ವಿಷಯಕ್ಕೆ ಹೋಗಿ

ಕಲ್ಲಲಿ ಕಂಡ ಚೈತನ್ಯ


ಮೊದಲಿಗೆ ನಾನು ಫೋಟೋಗ್ರಾಫಿಯನ್ನ ಇಷ್ಟ ಪಟ್ಟವನೇ ಅಲ್ಲ. ಅದಕ್ಕೆ ಕಾರಣವೂ ಇತ್ತು. ಕಣ್ಣೆದುರಿಗೆ ಕಾಣುತ್ತಿರುವುದನ್ನ ನೇರವಾಗಿ ಕಾಣಬೇಕು ಹಾಗು ಅನುಭವಿಸಬೇಕು ಎಂದೇ ಭಾವಿಸಿದ್ದೆ. ಆದ್ದರಿಂದ ಕ್ಯಾಮರ ಎಂಬೋದು ಎದುರುಗಿನ ವಾಸ್ತವವನ್ನ, ಸೌಂದರ್ಯವನ್ನ ಕಾಣಲು ಅಡ್ಡಿ ಎಂದು ನಂಬಿದ್ದೆ. ನಂತರ ಸಾಹಿತ್ಯ ಹಾಗು ನಾಟಕ, ಒಟ್ಟಾಗಿ ಕಲೆಯ ತಾತ್ವಿಕತೆಯಲ್ಲಿ, ಒಟ್ಟೂ ಕಲೆಯ ಪ್ರಸ್ಥುತತೆ, ಕಲೆಯು ನಮಗೇಕೆ ಎಂಬೋ ಪ್ರಶ್ನೆಯಲ್ಲಿದ್ದಾಗ ನನಗೆ ಒಂದು ಸಂದೇಹ ಶುರುವಾಯಿತು. ಎಲ್ಲಾ ಕಲೆಗಳು ನಮ್ಮದುರಿಗೆ ನಡೆದದ್ದನ್ನು, ಅಥವ ನಡೆದು ಹೋದದ್ದನ್ನು, ಮತ್ತೆ ನಮ್ಮೆದುರಿಗೆ ಇಡಲು ಕಾರಣವೇನು ಎಂಬೋದು.  ಸಾಹಿತ್ಯ, ಮುಖ್ಯವಾಗಿ ಕಾದಂಬರಿ ಅದು ಆಗಲೇ ನಡೆದು ಹೋದ ಅಥವ ನಮ್ಮೆದುರಿಗೆ ನಡೆಯುತ್ತಿರುವುದನ್ನ ಮತ್ತೆ ನಮ್ಮ ಮುಂದೆ ಇಡುತ್ತದೆ. ಇದೇ ರೀತಿ ನಾಟಕ ಕೂಡ ಅಲ್ಲವೆ ಅಂದೆನಿಸಿತು. ಅಂದರೆ ನನ್ನ ಗ್ರಹಿಕೆಗೆ ಕಲೆ ಸಾಹಿತ್ಯ ಎರೆಡೂ ನಡೆದದ್ದನ್ನ, ನಡೆಯುತ್ತಿರುವುದನ್ನ ಮತ್ತೆ ನಮ್ಮ ಎದುರಿಗೆ ಇಡುತ್ತವೆ . ಹೀಗಾಗಿ ಕಲೆ ಹಾಗು ಸಾಹಿತ್ಯ ಎರೆಡೂ ನಮಗೆ ನೀಡೋದು ಬದುಕಿನ ಫೋಟೋವನ್ನಲ್ಲವೆ ಎಂದೆನಿಸಿತು. ಆಗ ನೇರವಾಗಿ  ಕ್ಯಾಮರಾದಲ್ಲಿ ಯಾಕೆ ಕಾಣಬಾರದು, ಹಾಗೆ ಕ್ಯಾಮರಾ ಕಣ್ಣಿಂದ ಜಗತ್ತನ್ನ ಕಾಣೋದು ಕಲೆಯ, ಸಾಹಿತ್ಯದ ಬಗೆಗಿನ ಒಟ್ಟಾಗಿ, ಬದುಕಿನ ಬಗೆಗಿನ ಒಳನೋಟವನ್ನ ನೀಡಬಹುದಲ್ಲವೆ ಎಂದು ಕ್ಯಾಮರ ತೆಗೆದುಕೊಂಡು ಹೊರಟೆ.

