ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಚರಿತ್ರೆ

ಹಳೇ ಪೇಪರ್ನಿಂದ ಮಾಡಿದ ಕಾಗದದ ಕ್ಯಾಮರಾದಲ್ಲಿ
ಕ್ಲಿಕ್ ಅನ್ನಿಸಿ
ಕೈಯಲ್ಲೇ ಚಿತ್ರವನ್ನು ಬರೆದು
ಇಗೋ ಫೋಟೋ
ಅಂತ ಕೊಡುವುದರೊಂದಿಗೆ ನನ್ನ ಕ್ಯಾಮರಾಯಾನ ಆರಂಭವಾಯಿತು.

ಚಂದಮಾಮದ ಮಾಯ-ಮಂತ್ರದ ಕತೆಯ ಪಾತ್ರಗಳನ್ನೂ, ದೃಶ್ಯಗಳನ್ನೂ,
ಇದೇ ಕಾಗದದ ಕ್ಯಾಮರಾದಲ್ಲಿ ಸೆರೆಹಿಡಿದದ್ದು.
ಮಣ್ಣ ಬೊಂಬೆಗಳನ್ನು ಮಾಡಿ ಆಡುತ್ತಿದ್ದ ಆಟವನ್ನೂ
ಆ ಬೊಂಬೆಗಳನ್ನೂ
ಆ ಬೊಂಬೆ ಮಾಡುವ ಹುಡುಗಿಯನ್ನೂ
ಸೆರೆಹಿಡಿದದ್ದು ಕೂಡ ಇದೇ ಕಾಗದ ಕ್ಯಾಮರಾದಲ್ಲೇ.

ಯಾರೋ ಹೇಳಿದರು ಅಂತ ದೇವರನ್ನ ಹುಡುಕಿ ಹೊರಟೆ
ಸಿಕ್ಕಿದ
ಆದರೆ, ಪಾಪ ಅಳುತ್ತಿದ್ದ.
ಅಳುವ ದೇವರನ್ನ ಈ ಕ್ಯಾಮರಾದೊಳಗೆ ಸೆರೆಹಿಡಿದಿದ್ದೆ
ಫೋಟೋ ನೋಡಿದಾಗ
ದೇವರು ನಗುತ್ತಿದ್ದ.

ಯಾಕೆ ಹೀಗೆಲ್ಲಾ ಆಯಿತು/ಆಗುತ್ತೆ?

ಗುಡ್ಡದ ದಾಸಯ್ಯ  ಹೇಳಿದ

"ಜಗತ್ತು ಎಂಬೋದು ಬರೀ ಭಾಷೆ ಕಣ್ಮಗ
ಭಾಷೇನ ರಚಿಸಿದ್ದು ನಾನೆ ಅಂತ ನೀ ಅಂದ್ಕೋತೀಯ
ನಿನ್ನನ್ನ್ ರಚಿಸಿದ್ದು ತಾನೆ ಅಂತ ಭಾಷೆ ಅಂದ್ಕೊಳುತ್ತೆ

ನಿನ್ನ ಕಾಗದದ ಕ್ಯಾಮರ ಒಂದು ಪದ
ಇನ್ನು ನಿನ್ನ ಪ್ರಶ್ನೆ
ಭಾಷೆಯ ಸಿದ್ಧ ತಾರ್ಕಿಕ ನಿಯಮಗಳ ಮುಖಾಂತರ ಉದ್ಭವಿಸಿದ
ಮತ್ತೊಂದು ಪದ"

ನಂಬೋದು ಹೇಗೆ?

ಹೀಗಿರಲಾಗಿ,
ಈ ಕಾಗದದ ಕ್ಯಾಮರಾದಿಂದ ತೆಗೆದ ಚಿತ್ರಗಳೆಲ್ಲಕ್ಕೂ
ಜೀವ ಬಂದು
ನನ್ನನ್ನೇ ಬಿಂಬವೆಂದೂ
ಜೀವ ಬಂದ ಚಿತ್ರವೇ/ಪಾತ್ರವೇ ಸತ್ಯವೆಂದಿತು
ಚಿತ್ರಗಳ/ಪಾತ್ರಗಳ ಕೈ ಸೇರಿದ ಕ್ಯಾಮರಾಕ್ಕೂ ಜೀವ ಬಂದು
ಎಲ್ಲಾ ಚಿತ್ರಗಳು ನನ್ನದೇ ನಾನೇ ಸೆರೆಹಿಡಿದದ್ದು/ಸೃಷ್ಟಿಸಿದ್ದು
ಎ…

.........................

