ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

March, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸಂಚದ ನೋಟ ಒಂದೆ ನೋಡಾ

[ಇದನ್ನ ಕಥನ ಕವನ ಎಂದು ಕರೆಯುತ್ತೇನೆ. ಗಮನಿಸಿ, ಇದು ಕತೆಯಲ್ಲ. ಇಲ್ಲಿ ಕತೆಯ ಬಂಧವಿಲ್ಲ. ಆದ್ದರಿಂದ ಇಲ್ಲಿ ಕತೆಯನ್ನ ಹುಡುಕಬೇಡಿ. ಓದಲು ಬೇಸರ ಆದರೆ ಓದದೆ ನಿಲ್ಲಿಸಿಬಿಡಿ. ಇದು ಕಥನವೂ ಹೌದು, ಕವನವೂ ಹೌದು.]

                                                            ಎನ್ನ ಕಾಬ ನಿನಗೆ, ನಿನ್ನ ಕಾಬ ಎನಗೆ
                                                            ಸಂಚದ ನೋಟ ಒಂದೆ ನೋಡಾ
                                                            ಗುಹೇಶ್ವರ...............

ರಶೀದ್ ಅಣ್ಣ ದಯವಿಟ್ಟು ಕ್ಷಮಿಸಿ ಬಿಡಿ, ನಾನು ಕತೆಯನ್ನು ಬರೆಯಲಿಕ್ಕೆ ಆಗಲಿಲ್ಲ. ನೀವು ಹೇಳಿದ್ದಿರಿ ಒಂದು ಕತೆ ಬರಿ ಎಂದು, ಆಗಲಿಲ್ಲ.

ನಿಜ್ವಾಗು ಕತೆ ಬರೀಲಿಕ್ಕೆ ಆಗಲೇ ಇಲ್ಲ.
ಏನೇನೋ ಮಾಡಿದೆ. ಆಯ್ತ ಅಂದರೆ ಇಲ್ಲ. ಪಟ್ಟಾಕಿ ಕೂತದ್ದು ಆಯ್ತು. ಊಹೂ ಏನು ಪ್ರಯೊಜನ ಇಲ್ಲದೆ ಹೋಯಿತು. ಏನೂ ಬರೆಲೇ ಇಲ್ಲ. ಎಲ್ಲೊ ದೂರದಲ್ಲಿ ಆರಾಮಾಗಿ, ಹಾಯಾಗಿ, ಕೂತು ಆ ಪದ ಈ ಪದ ಅಂತ ಹುಡ್ಕಿ ಜೋಡಿಸಿ ನಾಲ್ಕು ಸಾಲು ಮಾಡಿ ಕವನ ಅಂತ ಮಾಡಿ ಬಿಟ್ಟರೆ ಮುಗೀತು. ಎಷ್ಟು ಆರಾಮು. ಆದ್ರೆ ಈ ಕತೆ ,ಬಹುಶಃ ಈ ಕತೆ ಬರ್ಯೋಕೆ ಆಗ್ದೇ ಇರೋದು ನಂಗೆ ಮಾತ್ರ ಇರ್ಬೇಕು. ಜಪ್ಪಯ್ಯ ಅಂದ್ರೂ ಬರೀಲಿಕ್ಕೆ ಆಗ್ಲೆ ಇಲ್ಲ. ನಮ್ಮ ಒಬ್ಬರು ಗಣಿತದ ಮೆಡಮ್ ಹೇಳ್ತ ಇದ್ದರು ಅಲ್ಲಾರಿ ಬದ್ಕು ಇಷ್ಟೊಂದು ನರಳಾಟದಲ್ಲಿ ಉಂಟ, ಇಲ್ಲ ಅಂದಮೇಲೆ ಈ ಕತೆಗಳ್ಯ…

.......

ಕಡೆಗೆ,
       ಬುದ್ದ ಕೂತಿದ್ದ ಎದುರಿಗೆ
       ನಾನು ನೋಡುತ್ತಿದ್ದೆ.
ಹಿಂದಿನಿಂದ ಕಪ್ಪು ಆನೆಯೊಂದು ಮುಂದೆಬರುತ್ತಾ ಗಿಳಿಟ್ಟಿತು.
ಆಗ
ಅಲ್ಲಿ
ಬುದ್ದ
ಇದ್ದಾನೋ ಇಲ್ಲವೋ
ಎಂಬ ಗೊಡವೆಗೇ ಹೊಗದೆ ಮುಂದೆಸಾಗಿತು.
ಅದಕ್ಕೇ ನಾನೆನುತ್ತೇನೆ
ಆನೆ ನಡದದ್ದೇ ದಾರಿ ಅಂತ............

.......