ನಿತ್ಯವೂ ,ನಿರಂತರವೂ ಬದಲಾಗುತ್ತಿರುವ ಪ್ರಕೃತಿಯನ್ನ ಅದೇಕೋ ಕ್ಯಾಮರಾದಲ್ಲಿ ನನಗೆ ಸೆರೆಹಿಡಿಯಲಾಗಲಿಲ್ಲ. ಪ್ರಕೃತಿಯ ಮುಂದೆ ನಿಂತಾಗ ನನಗೆ ಫೋಟೋ ತೆಗೆಯಲು ಅಷ್ಟಾಗಿ ಆಗುತ್ತಿರಲಿಲ್ಲ. ನೇರ ಕಣ್ಗಳಿಂದಲೆ ನಾನು ಕಾಣಲು ಬಯಸುತ್ತಿದ್ದೆ. ಹಾಗಾದಾಗ ಐತಿಹಾಸಿಕ ಸ್ಮಾರಕಗಳು ನನ್ನನ್ನು ಆಕರ್ಷಿಸಿದವು, ಎಂದೋ ನಡೆದುಹೋದ ಎನ್ನಲಾದ, ಬಿದ್ದು ಹೋಗಿರುವ ಕೇವಲ ಕಲ್ಲುಗಳಲ್ಲಿ ಜೀವಂತ ನಾದ ಹೊಮ್ಮುತ್ತಿತ್ತು. ಆದ್ದರಿಂದ ಕ್ಯಾಮರ ತೆಗೆದುಕೊಂಡು ಹಂಪಿ, ಕಮಲಾಪುರಕ್ಕೆ ಹೊರಟೆ ಅಲ್ಲಿ ನಾಲ್ಕು ದಿನಗಳ ಕಾಲ ಕಳೆದು, ದೂರದ ಆಂದ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಲೇಪಾಕ್ಷಿ ಎಂಬೋ ಊರಿನಲ್ಲಿ ಪೂರ್ಣವಾಗದ ಪುರಾತನ ದೇವಾಲಯವಿದೆಯೆಂದು ತಿಳಿದು ಅಲ್ಲಿಗೆ ಹೋಗಿ ಕೆಲವು ಫೋಟೋಗಳನ್ನ ತೆಗೆದಿದ್ದೇನೆ.

ಫೋಟೋ ತೆಗೆವಾಗ, ಹಾಗು ತೆಗೆದ ನಂತರದ ಅನುಭೂತಿ ಅನನ್ಯ. ತೆಗೆದವನಿಗೆ ಮಾತ್ರ ಗೊತ್ತು. ನನಗೆ ಗೊತ್ತಾಯಿತು. ಅದರಿಂದ ಒಂದು ಸಾಹಿತ್ಯ ಕೃತಿ ಎಂದರೇನು, ನಾಟಕ ಕಲೆ ಎಂದರೇನು ಹಾಗು ನಾಮಗೇಕೆ ನಮ್ಮ ಬಿಂಬವನ್ನ ಕಾಣಲು ಇಚ್ಚಿಸುತ್ತೇವೆ, ಎಂಬ ಎಷ್ಟೋ ಪ್ರಶ್ನೆಗಳಿಗೆ ಉತ್ತರಗಳು ಸಿಕ್ಕಿದವು.
ಇನ್ನೂ ಬರೆಯುತ್ತಾ ಹೋದರೆ ಪದಗಳೇ ಆಗುತ್ತದೆ, ಆದ್ದರಿಂದ ಕೆಳಗೆ ಹಲವು ಫೋಟೋಗಳಾನ್ನ ನೀಡಿದ್ದೇನೆ. ಇದು ಫೋಟೋಗ್ರಫಿಯಲ್ಲಿ ನನ್ನ ಮೊದಲ ಪ್ರಯತ್ನ.
[ಇವು ಐತಿಹಾಸಿಕ ಛಾಯಾಚಿತ್ರಗಳಾಗಿರುವುದರಿಂದ ಹಾಗು ಹಂಪಿಯ ವಿಜವನಗರ ಸಾಮ್ರಾಜ್ಯದ ಛಾಯಾಚಿತ್ರಗಳಾಗಿರುವುದರಿಂದ, ಇತಿಹಾಸದಲ್ಲಿ ಆಸಕ್ತಿ ಇರುವವರು ಸಂಪರ್ಕಿಸಿದರೆ ಹಲವು ಛಾಯಾಚಿತ್ರಗಳನ್ನ ತಾವು ಪಡೆಯಬೊಹುದು. ಅವುಗಳು ಫೋಟೋಗ್ರಫಿ ಕಲೆಯೊಳಗೆ ಬರುವುದಿಲ್ಲವೆಂದು ಇಲ್ಲಿ ನೀಡಿಲ್ಲ. ಶಿಲ್ಪಕಲೆ, ಗೋಪುರಗಳು, ನೀರಾವರೀ ವ್ಯವಸ್ತೆ, ಹೀಗೆ ಇತಿಹಾಸ ಹಾಗು ವಾಸ್ಥುಶಿಲ್ಪಕ್ಕೆ ಸಂಬಂದಪಟ್ಟವುಗಳಾಗಿರುತ್ತವೆ, ಆಸಕ್ತಿ ಇದ್ದಲ್ಲಿ ನನ್ನನ್ನ ಸಂಪರ್ಕಿಸಿ]