ಚರಿತ್ರೆ ಮ್ಯೂಸಿಯಂನಲ್ಲಿ ಬಂದಿಸಲ್ಪಟ್ಟಿರುತ್ತೆ
ಕೆಲವೊಮ್ಮೆ ದೂಳಿಡಿಯುತ್ತಿರುತ್ತೆ
ದೂಳು ಕೊಡವಲಿಕ್ಕೆ ಒಬ್ಬ ನೌಕರ, ಅವನಿಗೆ ಸಂಸಾರ, ಅದಕ್ಕೆ ಸಂಬಳ
ಅದಕ್ಕಾಗಿ ಪ್ರವೇಶ ಶುಲ್ಕ.
ಇದನ್ನ ಕೆಲವೊಮ್ಮೆ ಜನರು ಬದುಕು-ಜೀವನ ಅಂತ ಕರೆಯುತ್ತಾರಂತೆ.

.........................

ನೀನು ಸುಮ್ಮನೆ ಕೂಗುವ ಶಬ್ದವೊಂದು
ಪ್ರಪಂಚದ ಯಾವುದೋ ನಿಘಂಟಿನಲ್ಲಿ ಸ್ಥಾನ ದಕ್ಕಿಸಿಕೊಂಡಿರಬೊಹುದು
ಎಲ್ಲವನ್ನೂ ಕತೆಯನ್ನಾಗಿಸಬೇಕೆಂಬೊ ಚಟ ಯಾಕೆ?
ಯುದ್ದಕ್ಕೆ ಮೂಲಾನೇ ಕತೆಯ ಚಟ
ಸ್ವಲ್ಪ ಹೊತ್ತು ಸುಮ್ಮನೆ ಕೂತು ಬಿಡು

..........................

ನಾ ಬರೆದ ಕವನಕ್ಕೆ ಬಲಿಯಾದದ್ದು ನನ್ನ ತಪ್ಪೆ?
ರೂಪಕವನ್ನ ದಕ್ಕಿಸಿಕೊಳ್ಳಲಾರದ ನಿಷ್ಪ್ರಯೋಜಕನಾದೆನ?

ನನಗೆ ಗೊತ್ತು ಗುರುಗಳೆ,
ಎಲ್ಲರೂ ನನ್ನನ್ನೇ ನೋಡುತ್ತಿದ್ದಾರೆ.
ತಮ್ಮೆಲ್ಲಾ ತಪೋ ಶಕ್ತಿಯನ್ನೂ
ನನ್ನ ಸುಡಲಿಕ್ಕೆ, ಸುಟ್ಟು ಸ್ಮಾರಕವನ್ನ ಮಾಡಲಿಕ್ಕೆ
ನನ್ನ ಬಲಿಯನ್ನು ತ್ಯಾಗವೆಂದು ಘೋಷಿಸಲಿಕ್ಕೆ

ಬಾವಗೀತಾತ್ಮಕವಾಗುತ್ತಿದೆಯೆಂದು ಬೇಸರಿಸಿಕೊಳ್ಳಬೇಡಿ,
ಕವನ ಬರೆಯಲೇ ಬೇಕೆಂದು, ಎಂದೂ ನಾನೂ ಹೊರಡಲಿಲ್ಲ.

ನೀವೇ ಹೇಳಿದ್ದು ಗುರುಗಳೆ,
ಛಂದಸ್ಸನ್ನು ಮೀರುವ ಮುನ್ನ ಛಂದಸ್ಸನ್ನು ಅರಿ.
ಅರಿತಿದ್ದೀನೋ ಇಲ್ಲವೋ ನಾ ಅರಿಯೆ!?
ಮೀರುವ, ಛಿದ್ರಿಸುವ ಸಂಕಲ್ಪಕ್ಕೆ ಶರಣಾಗಿದ್ದೇನೆ.
ಬಲಿಯಾಗುವುದೇ ಆದರೆ,
ಇರಲಿ ಬಿಡಿ ಅದಕ್ಕೂ ಒಂದು ಸಾಲು.
ತಪ್ಪಿದ್ದರೆ ಕ್ಷಮಿಸಿಬಿಡಿ.

ಪಯಣ

ಹಿಂದಿನಿಂದ ಕೇಳುತ್ತಿತ್ತು-----
"ಯಾಕೆ?"
"ಗೊತ್ತಿಲ್ಲ."
"ಯಾಕೆ ಗೊತ್ತಿಲ್ಲ?"
"ಅದೂ ಗೊತ್ತಿಲ್ಲ."

