ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

January, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

..........................

ಶೋಭನಕ್ಕೊರಟ ಹುಡುಗಿಯ ಮುಡಿಗೆ ಮಲ್ಲಿಗೆ ಕಟ್ಟಿಕೊಟ್ಟ ಲಂಗ ಕುಪ್ಪಸ ತೊಟ್ಟ ಅವಿವಾಹಿತ ಅಜ್ಜಿಯ ನೋಟ, ಹೆಣ್ಣು ಗಂಡು ಬೆರೆತ ಬೆತ್ತಲೆ ದೇಹದ ಗಂಧ, ಮಹಾಲಿಂಗದೇವ ನಕ್ಕ ಜಗತ್ತು ತಣ್ಣಗಿನ ನಿಶ್ಶಬ್ದದಲ್ಲಿ ಕೊನೆಗೊಳ್ಳತೊಡಗಿತು.

ತಿರುಬೋಕಿಯ ಸ್ವಗತ ೧

ಬದುಕಿಗೆ ರಚನೆ ಎಂಬೋದೇ ಇಲ್ಲ. ಸ್ವಲ್ಪ ಕೇಳಿ ಇಲ್ಲಿ. ಕೇಳಲಿಕ್ಕೆ ಆಗದಿದ್ದರೆ ಓದಿ. ಓದಲಿಕ್ಕೆ ಆಗದಿದ್ದರೆ ಓಡಿಹೋಗಿ. ಸತ್ಯವನ್ನ ಎರೆಡೂ ಕಣ್ಣುಗಳಿಂದ ನೋಡಬೇಕು. ಕೆಲವೊಮ್ಮೆ ಸಾದ್ಯ ಆಗೋದಿಲ್ಲ. ಕಣ್ಣು ಮಿಟಿಕಿಸುತ್ತಲೇ ಇರಬೇಕಾಗುತ್ತೆ. ಆಗ ಸತ್ಯ ತಪ್ಪಿಸಿಕೊಂಡುಬಿಡುತ್ತೆ. ಆದ್ರಿಂದ ಕಣ್ಣುಮಿಟುಕಿಸ್ದೆ ಸತ್ಯಾನ ನೋಡ್ತಾ ಇರಿ. ನೋಡೋಕೆ ಆಗೋಲ್ಲ, ಅದಕ್ಕೇ ಸುಳ್ಳನ್ನ ಸತ್ಯ ಅಂತ ಬಾವಿಸಿಬಿಟ್ಟರೆ ಆಯ್ತು. ಯಾವ ಸಮಸ್ಯೇನೂ ಇಲ್ಲ. ಅಸ್ತಿತ್ವ, ಅದೊಕ್ಕೊಂದು ಮಹಾನ್ ಕುರುವು, ಅದನ್ನ ಸ್ಥಾಪಿಸಲಿಕ್ಕೆ ಹೋರಾಡೋದು. ಯಾವುದೋ ಪ್ರತಿಮೆ, ನನ್ನನ್ನ ನಾನು ಪೂಜ್ಯಗೊಳಿಸಿಕೊಂಡುಬಿಡಬೇಕು. ನೋಡಿ ಸ್ವಾಮಿಗಳೆ, ಮಹಾನ್ ಸ್ವಾಮಿಗಳೆ. ಬನ್ನಿ, ಬನ್ನಿ ನಾನೊಬ್ಬ ಮಹಾನ್ ಪೂಜ್ಯ ವ್ಯಕ್ತಿ. ಎಲ್ಲಿ ಹಾರ ತನ್ನಿ, ಒಂದು ಶಾಲೂ, ಜೊತೆಗೆ ಒಂದಿಷ್ಟು ಹಣ್ಣು, ಒಂದು ಸಮಾರಂಭ. ನಾನೀಗ ದೊಡ್ಡ ಮನುಷ್ಯ.
ಅಸ್ತಿತ್ವದ ಮಹಾನ್ ಕುರುವನ್ನು ಸ್ಥಾಪಿಸಲು ಹೋಗುತ್ತಿದ್ದೇನ ? ಯಾವ ಪ್ರತಿಮೆಯ ಹಿಂದೆ ಹೋಗುತ್ತಿದ್ದೇನೆ? ನನ್ನನ್ನು ನಾನೆ ಪೂಜ್ಯಗೊಳಿಸಿಕೊಳ್ಳೋಕೆ ಹೋಗುತ್ತಿದ್ದೇನೆ. ಯಾವುದೋ ಪ್ರತಿಮೆ, ಒಂದಾ ನಿರಾಕರಿಸಲಿಕ್ಕೆ, ಅಥವಾ ಸ್ವೀಕರಿಸಲಿಕ್ಕೆ. ಪ್ರತಿಮೆಗಳಿಲ್ಲದೆ ಬದುಕಲಿಕ್ಕೆ ಸಾದ್ಯವೇ ಇಲ್ಲವ? ಅಥವಾ ಬದುಕನ್ನೇ ಒಂದು ಪ್ರತಿಮೆಯನ್ನಾಗಿ ಮಾಡಿಬಿಟ್ಟಿದ್ದೇವೆಯೆ? ಏನೋ, ಏನೂ ತಿಳಿಯುತ್ತಿಲ್ಲ. ಸುಮ್ಮನೆ ಪದಗಳ ಅಬ್ಬರ.
ನಿಜ, ಎಂತದೂ ಇಲ್ಲ ಇಲ್ಲಿ. ಕೆಲಸಕ್ಕೆ ಬಾರದ…

....................................

ತಥಾಗತನನ್ನ ಅರಸಿ ಹೊರಟಿದ್ದೇನೆ ನಿರಾಕರಿಸಲಿಕ್ಕ? ನೆರಳಿಗಂಟಿದ ದೇಹ ಚಲಿಸುತ್ತೆ ನೆರಳ ನೆರಳಾಗಿ ಸತ್ಯ ನಿಜಕ್ಕೂ ಸತ್ಯವ?!