ಕಾಮೆಂಟ್‌ಗಳು

 1. ಅಣ್ಣೋ ಬರೀ ಪಟಾ ತೋರುಸ್ಬುಟ್ಟಿ `ಪುರಾಣಾ ಬೇಕಾದ್ರೆ' ಕ್ಯೋಳ್ರೀ ಅನ್ನೋದ್ ಸರಿ ಹೋಯ್ಕಿಲ್ಲ. ಓಗದ್ ಓಗಿದಿರಾ ಮತ್ತನುಭೋವಾ ಸಣ್ಣ್ಕ್ಕಿರ್ತ್ತಾ? ವಸೀ ಸ್ತಳ್ಪುರಾಣಾ ಪ್ರವಾಸ ಕತ್ನಾ ಬರ್ದ್ರೆ ನಿಮ್ಗಂಟೇನ್ ಓಗೋದೂ? ಒಂದ್ ಮಾದ್ರೀ ನೋಡೋಕ್ ನಮ್ ಡಾಕುಟ್ರಪ್ಪಾನ್ (www.drkrishi.com) ಪುಟಾ ತೆರ್ರುದ್ ನೋಡ್ರೀ. ಕೊನೇದಾಗಿ ನನ್ನ್ ಮಟ್ಗೇ ಎಲ್ಡು ವಿವ್ರಾಣೇ: ಕಿರಿಸ್ಣದೇವ್ರಾಯ್ನ ಎಂಡ್ರು ಕಾಮ್ಲಾದೇವಿ ಎಸುರು ಒತ್ತಿರೋ ಊರು ಕಾಮಲಾಪುರ. ಇದನ್ನ್ ನಮ್ಮ ತಾವ್ರೆ ಪಕ್ಸದವರ್ಗೆ ಪಿರೀತಿ ಹುಟ್ಟೋ ಹಂಗೆ ಕಮಲಾ ಪುರ ಮಾಡ್ಬ್ಯಾಡ್ರೀ. ಮತ್ತೆ, ನಮ್ಮ ರಾಮಣ್ಯದಾಗ್ ಬರ್ತಾನಲ್ಲಾ ಜಟಾಯೂ ಅವ್ನ್ ಸತ್ತ ಜಾಗಾಂತಾನೇ ಲೇಪಾಕ್ಸಿ ಪುರಾಣಿಕ್ರು ಕೊರೀಲಿಲ್ವಾ? (ಲಯಮಾಯಿನ ಪಕ್ಷಿ> ಲೇಪಾಕ್ಸಿ) ಎಲ್ಲಾ ಬಿಡ್ಬಿಡ್ಸೀ ಬರೀರೀ. ಇಲ್ಲೂ ಮುದ್ರಣ್ ಮಾದ್ಯಮದ ಅಕ್ಸರಾ ಸಂಕೆ, ಪುಟದಮಿತಿ ಹೇರೋನ್ ಯಾವನವನು, ಬರ್ಲೀ ನೋಡ್ತೀನಿ ನಾನು ಒಂದು ಕೈನಾ :-)
  ಕಾಡ್ಮನ್ಸಾ

  ಪ್ರತ್ಯುತ್ತರಅಳಿಸಿ
 2. ಪ್ರಿಯರೆ,
  ತಮ್ಮ ಆಭಿಪ್ರಾಯಕ್ಕೆ ವಂದನೆಗಳು. ನಾನು John Fritz ನ Hampi ಪುಸ್ತಕವನ್ನ ಆಕರವನ್ನಾಗಿಸಿಕೊಂಡಿದ್ದೆ. ಅದರಲ್ಲಿ Kamalapura ಅಂತ ಇದ್ದಿದ್ದಕ್ಕೆ ಅದು ಕಮಲಪುರ ಎಂದೇ ಭಾವಿಸಿದ್ದೆ. ನನಗೆ ಅದು ಕಾಮಲಪುರ ಎಂದು ಗೊತ್ತಿರಲಿಲ್ಲ. ತಮ್ಮ ಮಾಹಿತಿಗೆ ವಂದನೆಗಳು. ತಪ್ಪಾಗಿದ್ದಕ್ಕೆ ಕ್ಷಮೆಯಿರಲಿ. ಮತ್ತು ಲೇಪಾಕ್ಷಿ ನೀವು ಹೇಳಿದ ಅದೇ ರಾಮಾಯಣದ ಪಾತ್ರ ಬರುವ ಊರು.

  ಮೊದಲಿಗೆ ಹಂಪಿಯ ಬಗ್ಗೆ ಒಂದು ಪ್ರವಾಸ ಕಥನದ ರಿತಿಯಲ್ಲಿ ಬರೆಯಬೇಕು ಎಂದು ಕೊಂಡಿದ್ದೇನೋ ನಿಜ. ನಂತರ ಹಂಪಿಯ ಬಗ್ಗೆ ಇನ್ನೂ ಪೂರ್ಣ ವಿವರಗಳೊಂದಿಗೆ ಮಾಹಿತಿಪೂರ್ಣವಾಗಿ ಬರೆಯಬೇಕೆಂದೆನಿಸಿತು. ಅದಕ್ಕಾಗಿ ಕೆಲವು ಪುಸ್ತಕಗಳನ್ನು ಓದುತ್ತಿದ್ದೇನೆ ಹಾಗು ಮಾಹಿತಿಯನ್ನ ಸಂಗ್ರಹಿಸುತ್ತಿದ್ದೇನೆ. ಇದು ಕೇವಲ ಫೋಟೋಗ್ರಫಿಯ ಬಗ್ಗೆ ಮಾತ್ರ ಬರೆದದ್ದು. ಅಷ್ಟೆ.
  ಸದ್ಯ ನನಗೆ ಆಕರ ಗ್ರಂಥಗಳ ಅಭಾವ ಅನುಭವಿಸುತ್ತಿದ್ದೇನೆ.
  ಸದ್ಯ ನಾನು ವಿಜಯನಗರದ ಇತಿಹಾಸಕ್ಕಾಗಿ,
  1."South Indian History" by Nilakanta Shastry
  2."Forgotten Empire" by Robert Sevell
  ಆದಾರವಾಗಿಟ್ಟುಕೊಂಡು ಓದುತ್ತಿದ್ದೇನೆ.