ದೊಡ್ಡ ತಪ್ಪು. ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿದ್ದರೆ ಅದು ತಪ್ಪಲ್ಲ, ಆದರೆ, ಒಂದು ಪ್ರಶ್ನೆಯನ್ನ ಕೇಳಿದಾಗ ಆ ಪ್ರಶ್ನೆಯನ್ನ ಯಾಕೆ ಕೇಳಿದ ಅನ್ನೋದು ಗೊತ್ತಿರಬೇಕು. ಪ್ರತೀ ಪ್ರಶ್ನೆಯ ಹಿಂದಿನ ಕಾರಣವನ್ನ ನೀನು ನೀಡಲೇ ಬೇಕು. ಅದು ನಿನ್ನ ಕರ್ತವ್ಯ ಹಾಗೂ ಹೊಣೆ. ಪ್ರತೀ ಪ್ರಶ್ನೆಗೂ, ಉತ್ತರಕ್ಕೂ, ಕಾರಣವಿದ್ದೇ ಇರುತ್ತೆ. ಆ ಕಾರಣವನ್ನ ನೀನು ತಿಳಿಯಲೇಬೇಕು. ಅದು ನಿಯಮ. ನಿಯಮವನ್ನು ನಿರಾಕರಿಸುವ ಹಕ್ಕು ನಿನಗೆ ಇಲ್ಲ.

-------------------------------------------
ಈ ಸಂಸ್ಥೆಯಲ್ಲಿ ನನಗಿದು ಕಡೆಯದಿನ. ಒಂದು ವರ್ಷದ ಕೆಲಸದ ನಂತರ ಉನ್ನತ ವ್ಯಾಸಂಗಕ್ಕಾಗಿ ತೆರೆಳುತ್ತಿರುವುದರಿಂದ ಈ ಸಂಸ್ಥೆಯಲ್ಲಿ ಇನ್ನು ಶಿಕ್ಷಕನಾಗಿ ಮುಂದುವರೆಯಲು ಸಾದ್ಯವಿಲ್ಲ. ಅದಕ್ಕಾಗಿ ನೆನ್ನೆ ರಾಜೀನಾಮೆ ಸಲ್ಲಿಸಿ ಇಂದು ಹೊರಡುತ್ತಿದ್ದೇನೆ.
ಡೈರಿಯಲ್ಲಿ ಈ ರೀತಿ ಬರೆದೆ.
"ಇಂದು ವಿಧಾಯವನ್ನ್ ಹೇಳಬೇಕಿದೆ. ಸ್ವಗತ ಸಹಕಾರಿಯಲ್ಲ. ಸಲ್ಲದ ಸ್ಥಳಗಳಲ್ಲಿ ಸ್ವಗತಕ್ಕೆ ಇಳಿಯಬಾರದು. ಆದರೂ...."

ರಾಯರಿಗೆ ನನ್ನ ಪ್ರಶ್ನೆ ಅರ್ಥವಾಗಿತ್ತು ಅಂತ ಅನ್ನಿಸುತ್ತೆ.
"ವಿದಾಯದ ಈ ಕ್ಷಣ ಒಮ್ಮೆ ಹಿಂದೆ ನೋಡಿದಾಗ, ಅಚ್ಚರಿ, ಭಯ, ಕುತೂಹಲ, ಇಷ್ಟೇನ? ಇಷ್ಟೊಂದ?  ಕಾಡುತ್ತ ಹೋಗುತ್ತೆ.  ಕಡೆಗೆ ಅನುಭವ ಅನ್ನೋದೊಂದು…

ಆತ್ಮಕತೆ

೧ 
ಶಬ್ದವನ್ನ ಕೂಗಿ ಕರೆದೆ
ಬಂದಾಗ
ಗುರುತು ಸಿಕ್ಕಲಿಲ್ಲ.

ಪದಗಳೆಂಬೊ ಚಿಹ್ನೆಗಳ ರಾಶಿಯೊಳಗೆ ಹುದುಗಿ
ಮುಟ್ಟಿನೋಡಿದರೆ
ಸ್ಪರ್ಶಕ್ಕೆ ಸಿಕ್ಕಿದೆಯೆಂದೆನಿಸುತ್ತೆ
ಸ್ಪರ್ಶವೂ ಶಬ್ದದ ರೂಪವಾಗಿದ್ದರೆ?
ಪ್ರಶ್ನೆ ಭಯ ಹುಟ್ಟಿಸುತ್ತೆ
ಪ್ರಶ್ನೆ-ಭಯ ಎರೆಡೂ ಶಬ್ದಗಳೇ ಅಲ್ಲವ
ಅಂದುಕೊಂಡಾಗ
ಉತ್ತರವೂ ಶಬ್ದವಾಗಿ ಬಿಟ್ಟೀತಲ್ಲಾ
ಎಂದು ಗೊಂದಲವಾಗುತ್ತೆ.

ಯಾಕೋ
ಅಕ್ಷರವನ್ನು ಬರೆದುಬಿಟ್ಟೆ
ಹಲವೊಮ್ಮೆ ತಿದ್ದಿದೆ ಕೂಡ
ನನ್ನ ನೆನಪಿನಲ್ಲೀಗ ಬರೀ ಅಕ್ಷರಗಳೇ ಕೂತಿವೆ.

