ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

July, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

.......

ಮಳೆಗೆ ಮುಖವೊಡ್ಡಬೇಕು,
ಎದುರಿಗೆ ನದಿ ಹರಿಯುತ್ತಿರಬೇಕು, ಇಲ್ಲವ ಸಮುದ್ರವಿರಬೇಕು, ಅಥವಾ ದಟ್ಟ ಕಾಡಮಧ್ಯದಲ್ಲಿರಬೇಕು,
ನಿನ್ನೊಡಲಾಳದಲ್ಲಿ ಕಾವು ಪಡೆಯಲಿಕ್ಕೆ.
ಹುಡುಗೀ, ನಾನು ನೀನೇ ಇಟ್ಟ ಮೊಟ್ಟೆ
ಒಡೆಯಲಿ ಬಿಡು ಪ್ರಾಕೃತಿಕವಾಗಿ ನೀ ನೀಡ್ವ ಕಾವುಗೆ
ನೋಡು, ನೀನೇ ನೋಡು, ಮರಿಯಲ್ಲ,
ಸಹಸ್ರಾಕ್ಷ ಪುರುಷ ನಾನೇ ಅದು.
ಪ್ರಕೃತಿಯೆ ಸಾಕ್ಷಿ, ಅದುವೇ ಪ್ರಜ್ಞೆ

.......

ಬುದ್ಧ ಹಾಗೇ ಕೂತಿದ್ದ.
ಹೇ.., ತಥಾಗತ  ಹೇ.., ತಥಾಗತ
ಬುದ್ಧ ಹಾಗೇ ಕೂತಿದ್ದ.
ಮೃಣನ್ಮಯಿ, ಸಾಲಿನ ಅರ್ಥ ಕೇಳುತ್ತಾರೆ
ಬುದ್ಧನನ್ನ ಅಲ್ಲೇ ಬಿಟ್ಟು ನಾ ನೆಡೆದು ಬಿಟ್ಟೆ.

.......

ಅರ್ಥ ಎಂದರೆ?
ಕತ್ತಲ ರಾತ್ರಿಯಲ್ಲಿ,
ಎಲೆ ಉದುರಿದ ಮರದ ಕೆಳಗಲ್ಲಿ,
ನಿಂತು
ತಲೆಯಿತ್ತಿ ಕಂಡಾಗ
ನಕ್ಷತ್ರಗಳೆಲ್ಲಾ ಬಂದಿಸಲ್ಪಟ್ಟಂತೆ ಕಂಡವು

ಅನಂತ ಸ್ವಾತಂತ್ರ್ಯದೆಡೆಗೆ......

ನನ್ನ ಬದುಕಿನ ಅರ್ಥವೇನು? ಇಷ್ಟಕ್ಕೂ ಮನುಷ್ಯ ಬದುಕಿಗೆ ಅರ್ಥ ಎಂಬೋದು ಇದೆಯ? ಯಾವುದು ನನ್ನನ್ನು ಈ ಹುಟ್ಟಿನ ಸಾರ್ಥಕ್ಯವನ್ನ ನಿರೂಪಿಸುತ್ತದೆ? ಪ್ರತೀ ಬಾರಿಯೂ ನಾನು ಇಡುವ ಪ್ರತೀ ಹೆಜ್ಜೆಯ ದಿಕ್ಕನ್ನ ಈ ಪ್ರಶ್ನೆಗಳು ನಿಯಂತ್ರಿಸುತ್ತಿವೆ. ಬದುಕಿನ ಅರ್ಥವನ್ನ ಅರಿಯುವುದಲ್ಲದೆ ಈ ಬದುಕಿಗೆ ಉದ್ದೇಶವೇ ಇಲ್ಲ ಎಂದು ಒಂದು ದಿಕ್ಕಿನಲ್ಲಿ ಅನ್ನಿಸಿದರೆ, ಮತ್ತೊಂದು ದಿಕ್ಕಿನಲ್ಲಿ ಮನುಷ್ಯ ಬದುಕಿಗೆ ಅರ್ಥ ಎಂಬೋದು ಇದೆಯಾ ಅನ್ನೋ ಪ್ರಶ್ನೆಯೂ ಸೇರುತ್ತದೆ. ಒಟ್ಟಿನಲ್ಲಿ ಸದ್ಯ, ಬದುಕಿನ ಧ್ವನಿ ಗ್ರಹಿಕೆಯ ಮಾರ್ಗಗಳನ್ನ ಹುಡುಕಿ ಹೊರಟವನಿಗೆ ಧ್ವನಿ ಗ್ರಹಿಕೆಗೆ ಯಾವುದೇ ಮಾರ್ಗಗಳಿಲ್ಲ ಎಂಬೋ ಹಂತಕ್ಕೆ ಬಂದಿದ್ದೇನೆ. ಅದರೂ ಬದುಕು ಎಂಬೋದು ಅತ್ಯಂತ ನಿಗೂಢವೂ ಸಂಕೀರ್ಣವೂ ಆದ ಸಂರಚನೆಯಾಗಿದೆ. ಹೀಗೆ ಯಾವುದೋ ಧ್ವನಿಯ ಜಾಡನ್ನ ಹುಡುಕಿ ಹೊರಟವ ಹಲವು ಬಾರಿ ಒಂಟಿಯಾದೆ, ನನ್ನ ಮಾತು ಯಾರಿಗೂ ಕೇಳಲಿಲ್ಲ. ಹಲವು ಬಾರಿ ಹೇಳಲೂ ಕೂಡ ಆಗಲೇ ಇಲ್ಲ. ಆಗಲೇ ಬಹುಶಃ ನಾನು ಸಾಹಿತ್ಯ ಹಾಗು ಬರವಣಿಗೆಯನ್ನ ರೂಡಿಸಿಕೊಂಡೆ ಅಂತ ಅನ್ನಿಸುತ್ತೆ. ಏಕಾಂಗಿಯಾಗಿದ್ದೂ ಒಂಟಿತನವನ್ನ ಮೀರಲಿಕ್ಕೆ ನನಗೆ ಸಾಹಿತ್ಯ, ಬರವಣಿಗೆ ಬೇಕಾಯಿತು, ಆದ್ದರಿಂದ ಬರೆದೆ. ಈಗಲೂ ಬರೆಯುತ್ತಿದ್ದೇನೆ. ಅನುಭವ ನಿರೂಪಣೆ ಹಾಗು ಸಂವಹನದಿಂದ ಪಡೆವ ಅರಿವು ಮನುಷ್ಯನನ್ನ ಮನುಷ್ಯನನ್ನಾಗಿಸುತ್ತೆ. ನನ್ನ ಎಲ್ಲಾ ಅಹಂಕಾರವನ್ನ, ನಾನೆಂಬೋ ದರ್ಪವನ್ನ ಹೋಗಲಾಡಿಸಿ ಮೃಗಕ್ಕಿಂತಲೂ ಹೀನನಾಗುವ ಮನುಷ್ಯನ ಮನಸ…