  ಆದರೆ ಹಂಪಿಯ ಬಗೆಗಿನ ಪುಸ್ತಕಗಳಾಗಿ ಕೇವಲ ಎರಡು ಪುಸ್ತಕಗಳು ಮಾತ್ರ ಸಿಕ್ಕಿರುತ್ತವೆ
  3. "Hampi" by John M Fritz and George Michell
  4. "Hampi Ruins: Described and illustrated" by Longhurst

  ಆದರೆ ನನಗೆ ಹಂಪಿಯನ್ನ ಅದರ ಇತಿಹಾಸ, ವಾಸ್ತುಶಿಲ್ಪ, ಕಲೆ, ಸಾಹಿತ್ಯ ಹೀಗೆ ಎಲ್ಲವನ್ನೂ ಒಟ್ಟುಗೂಡಿಸಿ ನೀಡಬೇಕು ಎಂಬೋ ಆಸೆ ಇದೆ. ಆದ್ದರಿಂದ ಅದ್ಯಯನಕ್ಕೆ ತೊಡಗಿದ್ದೇನೆ. ಅದು ಪೂರ್ಣವಾದಾಗ ಕಂಡೀತ ಪ್ರಕಟಿಸುತ್ತೇನೆ.
  ನಾನು ಕಲಾಮಾದ್ಯಮದ ವಿದ್ಯಾರ್ಥಿ ಅಲ್ಲದೇ ಹೋಗಿರುವುದರಿಂದ ಹಾಗು ವಿಶ್ವವಿದ್ಯಾನಿಲಯದಲ್ಲಿ ಇಲ್ಲದೆ ಇರುವುದರಿಂದ, ಕೆಲವು ಆಕರಗಳ ಸಮಸ್ಯೆ ಆಗಿದೆ. ಭಾರತಿಯ ವಾಸ್ಥುಶಿಲ್ಪ, ಇತಿಹಾಸದ ಬಗ್ಗೆ ಆಸಕ್ತಿ ಹಾಗು ಪಾಂಡಿತ್ಯ ಇರುವವರ ಪರಿಚಯ ನನಗೆ ಇಲ್ಲ, ಆದುದರಿಂದ ಭಾರತೀಯ ವಾಸ್ಥುಶಿಲ್ಪದ ಬಗೆಗಿನ ಆಕರ ಗ್ರಂಥಗಳು ಯಾವುವು ಎಂಬುದರ ಬಗ್ಗೆ ತಿಳಿಯುತ್ತಿಲ್ಲ. ಈ ಮಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಹಂಪಿಯ ಬಗೆಗಿನ ಬರಹ ಸ್ವಲ್ಪ ತಡವಾಗಬೊಹುದು ಎಂದು ಕೇವಲ ಫೋಟೋಗಳನ್ನ ನೀಡಿದೆ. ನನಗೆ ಕೆಳಗಿನ ಕೆಲವು ಪುಸ್ತಕಗಳು ದೊರೆಯುತ್ತಿಲ್ಲ. ಯಾರಿಗಾದರೂ ಇದರ ಬಗ್ಗೆ ಮಾಹಿತಿ ಇದ್ದರೆ ತಿಳಿಸಿದರೆ ಉಪಯೊಗವಾಗುತ್ತದೆ.
  1. Best books On Indian Architecture

  2." Sculpture at Vijayanagara: Iconography and Style" by Dallapiccola, Anna L and Anila Verghese.

  3. "The Ramachandra Temple at Vijayanagara" by Dallapiccola, Anna L, john M Fritz, George Michell and S Rajasekara

  4." The Irrigation and Water Supply Systems of Vijayanagara" by Davison-Jenkins, Dominic

  5."Hampi-Vijayanagara, The Temple of Vithala" by Filliozat, Pierre-Sylvain and Vasundara Filliozat

  6. "Where Kings and Gods Meet: The royal Centre at Vijayanagara" by John M Fritz, George Michell and MS Nagaraja

  7."City of Victory , Vijayanagara: The Medieval Capital of South India" by Gollings J, John M Fritz and George Michell