ಹೊಸ ವರ್ಷದ ಶುಭಾಶಯಗಳು.
ಬಯಲಿಗೆ ಬಯಲೇ ಪ್ರತಿರೂಪ
ಆಲಯಕ್ಕೆ ಆಲಯವೆ.
ಬಯಲು ಆಲಯದ ಪ್ರಶ್ನೆ ನಿತ್ಯ
ಇದೇ ಉತ್ತರ.......

.......

ಅವಳ ಮದುವೆಯ ಆಮಂತ್ರಣ ಕರೆ
ಗಾಗಿ
ಬದುಕ ಭೂಮಿಕೆಯಾಗಿಸಿ ನಡೆವ ನೃತ್ಯಕ್ಕೆ
ತಾಳವನ್ನ, ಸಂಗೀತವನ್ನೊದಗಿಸಲು
ಹೊರಡುತ್ತಿದ್ದೇನೆ......

.......

ಯಾವಕಾಲದ್ದೊ,ಶಿಥಿಲಗೊಂಡ ದೇವಾಲಯದಲ್ಲಿ
ಕೂತ
ಒಂದು ಹೆಣ್ಣು.
ಪಕ್ಕದಲ್ಲಿ ಹೊಸದಾಗಿ ಕಟ್ಟುತ್ತಿರುವ ದೇವಾಲಯ
ಮುಂದೆ ಕೆರೆತುಂಬಿ ಕೋಡಿ ಬಿದ್ದು
ಹರಿಯುತ್ತಿರುವ ನದಿ.
ಚಿತ್ರಿಸಬೇಕು ಎಲ್ಲವನ್ನಾ, ಅವಳನ್ನಾ ಸೇರಿಸಿ
ನಿನಗೆ ತೊರಲಿಕ್ಕೆ.......

.......

ಜೊತೆಗಿರಲಿಕ್ಕಾಗುವುದಿಲ್ಲವೆಂದು ಇಬ್ಬರಿಗೂ
ತಿಳಿದಿತ್ತು.
ಆದ್ದರಿಂದಲೆ ಇರಬೇಕು,
ಜೊತೆಗಿರಲಾರದೆ ಹೊದೆವು.
ಆದರೆ ಪ್ರೀತಿ
ಬದುಕು ಪ್ರೀತಿಯೊಳೊಗೋ, ಪ್ರೀತಿ ಬದುಕಿನೋಳೊಗೋ
ಎಂದೆಣಿಸುತ್ತಲೆ ಇಬ್ಬರೂ ದೂರ ಹೊರಟು ಹೋದೆವು......

.......

ಪದಕ್ಕೆ ಏಕೋ ಸೋಲು
ಪದ
ನಂತರ ಅಕ್ಷರ......
ಕಥೆ ಹೇಳ್ತೇನೆ ಕೇಳು ಇಂದು ನಡೆದದ್ದು,
ನಾನು ಇಷ್ಟಪಟ್ಟ ಇಬ್ಬರೂ ಹುಡುಗಿಯರೂ
ಇಂದು ಮಾತಾಡಿದರು.
ರಾತ್ರಿ ಊಟಕ್ಕೆ ಹೊರ ಹೋಗಬೇಕಾಯಿತು.
ಒಂಟಿ ಕೂತಿದ್ದೆ ಯಾರೋ ಬಂದ
ಜೊತೆ ಸಿಕ್ಕ ಹಾಗಾಯಿತು, ಅಂದುಕೊಂಡೆ.
ಆದ್ದರಿಂದ
ಮಾತಿಗಿಳಿದೆ.
ಮಾತನಾಡಿದರೆ ಮುಗಿಯಿತು.
ಈಗ ನೋಡು ಕತೆ ಮುಗಿಯಿತು ಎಂದು ಕೊಂಡಾಗ
ದೃಷ್ಠಿಗಳೂ, ಸ್ವರಗಳೂ, ಎಲ್ಲಕ್ಕಿಂತ ಹೆಚ್ಚಾಗಿ
ಏನೋ ತಪ್ಪಿದೆ ಎಂದೆನಿಸುತ್ತೆ.
ಯಾಕೆಂದರೆ,
ಸಂಶೋದಿಸಹೊರಟಾಗ, ಬದುಕು ಬದುಕಲಿಕ್ಕೆ
ಅಷ್ತೇನ?
ಅಂತ ಅನ್ನಿಸುತ್ತೆ.
ಅಷ್ಟೇ ಅಲ್ಲ ಅಂತ ಅದೇ
ಕ್ಷಣ
ಅನ್ನಿಸಿಬಿಡುತ್ತೆ.
ಈ ರೀತಿ ಅರ್ಥ ಆಗದೇನೇ ಹೋದಾಗ
ಯಾವುದಕ್ಕು ಅರ್ಥವೇ ಇಲ್ಲ ಎಂದೆನಿಸಿ
ಅರ್ಥ ಎಂದರೇನೆ ಅರ್ಥ ಸಂಧಿಗ್ಧತೆ ಎಂದು
ನಂಬಿ ಬಿಟ್ಟಿದ್ದೀನಿ........