ವ್ಯಾಕರಣವಿಲ್ಲದ ಆಕಾಶ
ಭೂಮಿಯೆಂಬೋ ವಾಕ್ಯವನ್ನ ಕಟ್ಟಿತು
ವ್ಯಾಕರಣವನ್ನೇ ಕಟ್ಟಿ ಹಾಕೋಣವೆಂದಾಗ
ನನ್ನ ಹುಡುಗಿ ಅಡ್ಡ ಬಂದಳು

ಸ್ವ-ಕೇಂದ್ರಿತ ವೃತ್ತಾಂತದ ಗೋಳು
ಕಾಲದ ಮರು ಚರಿತ್ರೆ
ಅರ್ಥದ ಋಣ ಭಾರದ ಶೂಲಕ್ಕೆ
ಕಾರಣಕ್ಕೆ ಮೊರೆಹೋಗಲಾರೆ

ಆತ್ಮಕತೆಯ ಕಡೆಯ ಸಾಲನ್ನ
ಶಬ್ದಕ್ಕೆ ಅಗ್ನಿಸ್ಪರ್ಶಿಸುತ್ತಾ
ಆರಂಭಿಸುತ್ತಿದ್ದೇನೆ

ಸುಟ್ಟ ಶಬ್ದದ ಬೂದಿಯನ್ನ 
ವಿಭೂತಿಯನ್ನಾಗಿಸಿ
ಬೆತ್ತಲೆ ಮೈಗೆಲ್ಲ ಬಳಿದುಕೊಂಡು
ದೇವರ ರೂಪವಾಗಿ
ವ್ಯಾಕರಣ ನಿಯಮಗಳ ನಿಯಾಮಕನಾಗಿ
ಸೃಷ್ಟಿಯಾಗಿ, ಸ್ಥಿತಿಯಾಗಿ, ಲಯವಾಗಿ........

ಕತೆ

[ ಇಲ್ಲಿನ ಪಾತ್ರಗಳು ಹಾಗು ಸನ್ನಿವೇಶಗಳು ಕೇವಲ ಕಾಲ್ಪನಿಕ. ಯಾರನ್ನಾದರೂ, ಯಾವುದನ್ನಾದರೂ ಹೋಲುತ್ತಿದ್ದರೆ, ಅದಕ್ಕೆ ಈ "ಕತೆ" ಕಾರಣವಲ್ಲ ]

"ಅಜ್ಜಿ, ಕತೆ ಹೇಳಜ್ಜಿ..."
"ಯಾವ ಕತೇನೋ...?"
"ಯಾವುದೋ ಒಂದು ಕತೆ ಹೇಳಜ್ಜಿ"
"ಒಂದಾನೊಂದು ಕಾಲದಲ್ಲಿ, ಆ ಒಂದು ಊರಲ್ಲಿ...........................................................................................

-------------------೦----------------------೦-------------------------
ದಾಸಯ್ಯ ಅದೇ ಕಂಬಾಲರಾಯನ ಗುಡ್ಡದ ಮೇಲೆ ಕೂತಿದ್ದ.  ಅದೇ ಸ್ಥಿತೀಲಿ, ಯಾವಾಗಲೂ ಕೂತಂತೆ, ಯಾವಗಲೂ ನಿಂತಂತೆ ಹಾಗೇ ಇದ್ದ. ವಯಸ್ಸಾಗಿತ್ತು. ಕಾಲ ಚಲಿಸಿತ್ತು. ಅದರ ಗುರುತು ದೇಹದಲ್ಲಿ ಕಾಣುತ್ತಿತ್ತು. ಏನೇ ಬದಲಾದರೂ ದಾಸಯ್ಯ ಮಾತ್ರ ಹಾಗೇ ಕೂತಿದ್ದ. ಕಂಬಾಲರಾಯನ ಗುಡ್ಡ ಹಾಗೇ ಇತ್ತು, ಕಂಬಾಲರಾಯನೂ ಹಾಗೇ ಇದ್ದ. ನಾನು ಹುಡುಕಿ ಹೊರಟಿದ್ದೆ. ದಾಸಯ್ಯನ್ನ ಕಾಣಬೇಕಿತ್ತು. ಕತೆ ಬೇಕಿತ್ತು ನಂಗೆ.
ಕಂಬಾಲರಾಯನ ಗುಡ್ಡದ ಹತ್ತಿರಕ್ಕೆ ಬರುತ್ತಾ ಇದ್ದಾಂಗೆ ಅಲ್ಲೆ ಇದ್ದ ಗುಹೆ ಕಾಣಿಸ್ತು. ಇದೇ ಗುಹೇನ ತೋರಿಸಿ ಅಜ್ಜಿ ಕತೆ ಹೇಳ್ತಿದ್ಲು. ಈ ಗುಹೇಲಿ ಒಬ್ಬ ದೊಡ್ಡ ರಾಕ್ಷಸ ಇದ್ದಾನೆ. ಆ ರಾಕ್ಷಸ ನಮ್ಮನ್ನೆಲ್ಲಾ ತಿಂದಾಕ್ತಾನೆ. ಯಾವುದಕ್ಕೇ ಹಟ ಮಾಡಿದ್ರೂನು ಮನೇಲಿ ತೋರಿಸ್ತಾ ಇದ್ದದ್ದು ಈ ಗುಹೆ ಹಾಗು ಅದರೊಳಗಿರೋ ರಾಕ್ಷಸ. ಎಷ್ಟು ಕಲ…