  8. "Vijanagara:: Architectural Inventory of the Urbon Core" by Michell George

  ಹೀಗೆ ಈ ಪುಸ್ತಕಗಳ ಹುಡುಕಾಟದಲ್ಲಿ ತೊಡಗಿದ್ದೇನೆ. ಈ ಪುಸ್ತಕಗಳು ಸಿಕ್ಕ ನಂತರ, ಮತ್ತೆ ಹಲವು ಬಾರಿ ಹಂಪಿಗೆ ಹೋಗಿ ವಿವರವಾಗಿ ಬರೆಯಬೇಕು ಎಂದು ಆಸೆ. ಆದ್ದರಿಂದ ಕಾಯುತ್ತಿದ್ದೇನೆ. ಓಟ್ಟಿನಲ್ಲಿ ಒಟ್ಟು ವಿಜಯನಗರದ ಬಗ್ಗೆ ಹಾಗು ಅದರ ವಾಸ್ಥುಶಿಲ್ಪದ ಬಗ್ಗೆ ಬರೆಯಬೇಕು ಎಂದು ಆಸೆ. ಅದಕ್ಕಾಗಿ ಓದುತ್ತಿದ್ದೇನೆ.
  ನಾನು ಹಂಪಿಯಲ್ಲಿ ಇದ್ದಾಗ, ಒಬ್ಬ ವಿದೇಶಿಯನನ್ನು ಸಂದರ್ಶಿಸಿದೆ, ಆತ ಒಂದು ಮಾತನ್ನ ಹೇಳಿದ "Hampi is a light of India" ಅಂತ. ಅಂತಹ ಬೆಳಕು ನನ್ನಲ್ಲಿ ಮೂಡಿದಾಗ ಕಂಡೀತ ಬರೆಯುತ್ತೇನೆ. ಹಂಪಿ ನನ್ನಲ್ಲಿ ವಿಶಿಷ್ಟ ಅನುಭವಗಳನ್ನ ತಂದೊಡ್ಡಿದೆ. ಅದು ಸರಿಯಾದ ಹದಕ್ಕೆ ಬರಲಿಕ್ಕೆ ಕಾದಿದ್ದೇನೆ.
  ಇದೇ ರೀತಿ ತಾವು ಸಲಹೆಗಳನ್ನ ನೀಡುತ್ತಿರುತ್ತೀರಿ ಎಂದು ಹಾರೈಸುತ್ತೇನೆ.

  ಪ್ರತ್ಯುತ್ತರಅಳಿಸಿ
 3. ಅಯ್ಯಯ್ಯೋ ದ್ಯಾವ್ರೇ ಗ್ನಾನ ಸಮುದ್ರದಾಗೆ ಅಸ್ಟೆಲ್ಲಾ ದೊಡ್ಡ ಈಜು ನೀವು ಹೊಡ್ದು ಎತ್ತ್ಕೊಟ್ಟ ಮುತ್ತೆಲ್ಲಾ ನಮ್ಗ್ ಹಾಕ್ಕೊಳಾಕ್ಕಾದ್ದಾ? ಪಟಾ ಆಕೋವಾಗ ಅಂದಂದು ಕಂಡುದ್ದುನ್ನಾ, ಕೇಳುದ್ದುನ್ನಾ ಅನುಭವುಸುದ್ನಾ ಒಟ್ಗೇ ಅಂಚುಕೊಂಡ್ರೆ ನಮಗ್ ಮಸ್ತಾಯ್ತು ಬುಡೀ. ಸತಾವ್ದಾನೀ ಗಣೇಸಪ್ಪಾ ಮಾಕವಿ ಕಾಲೀದಾಸ ಬರ್ದ್ನಲ್ಲಾ ಮೇಗ್ದೂತಾ, ಆ ನೆಲದಾಗೆಲ್ಲಾ ತಿರ್ಕಂಬಂದ್ರು. ಆಗ ಪಟಾನೂ ಬರ್ವಣ್ಗೇನೂ ಅವರ್ ಗೆಣೆಕಾರ ಒಬ್ಬ ಎಸ್ಟ್ ಸಂದಾಕಿ ಬರ್ದಾಂತೀನೀ. ಅದಿಲ್ಲೇ ಎಲ್ಲೋ ಅಂತರ್ಜಾಲ್ದಾಗೈತೆ ಆದರ್ ನಂಗೇ ಸೇತು ಮರ್ತೋಯ್ತಲ್ಲಪ್ಪಾ. ಇರ್ಲಿ ಬುಡಿ.
  ಕಾಡ್ಮನ್ಸಾ