.......

ಅಲಂಕಾರಕ್ಕೆ ಬಟ್ಟೆ ಕೊಳ್ಲಲು ಹೋದದ್ದು.
ಬಟ್ಟೆ ಸಿದ್ದವಾಗಿಲ್ಲವೆಂದೂ, ಸಮಯವಿದೆಯೆಂದೂ
ದೇಗುಲಕ್ಕೆ ಹೊರಟದ್ದು.
ನಾಲ್ಕು ದಾರಿ ಸೇರುವ ಸ್ಥಳದಲ್ಲಿ ದೇಗುಲ
ದರ್ಶನದ ನಂತರ
ಬಂದ ಹಾದಿ ಮರೆತಿತ್ತು
ಅಪರಿಚಿತನೊಬ್ಬ ಹೇಳಿದ
ಇದೇ ದಿಕ್ಕು ಸೇರಬಲ್ಲಿರಿ ಸೇರಬಲ್ಲಿಗೆ.
ಹಾದಿಗುಂಟಾ ಒಂದೇ ಆಲೋಚನೆ
ದೇಗುಲ ಆರಂಭ ಸ್ಥಾನವೋ ಅಥವಾ....?
ನಾಲ್ಕೂ ಹಾದಿಗಳು ಒಂದೇ ಸ್ಥಳಕ್ಕೆ ಕೊಂಡೆಯುತ್ತದಾ...?
ಸಾದ್ಯವಿಲ್ಲ... ಸಾದ್ಯವಾದರೆ...?
ದೇಗುಲ ಹಾಗೂ ನಮ್ಮ ಮನೆ...?
ಪಕ್ಕದ ಮನೆಯವ ಮನೆಬಿಟ್ಟು ಓಡಿಹೋಗಿದ್ದ......

.......

ನಾಳಿನ ಬಗ್ಗೆ ಚಿಂತಿಸುವುದನ್ನು ಬಿಟ್ಟು ಬಿಟ್ಟಿದ್ದೇನೆ.
ಆದ್ದರಿಂದ,
ನಾಳಿನ ಮಸಾಲೆ ದೋಸೆಯಲ್ಲಿನ ಮಸಾಲೆಯ ಬಗ್ಗೆ ಚಿಂತೆಗೀಡಾಗಿದ್ದೇನೆ.......

.......

ಸಾಗರದ ವಿಶಾಲತೆ ಸಾಕೆನಿಸಿತೇನೋ..? ಯಾಕೆ..?
ಕಾಡು ಇಷ್ಟವಾಯಿತೆ...?
ಕೊರಕಲು ಜಾಡು, ಬೆಳೆದ ಮರಗಳ ಹಸಿರು
ಜರಿಯಾಗಿ ತೊರೆಯಾಗಿ ನದಿಯಾಗುವ ನೀರ ಜಾಡು
ಆ ಸಾಗರದ ಅನಂತ ಸಾದ್ಯತೆಗಳ ಮದ್ಯೆ ವಿಶಿಷ್ಠವಾಯಿತೆ....??

.......

ಪ್ರಾಣದ ಪ್ರತಿಷ್ಠಾಪನೆಗೆ ಕಲ್ಲೊ...?
ಕಲ್ಲಿನೊಳಗೆ ಪ್ರಾಣವೋ...?
ರಸ್ತೆ ಬದಿಯಲ್ಲಿ ಈ ಅರ್ಧ ರಾತ್ರಿಯಲ್ಲಿ ಸೊಳ್ಳೆಗಳಿಂದ ಕಡಿಸಿಕೊಳ್ಳುತ್ತಾ,
ಬಸ್ಸಿಗಾಗಿ ಕಾಯತ್ತಾ, ಉಚ್ಚೆ ಹೊಯ್ಯಲಿಕ್ಕೆ ಜಾಗ ಹುಡುಕುತ್ತಾ
ಈ ಆಲೋಚನೆ ಹೊಳೆದದ್ದು
ಸರಿಯೋ ತಪ್ಪೋ ಎಂಬಲ್ಲಿ ದ್ವಂದ್ವದ ಆರಂಭ......

.......