ಸೃಷ್ಟಿ

ಚಿಕ್ಕೋನಿದ್ದಾಗ ನಾ ಬರೆದ ಅಪ್ಪ, ಅಮ್ಮ, ಮನೆಯ ಚಿತ್ರಗಳನ್ನ ನನ್ ಹುಡುಗೀಗೆ ಇಂದೇ ತೋರಿಸ್ತಿದ್ದೆ.
ಈಗ ತನ್ನ ಚಿತ್ರ ಬರಿ ಅಂತಾಳೆ, ಬರೆಯೋಕ್ಕಾಗುತ್ತ?
ನಾ ಕವಿ ಅಂತ ಗೊತ್ತಾಗಿ ಕವನ ಬರೆಯೋದು ಕಲಿಸು ಅಂತ ರಚ್ಚೆ ಹಿಡಿದಿದ್ದಾಳೆ.
ನನ್ ಹುಡುಗಿ ಬಸುರಿ ಈಗ
ತಾ ಹೆರುವಾಗ ಪಡೋ ನೋವನ್ನ ಕವನ ಆಗಿಸ್ಬೇಕಂತೆ.
ಸುದ್ದಿ ಮುಟ್ತು ನನ್ ಹುಡುಗೀಗೆ ಮಗೂನಂತೆ ನನ್ನೇ ಹೋಲುತ್ತಂತೆ ನನ್ನ ಮಗು
(ಈ ಕವನಾನ ನನ್ ಹುಡುಗೀಗೆ ಕೊಟ್ಟೆ)

ಕತೆ ಸಂಖ್ಯೆ ೩

{ಇಲ್ಲಿನ ಪಾತ್ರಗಳು ಕತೆ ಸಂಖ್ಯೆ ೧ ಹಾಗು ಸಂಖ್ಯೆ ೨ ಇಂದ ಮುಂದುವರೆದದ್ದು. ಈ ಕತೆಗೆ ಆ ಪಾತ್ರಗಳ ನೆನಪು ಅವಶ್ಯ.  ಮೂರೂ ಕತೆಯೂ ಸೇರಿ ಒಂದು ಕತೆಯಾಗಿ, ಅಥವಾ ಮುರೂ ಬೇರೆ ಬೇರೆಯಾಗಿ, ನನ ಬದುಕನ್ನ ಪ್ರವೇಶಿಸಿ ನನ್ನ ಬದುಕಲ್ಲಿ ಲೀನವಾಗಿದೆ. ಈ ಕತೆಯೊಂದಿಗೆ ಈ ಪಾತ್ರಗಳನ್ನ ಅಂತ್ಯಗೊಳಿಸುತ್ತಿದ್ದೇನೆ. ವಂದನೆಗಳು. }ಅಪ್ಪ ಬೆಳಗ್ಗೇನೆ ಫೋನ್ ಮಾಡಿದ್ರು, ರಘು ಮಾಮ ತೀರ್ಕೊಂಡ್ರು ಅಂತ. ಒಮ್ಮೆಗೆ ತೀವ್ರ ಬೇಸರ ಆಯ್ತು. ಕಡೇ ಸಾರಿ ನೋಡೋಕ್ಕೆ ಅಂತ ಹೋಗಿದ್ದೆ. ಆಗ ಅಪ್ಪ ಹೇಳ್ತಾ ಇದ್ರು, ಸಾಯೋವಾಗ ಅಪ್ಪಾನೆ ಜೊತೆಗಿದ್ರಂತೆ, ಅತ್ತೆ ಅಂತು "ಲೋ ಸೀನ, ಸತ್ತಿದ್ದಾನೆ ಬಿಡೊ" ಅಂತ ಅಂದೇ ಬಿಟ್ರಂತೆ. ಮತ್ತೆ ಮತ್ತೆ ಬೇಸರ ಆಗ್ತಿತ್ತು. *** "ಯಾವ ವ್ಯಕ್ತೀಗೂ ಆತನದೇ ಆದ ನೆಲೆ ಅನ್ನೋದು ಇಲ್ಲವೇ ಇಲ್ಲ. ಅದು ಬರೀ ಕಲ್ಪನೆ. ಇದೆ ಅನ್ನೋ ಭ್ರಮೆಯಲ್ಲಿ ಬದುಕೋದು ಅಷ್ಟೆ." "ಗುರುಗಳೇ(ನನ್ನ ಮಿತ್ರನಿಗೆ ನಾವು ಪ್ರೀತಿಯಿಂದ ಹೀಗೆ ಗುರುಗಳೆ ಅಂತ ಕರಿತೀವಿ) ಅದೇಗೆ ಸಾದ್ಯ? ಅದನ್ನ ನಾವು ಪ್ರಶ್ನಿಸೋಕ್ಕೂ ಆಗೋಲ್ಲ." "ಅರವಿಂದ, ನೆಲೆ ಅನ್ನೋದು, ಅರ್ಥ ಅನ್ನೋದು, ಎಲ್ಲವೂ ಒಂದೆ ಎಂಬಂತೆ ಕಾಣ್ತಾ ಇದೆ. ಬದುಕಿಗೆ ಒಂದು ಅರ್ಥ ಇದೆ, ಆ ಅರ್ಥಕ್ಕಾಗಿ ಈ ಹೋರಾಟ ಎಲ್ಲಾ ಎನ್ನೋದು ಸಿದ್ದಾಂತ. ಮಾರ್ಗ ಏನೇ ಇರಲಿ, ಆದರೆ ಅರ್ಥ ಅನ್ನೋದೊಂದಿದೆ ಅನ್ನೋದು ಎಲ್ಲರೂ ಒಪ್ಪುವ ಸಂಗತಿ. ಈಗ ಆ Axiom ಅನ್ನ ಪ್ರಶ್ನಿಸೋದು ಹೇಗೆ? ಅರ್…