  ಪ್ರತ್ಯುತ್ತರಅಳಿಸಿ
 4. ಕಾಡ್ಮನ್ಸರೆ,
  ಬಾಳ ಧನ್ಯವಾದ್ರೀ ಯಪ್ಪ. ಇರ್ಲಿ ಬುಡಿ. ಆ ಸೇತು ಕಂಡ್ರ ನಂಗೆ ಒಸಿ ಏಳ್ರಿ. ಆಮೇಗೆ, ಗ್ನಾನ ಸಮುದ್ರಾನೊ ಅಲ್ವೋ, ಆದ್ರ ಏನಾದ್ರು ಒಸಿ ಅರ್ಯೋಣ ಅನ್ನೋ ಕೆಟ್ಬುದ್ದಿ ಅಸ್ಟೆ ಕಣ್ರಪ್ಪ. ಇದೊಂದೊಸಿ ಕ್ಸೆಮಿಸಿಬಿಡಿ, ಮತ್ತೇ ಹಂಪ್ಯಾಗ ಹೋಗುವ ಅಂತಿವ್ನಿ, ಆಗ ಮತ್ತೇ ಓಗಿ ಬರಿತೀನ್ ಕಣಪ್ಪಿ. ನಂದೂ ಒಂದು ತಪ್ಪೈತೆ, ಅದೇನಂದ್ರ ಅದೇನೋ ಅಂತಾರಲ್ಲ, ಓದೋರು ಬರ್ಯೋ ಬರ್ಹ, ಪ್ರವಾಸ ಕಥನ ಅಂತ ಅದು ವಸಿ ಕಡಿಮೆ ಓದಿವ್ನಿ. ಈ ಬಾರಿ ಬೋ ಓದ್ಕೊಂಡು ಓಗುವ ಅಂತಿವ್ನಿ. ಏನಂತೀರ್ರೀ? ಬಿಡೋದಿಲ್ಲ. ನೀ ಮೆಚ್ಚೋ ಅಂಗೇ ಬರೀದಿದಿದ್ರೆ ನೋಡು ಮತ್ತೆ. ಇಡೀ ಬಾರ್ತಾನೆ ಒಂದು ಸುತ್ತಾಕ್ಬೇಕಂತ ಬೋ ಆಸೆ ಅದ. ಆದ್ರೆ ಇನ್ನೂ ಈಗ್ತಾನೆ ಕಣ್ಬಿಡ್ತಿರೋನಲ್ವ, ಅದ್ಕೆ ಒಸಿ ಸಮ್ಯ ಇಡ್ಯತ್ತೆ. ಆಗ್ಲಿ ನೋಡುವ, ಎಲ್ಲಾನೂ ಒಂದು ಕೈ ನೋಡೇ ಬಿಡುವ. ಏನಂತೀ...... ಇದೇ ರೀತಿ ಸಿಕ್ದಾಗೆಲ್ಲಾ ಒಸಿ ಒಳ್ಳೆ ಬುದ್ದಿ ಏಳ್ತಾ ಇರಿ.... ಮತ್ತೇ ಆ ಪ್ರವಾಸ ಕತ್ನದ ಬಗ್ಗೆ ಇರೋ ಒಸಿ ಒಳ್ಳೆ ಪುಸ್ತಕಗಳ್ನ ಒಸಿ ಏಳಿ ಪುಣ್ಯ ಕಟ್ಕೊಳಪ್ಪೋ.........

  ಪ್ರತ್ಯುತ್ತರಅಳಿಸಿ
 5. Mr. Aravind...Hats off to you...thank for the beautiful pictures of Hampi....I too want to visit Hampi one or the other day..at least before I die...!!!

  ಪ್ರತ್ಯುತ್ತರಅಳಿಸಿ
 6. Nice blog.. Keep writing. I could not read all your blog posts. But I will, in my free time..

  ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎರಡು ಕೋಡಿನ ಮೊಲ

"ಇಲ್ಲ, ನನಗೆ ಆ ಕ್ಷಣದಲ್ಲಿ ಯಾವುದೇ ಸಂಧಿಗ್ಧತೆ ಇರಲಿಲ್ಲ. ಸೀದಾ ಸಾಮಾನ್ಯ ಪರಿಸ್ಥಿತಿಯಂತೆ ಅನ್ನಿಸಿತ್ತು. ಅವತ್ತು ಬೆಳಗ್ಗೆ ಎದ್ದಾಗ ನನಗೆ  ಗಾಬರಿಯಾಗುವಷ್ಟು ಏನೂ ನೆನಪಿರಲಿಲ್ಲ. ರಾತ್ರಿ ವಿಚಿತ್ರ ಅನುಭವವಾಗಿತ್ತು. ರಾತ್ರಿ ಒಮ್ಮೆ ಎಚ್ಚರಾದಾಗ ಎಲ್ಲವೂ ಕರಗುತ್ತಿರುವಂತೆ ಭಾಸವಾಯಿತು. ಗೋಡೆಗಳು, ಮನೆ, ನಾ ಮಲಗಿದ್ದ ಮಂಚ, ಕಡೆಗೆ ಇಡೀ ಜಗತ್ತೆ ಕರಗುತ್ತಿರುವಂತೆ ಅನ್ನಿಸಿತು. ಎಷ್ಟು  ಭಯವಾಯಿತು ಎಂದರೆ ಗಟ್ಟಿಯಾಗಿ ಹೊದ್ದು  ಮಲಗಿಬಿಟ್ಟೆ. ಬೆಳಗಾಗಿ ಎದ್ದಾಗ  ಯಾಕೋ ಏನೂ ನೆನಪಿರಲಿಲ್ಲ, ಏನೂ ನೆನಪಾಗುತ್ತಿರಲಿಲ್ಲ. ಆಗಲೆ ನಾನು ನಿರ್ಧರಿಸಿದ್ದು, ಅವಳಿಗೆ ನಾನು ಅವಳನ್ನ ಇಷ್ಟ ಪಡುತ್ತಿರುವ ಸಂಗತಿಯನ್ನು, ಮದುವೆಯಾಗಲು  ಬಯಸುತ್ತಿರುವ ಸಂಗತಿಯನ್ನು ತಿಳಿಸಬೇಕು ಅಂತ. ಹಾಗಾಗಿ ಅದೇ ಸಂಜೆ ತಿಳಿಸಿಬಿಟ್ಟೆ.  ಹಂಸ, ನೀನು ನಿನ್ನ ಕುಟುಂಬವನ್ನು ಪ್ರೀತಿಸುವ, ನಿನ್ನ ಅಣ್ಣನಿಗೆ ನೀನು ಮದುವೆ ಮಾಡಬೇಕೆನ್ನುವ ನಿನ್ನ ಕಾಳಜಿಯಿಂದಾಗಿ ನಾನು ನಿನ್ನನ್ನ ಇಷ್ಟ ಪಡುತ್ತಿದ್ದೇನೆ ಅಥವಾ ಪ್ರೀತಿಸುತ್ತಿದ್ದೇನೆ. ನಿರ್ಧಾರವನ್ನು ತೆಗೆದುಕೊಳ್ಳುವ ಹಕ್ಕು ನಿನಗಿದೆ ಆದರೆ ತೀರ್ಮಾನವನ್ನು ತಿಳಿಸುವುದು ನಿನ್ನ ಕರ್ತವ್ಯ.  ಒಂದೆರೆಡು ದಿನಗಳ ಕಾಲ ಉತ್ತರದ ನಿರೀಕ್ಷೆಯಲ್ಲಿದ್ದೆ. ನಂತರ ಅದೇನಾಯಿತೋ ನನ್ನ ಕೆಲಸಗಳಲ್ಲಿ ನಾನು ಮರತೇ ಬಿಟ್ಟೆ. ಅವಳನ್ನು, ಅವಳ ಸಂಗತಿಯನ್ನು  ಮರೆತೇ ಬಿಟ್ಟಿದ್ದೆ . ಈಗ ನೋಡು ನೀನು ಕೇಳಿದಾಗ  ನೆನಪಾಯಿತು. ನನ್ನ ಸ…