ಬಿಟ್ಟು ಬಿಡುವ ತವಕಕ್ಕೆ ಬಿಡಲೊಲ್ಲದ ಸೆಳೆತ.
ಮಧ್ಯೆ
ಅಕ್ಕ, ಅಣ್ಣ, ತಂಗಿ, ತಮ್ಮ ಹುಟ್ಟಲೇ ಇಲ್ಲ.
ಅವಳಿಗೆ ಅಸಹ್ಯ, ಅವನು ನಂಬಲೇ ಇಲ್ಲ,
ಒಂಟಿತನ ಚಟ ಅಲ್ಲ, ಹವ್ಯಾಸವೂ ಅಲ್ಲ......
ಆದರೆ
ಏಕಾಂತ, ಮೌನದ ಸುಶ್ರಾವ್ಯ ಜೀವಂತ ಗಾನ ಸಮ್ಮೋಹನ......

.......

ಬಿಟ್ಟು ಕೊಡುವುದೆಂದರೆ...?
ಗಳಿಸುವ ತವಕ.
ಆದ್ದರಿಂದ
ಬಿಟ್ಟು ಕೊಡಲಿಕ್ಕಾಗಿ ಅಲ್ಲ.
ಹಾಗಂತ
ಗಳಿಸಲಿಕ್ಕಾಗೂ ಅಲ್ಲ.
ಹರಿಯುವುದಕ್ಕೆ,
ಸುಮ್ಮನೆ
ಮೂಗು ಮುಚ್ಚಿ ತೇಲುತ್ತಾ ಸಾಗಲಿಕ್ಕೆ........

.......

ಏಕಾಂಗಿಯಾಗಬೇಕೆಂದು ತೀವ್ರವಾಗಿ ಹಂಬಲಿಸಿದೆ
ಕಾಲಕ್ಕೆ ಕೇಳಲಿಲ್ಲ
ಹುಟ್ಟಿದೆ,
ಗುಂಪಿನಲ್ಲಿ ಬೆಳೆದೆ
ಜೊತೆಯಾಗಿ ಎಲ್ಲಾಕಡೆಯೂ ಸಾಗಿ,
ಯಾರೆಲ್ಲ ನನ್ನ ಜೊತೆಗಿದ್ದರೋ ಅವರೇ ನನ್ನನ್ನ ಅಸಹ್ಯಿಸಿಕೊಳ್ಳುವವರೆಗೂ
ಸಾಗಿದಾಗ
ತಿಳಿಯದಂತೆ ಏಕಾಂಗಿಯಾಗಿಬಿಟ್ಟಿದ್ದೆ......

.......

ಶುಭೋದಯ. ರಥಸಪ್ತಮಿಯ ಶುಭಾಷಯಗಳು
ಅರ್ಥೈಸಲು ಧ್ವನಿಗಳಿವೆ.
ಧ್ವನಿಸಲು ಮಾರ್ಗಗಳಿವೆ.
ಎಲ್ಲವ ಮೀರಲು  ನೀನಿದ್ದೀ.
ಸಹಜದಲ್ಲಿ ಏನೂ ಇಲ್ಲ
ಅದೇ ರೀತಿ
ಅಸಹಜದಲ್ಲಿ ಕೂಡ......

.......

ನಡೆದ ದಾರಿಯಲ್ಲೆಲ್ಲ ಹೆಜ್ಜೆ ಗುರುತು
ಶಾಶ್ವತವಾದರೆ......?
ಭೂಮಿ ಸಮನಾಗಿರೊದಿಲ್ಲ.
ಹಾಗಾದರೆ ಅಲ್ಲಿ ಆಂಜನೇಯನ
ಹೆಜ್ಜೆ ಮೂಡಿದೆ.
ಅದು ಮನುಷ್ಯನದಲ್ಲ
ಹೋ ಹಾಗೋ.....

.......

ಪರಮಹಂಸ, ಬೆಕ್ಕು ನಾನಲ್ಲ ನೀನಲ್ಲ ಎಲ್ಲಾ ಎಲ್ಲಾ ಅಂದಾಗ ಅದೈತ ಎಂದೆ. ನಾನೆ ನೀನು, ನೀನೆ ನಾನು ಅಷ್ಟು ಪ್ರೀತಿ ಎಂದಾಗಲು ಅದೈತ ಎಂದೆ.......

.......

ಸರ್ಕಾರಿ ಅಂಗೀಕೃತ, ಕಾನೂನು ಬದ್ಧವಾದ,
"ಮನಸು ಮಾರಾಟ ಮಳಿಗೆ"
ದೊಡ್ಡ ಬೆಟ್ಟದ ತುದಿಯಲ್ಲಿನ
ಒಂಟಿ ಬೇರಿನ
ಒಂಟಿ ಮರದ
ಎಲೆಯ ತುದಿಯಲ್ಲಿ ಮೂಡಿದ ಮುತ್ತಿನಂತಹ ಹನಿಯಲ್ಲಿ
ನಿನ್ನ ಮುಖ ನೋಡಬೇಕೆನಿಸಿದೆ.....

.......