ಮಂತ್ರ

ಇಲ್ಲಿ ಸಂಗತಿಗಳು ಸುಮ್ಮನೆ ಸಂಭವಿಸಿಬಿಡುತ್ತೆ.
೧ ಅರ್ಥವಾಗದ ಭಾಷೆಯ ಲಿಪಿ ಅವ್ಯಕ್ತ ಚಿತ್ರಗಳಂತೆ ಕಾಣುತ್ತೆ, ದೂಳಿಡಿದ ಹಳೆ X-rayಯನ್ನ ಬೆಳಕಿಗೊಡ್ಡಿದಾಗ ಬರೀ ಎಲುಬುಗಳೇ ಕಾಣುತ್ತೆ ಹೃದಯವಿಲ್ಲದಂತೆ, ಕಾರ್ಯಕಾರಣದ ಭ್ರಮನಿರಸನಕ್ಕೆ ಸೂಳೇ ಮಗುವಿನಂತೆ ಕವಿತೆ ಹುಟ್ಟುತ್ತೆ.
೨ ನನ್ನ ಕತೆಯ ಪಾತ್ರವೊಂದು ಸತ್ತಿದ್ದಕ್ಕೆ ಸ್ಮಶಾನಕ್ಕೋಗಿ ಬಂದು ಹತ್ತು ದಿನ ಸೂತಕದಲ್ಲಿದ್ದೆ.
೩ ಒಂದೂರಲ್ಲಿ ಒಬ್ಬ ಮನುಷ್ಯ ಇದ್ದ ನಾಟಕದ ಪಾತ್ರಕ್ಕೆ ಬಣ್ಣ ಹಚ್ಕೊಂಡು ಬದುಕ್ತಿದ್ದ ಒಬ್ಬ ಹುಡ್ಗಿ ಆ ಪಾತ್ರಾನ ನೋಡಿದ್ದೇ ಶರತ್ತೊಂದಾಕಿ ಮದುವೆಯಾಗಿಬಿಟ್ಳು "ರಾತ್ರಿ ಮಲಗೋವಾಗ ಆ ಪಾತ್ರದ ಬಣ್ಣದಲ್ಲೇ ಮಲಗ್ಬೇಕು" ಹುಡ್ಗಿ ತಾನೂ ಸುಂದರವಾಗಿ ಕಾಣಬೇಕೂಂತ ಕನ್ನಡೀಗೇ ಬಣ್ಣ ಹಚ್ಚಿ ನೋಡ್ತಾ ಕೂತ್ಲು.
೪ ಪ್ರತಿಮೆ ರೂಪಕಗಳೆಲ್ಲಾ ಕನ್ನಡಿಯೆದುರು ಸಿಂಗರಿಸಿಕೊಳ್ಳುತ್ತಿರುವಾಗ ಅರ್ಧ ಸುಟ್ಟ ಶವಕ್ಕೆ ಜೀವ ಬಂದಿದೆ ಹಸ್ತ ಮೈಥುನದಿಂದ ಮಕ್ಕಳನ್ನುಟ್ಟಿಸುವ ಮಾರುಕಟ್ಟೆಯಲ್ಲಿ ಬದುಕುತ್ತಿದ್ದೇನೆ ನಿನ್ನ ಮಾಯಾ ನವಿಲುಗರಿಯಿಂದಲಾದರೂ ಹುಟ್ಟಿಸಿಬಿಡು ನಿಜವಾದ ಗಂಡು-ಹೆಣ್ಣನ್ನ
ಅನಾಥ ಸಾವಿನ ಮೂಖ ಮೌನಕ್ಕೆ ಹುಟ್ಟು ತನ್ನ ತಾನೇ ಕಂಡು ಸಂಭ್ರಮಿಸಿತು ಅರ್ಥವೆಂಬೋ ಉನ್ಮಾದದಲ್ಲಿ ಆಕಾರಕ್ಕೆ ಧ್ಯಾನಿಸುತ್ತಿದ್ದೇನೆ
ಇಲ್ಲಿ ಸಂಗತಿಗಳು ಸುಮ್ಮನೆ ಸಂಭವಿಸಿಬಿಡುತ್ತ?ಮಹಾನವಮಿ