ಹಳೆಯ ಮೊಳೆ ಹಾಗೂ ಹೊಸ ಮದುವೆ : ಒಂದು ಉಪಮೆ

ಹಾಗಾಗಿ ಮೊಳೆಯೇ
ಇದು ನಿನ್ನದೇ ತಪ್ಪೆಂದು ತೀರ್ಪನ್ನಿರಿಸಿದ್ದಾರೆ

ಆಗಿದ್ದಿಷ್ಟು

ಹೆಣ್ಣನ್ನು ಮನೆ ತುಂಬಿಸಿಕೊಳ್ಳುವಾಗ
ಹೊಸಲ ಮೇಲೆ ಕಾಸನ್ನಿಟ್ಟು ಮೊಳೆ ಹೊಡಿಸುವುದು
ಸಂಪ್ರದಾಯ

ಹೆಣ್ಣು ಗಂಡು ಅದೆಷ್ಟೇ ಪ್ರಯತ್ನಿಸಿದರೂ
ಅಂದು ಮೊಳೆ ಹೊಡೆಯುವುದು ಕಷ್ಟವಿತ್ತು
ಸುತ್ತಿಗೆ ಸರಿಯಿರಲಿಲ್ಲ ಮೊಳೆ ಚೂಪಿರಲಿಲ್ಲ ಕಾಸು ಗಟ್ಟಿಯಿತ್ತು
ಹುಡುಗ ಹುಡುಗಿ ದಣಿದಿದ್ದರು
ಇತ್ಯಾದಿ ಇತ್ಯಾದಿ

ಬಲ ಬಿಟ್ಟು ಹೊಡೆದಾಗ
ಮೊಳೆ ಹೊಸಲಿಗೆ ತಾಗುತ್ತಲೆ
ಗಂಡಿನ ಬೆರಳಿಗೂ - ಹೆಣ್ಣಿನ ಬೆರಳಿಗೂ ತಾಗಿ
ಇಬ್ಬರ ರಕ್ತವನ್ನೂ ಬೆರೆಸಿ
ಹೊಸಲಿಗಿಳಿದಿತ್ತು

ಮಾರನೇ ದಿನದಿಂದ
ಹುಡುಗ  ಹುಡುಗಿ
ಎಲ್ಲರೂ
ರಕ್ತ ಬಳಿದ ಹೊಸಲನ್ನು ದಾಟುತ್ತಲೇ ಸಂ
ಸಾರ ಸಾಗಿಸುತ್ತಿದ್ದರು

ಮೊದಲಿಗೆ ಬೆರಳಿಗೆ ಗಾಯವಾದದ್ದು
ಹುಣ್ಣಾಗಿ
ಮೊದಲು ಬೆರಳು, ಆಮೇಲೆ ಕೈ, ನಂತರ ದೇಹ
ಹೀಗೆ ಪೂರ ಆವರಿಸಿ ಮುಗಿಸುವ ಹೊತ್ತಿಗೆ
ಇಬ್ಬರ ಆಯಸ್ಸೂ

ಈಗ ಹೇಳಿ
ಇದು ಮೊಳೆಯದೇ ತಪ್ಪಲ್ಲವೆ
ಹಾಗಾಗಿ
ಹೊಸಲನ್ನು ಬಿಟ್ಟು ನಾಣ್ಯವನ್ನು ಬಿಟ್ಟು
ಹೊಡೆದ ಸುತ್ತಿಗೆಯನ್ನೂ ಕೈಯನ್ನೂ ಬಿಟ್ಟು
ಮೊಳೆಯನ್ನೇ ಶಿಕ್ಷಿಸಬೇಕಾಗಿ ತೀರ್ಪಾಗಿದೆ.