ಉತ್ತರ,
ಕ್ರಿಯೆ ಕರ್ಮ ಆನಂದಕ್ಕೆ.
ಕಮಲದೆಲೆಯ ಮೇಲೆ ಒಂಟಿ ಕಾಲಲ್ಲಿ ನಿಂತು
ಶಿಕ್ಷೆಯಲ್ಲ, ಕರ್ಮ ಗಿರ್ಮ ಏನು ಅಲ್ಲ
ಒಳಹೊಕ್ಕುವ ತವಕ
ಆನಂದಕ್ಕೆ ಪ್ರತೀಕ
ಅಷ್ಟೆ.
ಮನಸ್ಸು ಶಾಂತಿಃ
ಶಾಂತಿಃ ಶಾಂತಿಃ ಶಾಂತಿಃ......

.......

ಇಂದು ಅವಳಿಗೆ
ಅಂಚೆಯ
ಮೂಲಕ ಪತ್ರ ಕಳುಹಿಸಿದೆ.
ಆಗಸ ಎಂಬೋದು ಬಟಾಬಯಲು
ಬಯಲಿಗೆ ಬೆತ್ತಲೆಯ ಭಯವಿಲ್ಲ
ಅದು ಬಯಲು, ಅಷ್ಟೆ......

.......

ಸೆಳೆತದ, ನಾಜೂಕಿನ, ತಿಳಿನಗೆಯ, ವಯ್ಯಾರದ
ಕೊರೆವ ತಂತಿಯ ಅಹ್ವಾನಕ್ಕೆ ಬೆದರಿ
ಕಂಗಾಲಾದೆ.
ಕಡೆಗೆ ಪಾರಾದೆ.
ನಿಜದಲ್ಲಿ ನಾ ಒಂಟಿಯಾದಾಗ
ಎಲ್ಲರೂ
ನನ್ನವರೆ.......

.......

ಮೌನದ ನಿರಂತರ ಏಕಾಂತ ಧ್ಯಾನ

ಅರಿವಿನಲ್ಲಿ
ಅದೇನೋ
ಸೃಷ್ಠಿಗಾಗಿ ಸೃಷ್ಠಿಯ ಆಟಕ್ಕೆ
ಪಗಡೆಯೋ, ಕಾಯೋ ಅಥವಾ ಮೈದಾನವೋ
ಅರಿಯದಾದೆ.......

.......

ನೀನು ಜಾತ್ರೆಯಲ್ಲಿ
ಪೀಪಿ, ಬಲೂನು, ಬುರುಗು, ಬೂಂದಿ, ಬತ್ತಾಸು
ಕೊಂಡೆ.
ನಾನು ಹೋಗಿ
ಸರಸ್ವತೀ ನದಿಯಿಂದ ಪುಟಿದೆದ್ದು ಹರಿವ
ಅಮೃತ  ಜಲದಿಂದ
ಪರಮೇಶ್ವರನಿಗೆರಗಿದೆ.....

.......

ಎದುರಿಗೆ ಕೂತು ಕಣ್ಣೀರಿಡುತ್ತಿದ್ದೀಯ,
ನೋಡಿದೆ.
ಏನೂಮಾಡಲಾಗದ ಅಸಮರ್ಥ ನಿರ್ಜೀವಿಯಾಗಿಬಿಟ್ಟೆ.
ವ್ಯಾಖ್ಯಾನಕ್ಕೆ ನಿಲುಕದ ನಿರಂತರ ಶೋಧದ ನಿರರ್ಥಕತೆಗೆ
ನಾನೆ ಮಾದರಿಯಾಗಿಬಿಟ್ಟೆ.
ನಾನು ಕೂಡ ಅಳುತ್ತಿದ್ದೇನೆ ಅಷ್ಟೆ.....

.......

ನೀಲಿ ಆಕಾಶದಲ್ಲಿ ನಿನ್ನ
ಹೆಜ್ಜೆ
ಗುರುತುಗಳನ್ನು ಹುಡುಕಿದೆ,
ಒಂದು ಕತ್ತಲ ರಾತ್ರಿಯಲ್ಲಿ
ಭಯವಾಯಿತು.
ಏನೂ ಕಾಣಲಿಲ್ಲ,
ಬೊಗೊಸೆಯೊಡ್ಡಿ ಆಕಾಶಕ್ಕೆ ಮುಖಮಾಡಿ
ಮೊಣಕಾಲೂರಿ ಕೂತೆ.......

.......

ಎಷ್ಟೆಲ್ಲಾ ಹೇಳಬೇಕೆಂದು
ನಿನ್ನ ಬಳಿ ಬಂದೆ,
ಏನೇನನ್ನೋ ಕೇಳಬೇಕೆಂದು ಬಂದೆ,
ನಿನ್ನ ಕಂಡೆ
ಕಣ್ಣಲ್ಲಿ ನೀರು ಸುರಿಯುತ್ತಿತ್ತು.
ನಾನು ಅಳುತ್ತಿದ್ದೆ....

