ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

September, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮುಖಾಮುಖಿ

"ಬೆಳಗಾಯ್ತು ಏಳೋ, ಇಗೋ ಏಳಲಿಲ್ಲ ಅಂದ್ರೆ ನೀರು ತಗೊಂಡು ಬಂದು ಸುರೀತೀನಿ"
ಅಂತ ಅಣ್ಣ(ಅಪ್ಪ) ಎಷ್ಟೇ ಹೇಳ್ತಾ ಇದ್ದರೂನೂ ಕಾಲ ಬಳಿ ಇದ್ದ ಹೊದಿಕೆಯೊಳಗೆ ಮುಖ ಅಡಗಿಸಿಟ್ಟು ಮಲಗಿಬಿಡೋನು. ಅಪ್ಪ ಬೇರೆ ಕಡೆ ಹೋದರೆ ಅಜ್ಜಿ ತನ್ನದೂ ಹೊದಿಕೆ ಹೊದ್ದಿಸಿ ಮುದ್ದಿಸೋಳು. ಆ ಚಳೀಲಿ ಬೆಚ್ಚಗೆ ಹೊದಿಕೆ ಹೊದ್ದು ಮಲಗಿರ್ಬೇಕಾದ್ರೆ ಅದೆಷ್ಟು ಕನಸುಗಳೋ, ಕಬ್ಬಡಿ ಆಡೋವಾಗ ನಾಲ್ಕು ಜನನ್ನ ಒಬ್ಬನೆ ಎತ್ತಿ ಕೆಡವಿದ ಹಾಗೆ, ಕೈಗಳನ್ನ ಪಟ ಪಟ ಅಂತ ಹಕ್ಕಿತರ ಹೊಡೀತ ಹೊಡೀತ ಮೇಲೆ ಹಾರ್ತ ಇರೋ ಹಾಗೆ, ಮಾಯಬಜಾರ್ ಸಿನಿಮಾದಲ್ಲಿ ಆಯಪ್ಪನ  ಬಾಯೊಳಗಡೆಗೆ ಅಷ್ಟೊಂದು ತಿಂಡಿ ಅದರಷ್ಟಕ್ಕೆ ಅದೇ ಹೋಗ್ತಿತ್ತಲ್ಲ ಆ ರೀತಿ, ಅಜ್ಜಿ ಅಮ್ಮ ತಿಂಡೀನ ತಂದಿಡ್ತಾ ಇದ್ದರೆ ಬಾಯೊಳಗೆ ನೇರವಾಗಿ ಹೋಗ್ತ ಇರೋ ರೀತಿ, ನಾಲ್ಕು ಏರೋಪ್ಲೇನ್ ಚಿಟ್ಟೆಗಳನ್ನ ಹಿಡ್ಕೊಂಡು ಆಡಿಸ್ತಾ ಇರೋ ರೀತಿ,  ಕನಸು ಕಾಣ್ತನೇ ಕನಸಿನಲ್ಲಿ ಕನವರಿಸ್ತಾ, ಏಡಿ ಅಂತಾನೋ, ಕಂಬಾಲಪ್ಪನ್ ಗುಡ್ಡ ಅಂತಾನೋ ಅಂದು ಬಿಡೋನು. ಅಮ್ಮಂಗೆ ಕೇಳಿಸಿದ್ರೆ
" ಯಾಕೋ ನೆನ್ನೆ ಏಡಿ ಹಿಡೀಲಿಕ್ಕೆ ಹೋಗಿದ್ಯ, ಇಲ್ಲ ಕಂಬಾಲಪ್ಪನ್ನ ಗುಡ್ಡಕ್ಕೆ ಹೋಗಿದ್ಯ, ನಿಮಣ್ಣಂಗೆ ಹೇಳ್ತೀನಿ, ಕಾಲು ಮುರೀತಾರೆ"
ಅಂತ ಬೆಳೆಗ್ಗೇನೆ ಶುರುಮಾಡಿಬಿಡುತ್ತಿದ್ದಳು. ಹೀಗೆ ಕನಸಿನ ಲೋಕಕ್ಕೂ ವಾಸ್ತವದ ಲೋಕಕ್ಕೂ ವ್ಯತ್ಯಾಸ ಅರಿಯದೆ, ಆ ಕನಸಿನಲ್ಲೆ ಇರಬೇಕಾದರೆ, "ವೆಂಕಟರಮಣ ಗೋವಿಂದಾ ಗೋssವಿಂದ" ಅಂತ ಜೋರು ಜಾಗಟೆ …