೇವ್ರೆ ಕಾಪಾಡಪ್ಪ ಅಂದರೆ ಮುಗೀತು. ಆಮೇಲೆ ಅದೇ ಕಲ್ಲನ್ನ ಬಿಸಾಕಿದ್ರೂ, ಅದನ್ನ ತುಳ್ಕೊಂಡು ಹೋದ್ರೂ ಯಾರೂ ಕೇಳೋಲ್ಲ. ಅಂತಾ ದೇವ್ರ ಜೊತೆ ಒಬ್ಬ ಮನುಷ್ಯ ಇದ್ದ. ನಾನು ಆತನ್ನ ಏನೋ ಒಂದು ಹೆಸರಲ್ಲಿ ಕರೀತಿದ್ದೆ. ಒಂದು…