.......

ಸಾವಿರ ಬಿಂಬವ ಕಾಣಲಿಕ್ಕೆ ಸಾವಿರ ಕನ್ನಡಿ
ಬೇಕಿಲ್ಲ.
ಎರಡು ಕನ್ನಡಿ
ಎದುರಾ ಎದುರು
ಸಾಕು.
ನನ್ನ ಎದುರಿಗೆ ನೀನು
ನಿನ್ನ ಎದುರಿಗೆ ನಾನು.

.......

ಮೃಣನ್ಮಯಿ,
ಯಾರವಳು, ಏನಂತ ಹೇಳಲಿ
ಪ್ರೇಯಸಿ, ಆತ್ಮಸಖಿ......
ಅಕ್ಷರಗಳು ಸತ್ತಿವೆ.
ಅವಳಿಗೆ ಶಬ್ಧ ಕೇಳುವುದಿಲ್ಲ , ಮಾತನಾಡಲಿಕ್ಕಾಗುವುದಿಲ್ಲ.
ನಾನು, ಅವಳು
ಇಬ್ಬರೂ
ಗಂಟೆ, ದಿನಗಳು, ಒಟ್ಟಿಗೆ ಕೂತಿರುತ್ತಿದ್ದೆವು.
ನಾ
ಎದ್ದು ಹೋಗುವಾಗ
ಅವಳಿಗೆ ಒಂದು ಕಾಗದದಲ್ಲಿ ಬರೆದಿಟ್ಟುಕೊಟ್ಟ
ಕೆಲವು ಸಾಲುಗಳು ಈ ಕೆಳಗಿನವುಗಳು.
ಒಂದಕ್ಕೂ ಮತ್ತೊಂದಕ್ಕೂ ಸಂಬಂದವಿದೆಯೇ,
ಎಂದರೆ
ಗೊತ್ತಿಲ್ಲಾ ಎನ್ನಬಲ್ಲೆ,
ಇರುವ ಸಂಬಂದವೆಂದರೆ
ಅದು ಅವಳು,
ಮೃಣನ್ಮಯಿ
ಆದ್ದರಿಂದ,
ಇವುಗಳು ಮೃಣನ್ಮಯಿಗೆ...

ಜೀವ ಗೀತ

[ಹುಟ್ಟು, ಪ್ರೀತಿ, ಅಮ್ಮ, ಸಂದೇಹ, ಸಾವು. ಇವು ನನಗೆ ಏನೂ ತಿಳಿಯದ ಕೆಲವು ಸಂಗತಿಗಳು.ಮನುಷ್ಯನಿಂದ ತಿಳಿಯಬಹುದ?, ಪ್ರಯತ್ನಿಸಿದೆ. ದಕ್ಕಿದ್ದನ್ನ ಇಲ್ಲಿ ಮನುಷ್ಯ ಅನ್ನೋ ಭಾಗದಲ್ಲಿ ಬರೆದಿದ್ದೇನೆ. ಅಲ್ಲಿ ದಕ್ಕದ್ದನ್ನ ಕೈಯಲ್ಲಿ ಮಣ್ಣನ್ನ ಹಿಡಿದು ಸುಮ್ಮನೆ ಕೂತಾಗ ಮಣ್ಣಲ್ಲಿ ಕೆಲವು ಸಂಗತಿಗಳು ಕಂಡಿವೆ. ಅವನ್ನ ಮಣ್ಣು ಎಂಬೋ ಭಾಗದಲ್ಲಿ ಬರೆದಿದ್ದೇನೆ. ಕಡೆಗೆ ಮಾತು ಎಂಬ ಭಾಗದಲ್ಲಿ ಎರಡನ್ನೂ ಬೆರೆಸುವ ಪ್ರಯತ್ನ ಮಾಡಿದ್ದೇನೆ,,,
ಆದರೂ,
ಮಣ್ಣಿನಲ್ಲಿ ನನಗೊಂದು ಜೀವ ಭಾವ ಕಂಡಿತು, ನಾನು ಅತ್ತು ಬಿಟ್ಟೆ, ಏನೂ ಮಾಡಲಿಕ್ಕಾಗಲಿಲ್ಲ
ಇಲ್ಲಿ ನಾನಿದ್ದೇನೆ ನನ್ನ ಜೊತೆಗೆ ಮನುಷ್ಯನಿದ್ದಾನೆ.
ಇಲ್ಲಿ ನಾನಿದ್ದೇನೆ ನನ್ನ ಜೊತೆಗೆ ಮಣ್ಣಿದೆ.
ನನಗೆ ಮಣ್ಣು ಕಂಡ ರೀತಿ, ಮಣ್ಣಿಗೆ ನಾ ಕಂಡ ರೀತಿಯೇ
ಅಥವ
ನನಗೆ ಮನುಷ್ಯ ಕಂಡ ರೀತಿ, ಮನುಷ್ಯನಿಗೆ ನಾ ಕಂಡ ರೀತಿಯೇ
ಇಲ್ಲಿನ ರಚನೆ]