ಮಹಾನವಮಿ- "ಅಸ್ಮಿತೆಹಾಗೂಸ್ವಾತಂತ್ರ್ಯಗಳನಡುವಿನಜೀವಿತಪ್ರಜ್ಞೆ" ಅಂತ ಒಂದುಕವನಬರ್ದೆ.
ಮೊದಲಲ್ಲಿ, ಪ್ರಶ್ನೆ-ಉತ್ತರ-ಅದರನೋವೂಸಂಕಟ ಸತ್ಯ-ಮಿಥ್ಯ-ಅದರೊಂದಿಗಿಷ್ಟುಪರಮಸತ್ಯ, ಜೊತೆಗಿರ್ಲಿಅಂತ ಕೆಂಡದಲ್ಲಿಸುಟ್ಟಮನುಷ್ಯ ಅವ್ನಬೂದೀಲಿಅರಳಿದಹೂವಿಗೊಂದುದುಂಭಿ ಆದುಂಭಿಗಾಗಿಮನುಷ್ಯನಸರ್ವತಂತ್ರಪ್ರಯತ್ನ. (ಅದೇಮನುಷ್ಯಾನಅಥವಾಬೇರೆಯಾರಾದರೂಆಗಿರ್ಬೋದಾ...?)
ಕವಿತೇನಮುಂದುವರಿಸ್ಲೇಬೇಕು, "ಹುಡುಗಿಯಮಾತೆತ್ತದಕವಿತೇನಬರೆಸಿಬಿಡು" ಅಂತಕೇಳ್ಕೊಳ್ತಾ ತಾಯಿಮತ್ತೆಹುಡುಗಿ, ಒಂದಿಷ್ಟುಹಾಲು ಅಂತಏನೇನೋಬರ್ದು ಕಡೆಗೆಬರ್ದೆನೋಡೀ "ಬರೆಸಿಬಿಡು, ನಾಎಡವಿಬಿದ್ದತೆಲೆಬುರುಡೆಯಹಣೆಬರಹವನ್ನ ಒಂದುಕವಿತೆಯಾಗಿ"
ಕವಿತೇನೂಮುಗಿಸ್ಬೇಕು. "ಸತ್ತಹಲ್ಲೀನಆಯ್ಕೊಂಡುತಿಂತಿದ್ದಮನುಷ್ಯ ಮುಟ್ಟುನಿಂತಸೂಳೆಮನೇಗೋಗಿ ಆತ್ಮಹತ್ಯೆಮಾಡ್ಕೊಂಡ"
ಆಕಡೇಸಾಲಲ್ಲಿನಮ್ಮೂರದಾಸಯ್ಯಹೇಳ್ದ "ಮೀರ್ಬೇಕುಅಂತಂದ್ಕೊಂಡವ ಅನ್ಬವಾನೇಮೀರ್ಬಿಡ್ಬೇಕುಕಣಾ" ಅಂತೇಳಿ ಮುಗಿಸಿಬಿಟ್ಟೆ.
ನಿಜಕ್ಕೂ ಒಂದು ಕವನಾನ ಮುಗಿಸ್ಲಿಕ್ಕೆ ಆಗುತ್ತಾ ಅನ್ನೋದೂ ನಂಗೆ ತಿಳೀತಿಲ್ಲ ಆದ್ರೂ ನಾನೂ ಈ ಕವನಾನ ಮುಗಿಸ್ತಾ ಇದ್ದೀನಿ....