ಭೌತಶಾಸ್ತ್ರದ ಪ್ರೀತಿಗಾಗಿ

ಇನ್ನೇನು ಆಗಲೇ ಕಾಲೇಜು, ಮುಖ್ಯವಾಗಿ ಪದವಿ ತರಗತಿಗಳು ಆರಂಭವಾಗಿರಬೇಕು ಅಥವಾ ಇಷ್ಟರಲ್ಲೇ ಆರಂಭವಾಗಬಹುದು. PUC ಎಂಬ ತ್ರಾಸಮಯ ಘಟ್ಟ ಮುಗಿಸಿ ಈಗ ಹೊಸದೊಂದು ಯಾನವನ್ನ ಆರಂಭಿಸಲು ಹೊರಡುವ ಸಮಯ. ಹಲವರು ಇಂಜಿನಿಯರಿಂಗ್ ಎಂದೋ ಮೆಡಿಕಲ್ ಎಂದೋ ಹೋಗಿರುತ್ತಾರೆ. ಕೆಲವರು ಮೂಲತಃ ಮೂಲ ವಿಜ್ಞಾನದಲ್ಲಿ ಆಸಕ್ತಿಯಿರುವವರು ಪದವಿಗೆ ಸೇರಿರುತ್ತಾರೆ. ಮತ್ತೆ ಕೆಲವರಿಗೆ ಮೂಲ ವಿಜ್ಞಾನದಲ್ಲಿ ಆಸಕ್ತಿಯಿದ್ದರೂ ಇಂಜಿನಿಯರಿಂಗ್ ಸೇರಿರುತ್ತಾರೆ. ಮೂಲ ವಿಜ್ಞಾನದಲ್ಲಿ ಆಸಕ್ತರಾಗಿ ಮುಂದೆ ಸಂಶೋಧಕರಾಗಬೇಕೆಂದು ಬಯಸುವವರಿಗೆ ನನ್ನ ಅನುಭವದಲ್ಲಿ ದಕ್ಕಿದ ಒಂದಿಷ್ಟು ಮಾಹಿತಿಗಳನ್ನ ಕೊಡಬೇಕೆಂದೆನಿಸಿ ಈ ಲೇಖನ ಬರೆಯುತ್ತಿದ್ದೀನಿ. ನನ್ನ ಕ್ಷೇತ್ರ ಸೈದ್ಧಾಂತಿಕ ಬೌತಶಾಸ್ತ್ರ., ಹಾಗಾಗಿ ಆ ಕ್ಷೇತ್ರದ ಬಗೆಗೆ ಮಾತ್ರ ದೀರ್ಘವಾಗಿ ಬರೆಯುತ್ತೀದ್ದೀನಿ. ನನ್ನ ಸ್ನೇಹಿತರ್ಯಾರಾದರೂ ಒಪ್ಪಿದರೆ ಉಳಿದ ಕ್ಷೇತ್ರಗಳ ಬಗೆಗೆ ಬರೆಸಲು ಪ್ರಯತ್ನಿಸುತ್ತೇನೆ.. ಅಷ್ಟೇ ಅಲ್ಲ ಮಾನವೀಯ ವಿಷಯಗಳ ಬಗೆಗೂ ಬರೆಸಬೇಕೆಂದಿದ್ದೇನೆ ಮುಂದಿನ ದಿನಗಳಲ್ಲಿ ಪ್ರಯತ್ನಿಸುತ್ತೇನೆ. ವಿಷಯಾಧಾರಿತ ಭಿನ್ನಾಭಿಪ್ರಾಯಗಳನ್ನು ಹೊರತುಪಡಿಸಿ ಉಳಿದ ಹಲವು ವಿಷಯಗಳನ್ನು ಸಮಾನವಾಗಿ ಸ್ವೀಕರಿಸಬಹುದು. ಇಲ್ಲಿನ ವಸ್ತುನಿಷ್ಠ ವಿಷಯಗಳನ್ನು ಹೊರತುಪಡಿಸಿ ಉಳಿದದ್ದು ನನ್ನ ಅನುಭವಕ್ಕೆ ಬಂದವುಗಳು, ಹಲವನ್ನು ನಾವುಗಳು ಅನುಸರಿಸಿದವುಗಳು. ಇವೇ "ಇದ ಮಿತ್ತಂ" ಎಂಬಂತಹ ಶಾಸನಗಳೇನೂ‌ ಅಲ್ಲ. ಎಲ್ಲರಿಗೂ…