೧.ಹುಟ್ಟು
ಮನುಷ್ಯ
                                             ಒಂದು ಗಂಡು                                              ಒಂದು ಹೆಣ್ಣು                                               ಒಂದಾದಾಗ                                              ಒಂದು ಮಗು                                              ಹುಟ್ಟಿತು                                              ಹುಟ್ಟು ಎಂದರು
ಮಣ್ಣು
                                    …

ಎಷ್ಟೇ ಜಾಲಾಡಿದರೂ ಕಡೆಗೆ ಎಟುಕಿದ್ದು ಮಾತ್ರಾ ಎರಡೇ ವಿಧ

ಕಡಲ ಮತ್ತೊಂದು ತುದಿ ಸಂಪೂರ್ಣ ಮಿಥ್ಯ ನನ್ನಾವರಣದಲ್ಲಿನ ಸೀಮಿತ ಸತ್ಯ....
ಕಂದೀಲ ಕೆಳಗಿನ ನೆರಳ ಮೂಲ ಬೆಳಕೋ ಅಥ್ವಾ ಕಂದೀಲೋ..?
ತರಂಗಗಳಿಂದ ಬಂತು ಸುದ್ದಿ ಕೇಳಿಲ್ಲಿ ಎಂಬಂತೆ ತಾತನ ಶ್ರಾಧ್ಧಾ, ಅಕ್ಕನಿಗೆ ಗಂಡು ಮಗು ಹೋಗೊದು ಅಸಂಭವ, ಸಂಭವದ ಪ್ರಶ್ನೆ ಅನೇಕ ನೆನಪಾಗುತ್ತಿದೆ
ಶೋಧ
ಇಲ್ಲಿ ಎಲ್ಲವೂ ಸ್ಪಟಿಕ ಶುಭ್ರ ಯಾವುದೂ ಕಾಣುವುದಿಲ್ಲ ಒಂದಕ್ಕೊಂದು ಮತ್ತೊಂದು ಅದಕೊಂದು ಹೊಸದದ್ದು ಇಲ್ಲಿ ಎಲ್ಲಾ....
ಕುಟ್ಟಿ ಪುಡಿ ಮಾಡಿ ಕಂಡು ಗೀಚಿ ಬರೆದ ಬರಹ ಬರೀ ಯಂತ್ರ ತಂತ್ರ ಸುಖಾನುಭವ ಲೋಲುಪತೆ ಅಲ್ಲವೆ ಅಲ್ಲ....
ಆತ್ಮೋನ್ನತಿಗೆ ಮೂಲಧಾತುವಿನ ಶೋಧ ತುರೀಯಕ್ಕೆ ಕೈ ಚಾಚಿದ ವ್ಯಕ್ತಿ ಚಕ್ಕಂಬಕ್ಕಳ ಹಾಕಿ ಕೂತಿದ್ದಾನೆ  ಕಾಲ ಸ್ಥಬ್ಧವಾಗುವ ಕ್ಷಣಕ್ಕಾಗಿ ಕಾಲ ಸ್ಥಬ್ಧವಾದಾಗ ಚಲನೆ ಪೂರ್ಣ ಸ್ಥಬ್ಧ....
ಒಳಗಿಂದೊಮ್ಮೆಲೇ ಕೂಗು
"ಅಣ್ಣನ ಮದುವೆಗೆ ಕಡಿಮೆ ಬೆಲೆಯ ಸೀರೆ ಕೊಟ್ಟನೆಂದು ಹೋ ಎಂಬ ಸದ್ದು" ಕೂತಿದ್ದವ ಹಾಗೆ ತಿರುಗಿ ನೋಡಿದ
"ಅವಲಕ್ಕಿ, ಪವಲಕ್ಕಿ, ಕಾಂಚನ ಮಿಣಮಿಣ ಡಾಂ ಡಸ್...............

ಬದುಕು, ತೀರಾ ವಿಶಿಷ್ಟವೂ, ವೈಶಿಷ್ಟವೂ, ಆದ....