ಕಥೆ ಸಂಖ್ಯೆ ೨

{ಆತ್ಮೀಯರೆ,
ಕಥೆ ಸಂಖ್ಯೆ ೨ ರಲ್ಲಿ, ಕಥೆ ಸಂಖ್ಯೆ ೧(ಕಥೆ ಸಂಖ್ಯೆ ೧) ರ ಹಲವು ಪಾತ್ರಗಳು, ಹಾಗು ಸನ್ನಿವೇಶಗಳ ಉಲ್ಲೇಖವಾಗುವುದರಿಂದ, ಕಥೆ ಸಂಖ್ಯೆ ೨ ರ ಓದಿಗೆ ಕಥೆ ಸಂಖ್ಯೆ ೧ ಅವಶ್ಯ. ಆದ್ದರಿಂದ, ಮೊದಲು ಕಥೆ ಸಂಖ್ಯೆ ೧ ನ್ನ ಓದಿ, ನಂತರ ಕಥೆ ಸಂಖ್ಯೆ ೨ನ್ನ ಓದಿ..... }ತುಂಬಾ ದಿನಗಳಿಂದ ಕತೆ ಬರೀಬೇಕು ಅಂತ ಅಂದ್ಕೊಳ್ಳೋದು, ಬರೀತ ಕೂರೋದು, ಆದ್ರೆ ಅದೇನಾಗುತ್ತೋ ಏನೋ, ಬರ್ದಿದ್ದಾದಮೇಲೆ ಸರೀ ಇಲ್ಲ ಅಂತ ಹೇಳಿ ಹರಿದು ಹಾಕೋದು. ಹೀಗೇ ನಡೀತಾ ಇತ್ತು. ಆದರೆ, ಯಾಕೋ ಕತೇ ಬರೀಬೇಕು ಅನ್ನೋ ಜಿದ್ದು ಮಾತ್ರ ಹೋಗಲೇ ಇಲ್ಲ. ಹೇಗಾದ್ರೂ ಬರೀಲೇ ಬೇಕು ಅನ್ನೋ ಹಸಿವು ಕಾಡ್ತಾ ಇತ್ತು. ಹೀಗೆ ಕತೆ ಬರೀಬೇಕು ಅಂತ ಅಂದ್ಕೊಂಡು ಕೂತಾಗ, ಕತೆ ನಿಜ್ವಾಗಿ ನಡೆದಿರಬೇಕ? ಅಥವಾ ಅದು ಕಲ್ಪನೆ ಮಾತ್ರವಾಗಿದ್ರೆ ಸಾಕಾ? ಅಥವಾ ಕಲ್ಪನೆ ಹಾಗೂ ಸತ್ಯಾ ಎರೆಡೂ ಬೆರೆತಿರಬೇಕ? ಅನ್ನೋ ಪ್ರಶ್ನೆಗಳು ಕಾಡಿದ್ರೂನೂ, ನಾನೇನೂ ಹೆಚ್ಚಿಗೆ ತಲೆ ಕೆಡಿಸ್ಕೊಳ್ಳಲಿಲ್ಲ. ನಾನೇನೂ ಈ ಸಾಹಿತ್ಯ ಮೀಮಾಂಸೆ, ವಿಮರ್ಷೆ ಹಾಳೂ- ಮೂಳೂ ಓದಿದವ್ನಂತೂ ಅಲ್ಲವೇ ಅಲ್ಲ. ಆದ್ರಿಂದ ಅದ್ರ ಬಗ್ಗೆ ಎಲ್ಲಾ ಹೆಚ್ಚಿನ ತಲೆ ಕೆಡಿಸ್ಕೊಳ್ಳೋಕೆ ಹೋಗಲೇ ಇಲ್ಲ. ಕಥೆ ಸಂಖ್ಯೆ ೧ ನ್ನ ಬರೆದಾಗ, ಅದಕ್ಕೆ ಏನು ಹೆಸರಿಡಬೇಕು ಅಂತ ತಿಳೀಲೇ ಇಲ್ಲ. ಇನ್ನೂ ಮುಖ್ಯವಾಗಿ ಹೇಳೋದಾದರೆ ನಂಗೆ ಹೆಸರಿನಲ್ಲಿ ನಂಬಿಕೆ ಇಲ್ಲ. ಯಾಕೆ ಹೆಸರು ಬೇಕು ಅಂತ.? ಆದರೂ ಮುಂದೆ ಏನಕ್ಕಾದರೂ ಗುರುತಿಸಬೇಕು ಅಂತನ್ನಿಸಿದರೆ ಇರಲಿ ಅಂ…