ಉಗೀ ಬಂಡಿ....., ಈಗ ರೈಲು

ಮೂರನೆ ದರ್ಜೆ ಕಡೇ ಭೋಗಿ
ಮೂರು ಜನ ಕೂರೋ ಜಾಗ ನಾಲ್ಕು ಜನ ಕೂತು

ಚಾಯ್ ಚಾಯ್ ಕಾಫೀ, ಇಡ್ಲಿ, ವಡೆ
ಮದ್ದೂರು ವಡೆ ಸಾಮಿ ಮದ್ದೂರು

"ಶಿವಪ್ಪ ಕಾಯೋ ತಂದೆ ಮೂಲೋಕ ಸಾಮಿ ದೇವ"
ನಕ್ಷತ್ರದಂಚಿನ ನೀಲಿ ಬಣ್ಣದ, ಹೊಟ್ಟೆ ಕಾಣೋ ಪುಟ್ಟ ಬಟ್ಟೆ
ಕೈಯಲ್ಲಿ ಪಾತ್ರೆ

ಮಳೇ ಬರೋ ಹಾಗಿದೆ ಕಿಟ್ಕಿ ಹಾಕಿ

ಹೇ ಮೂದೇವಿ
ಹಾದರಾನ ಚಾದರ ಹೊದ್ದು ಮಾಡ್ಯಳ ಹಾದರಗಿತ್ತಿ
ರಾತ್ರಿ ಹೋದೊನು ಬರ್ಲಿಲ್ನೋಡು ಭೋಳೀಮಗ

ಹೇ ಜೋಕಾಲಿಯಲ್ಲಿ ಮಗು ಕಕ್ಕ ಮಾಡಿದೆ

ಟಿಕೆಟ್..... ಟಿಕೆಟ್.....

ಅಯ್ಯೋ ಸಾಮೀ
ನಾ  ಸಾಮೀ
ನಾನು
ಅದೇ ಅದೇ
ಮಾಕಾಹಳ್ಳಿಯ ನರಸಿಂಘಯ್ಯನವ್ರು
ಇಂಗ್ಲೀಷ್ನವ್ರ ಜಮಾನ್ದಾಗ ಪಟ್ಯಾಲ್ರು
ಆ ನರಸಿಂಘಯ್ಯನವ್ರ ಮಗ ಸುಬ್ಬರಾಯನವ್ರ
ಮಗ ಎಂಕ್ಟಸುಬ್ಬ ನಾನು ಸಾಮಿ
ಅದೇ ನಾ.... ನೂ.....

­ಕ್ಷಮಿಸಿ, ಹೆಸರಿಡಲಾಗದಿದ್ದಕ್ಕೆ

ಆಗ
     ನಾ
ಚಿಕ್ಕವನಿರಬೇಕಾಗಿದ್ದಾಗ
ನನಗೆ
ಜೂಟಾಟ ಮತ್ತು ಕಣ್ಣಾಮುಚ್ಛಾಲೆ
ಬಾಳಾ ಇಷ್ಟ

ಕಾರಣ ಒಂದರಲ್ಲಿ
     ನಾನು
ಸದಾ ಮತ್ತೊಂದಕ್ಕಾಗಿ ಓಡುತ್ತಲೇ ಇರುತ್ತೇನೆ
ಮತ್ತೊಂದರಲ್ಲಿ ಕಣ್ಣಿಗೆ ಕಟ್ಟಿಕೊಂಡು
     ನಾನು
ತಡಕಾಡುತ್ತಿರುತ್ತೇನೆ....


ಈಗ
ನಾ
ದೊಡ್ಡವನಾಗಿರಬೇಕಾಗಿದ್ದಾಗ
ನನಗೆ
ಎರಡು ಸಂಗತಿಗಳು ಅರ್ಥವಾಗಲಿಲ್ಲ
ಒಂದು
ಸ್ನಾತಕೋತ್ತರ ಪದವೀಧರರ ಸ್ವಾಗತ ಸಮಾರಂಭ
ಮತ್ತೊಂದು
ರಕ್ಷಾಬಂಧನ....

ನಾವು
ನಿಮಗಾಗಿ ಏರ್ಪಡಿಸಿದ ಸಮಾರಂಭ ಸ್ವಾಗತ
ಸ್ವಾಗತ ಸಮಾರಂಭಕ್ಕೆ ಆಹ್ವಾನಿಸಲೆಂದು
ನಾ
   ಮತ್ತು
ನಾ
   ಮಾತ್ರ
ಹೋದದ್ದಕ್ಕೆ, ಆಹ್ವಾನಿಸಲು ಉಳಿದವರನ್ನು
ನಾನು
ಕರೆಯಲಿಲ್ಲೆಂದು ಗೋಳಾಡಿದರು
ಅಂದು ನಾನು
ನಮ್ಮ ಪರಿಚೆಯ ಮಾಡಿಕೊಂಡೆವು
ನಾನು
ನನ್ನ ಹೆಸರು
ಊರು ಮಾಕಾಹಳ್ಳಿ
ಸಮಾರಂಭ
ಮುಗಿಯಿತು
ತಿಂಡಿ ತಿಂದು ಕಾಫಿ ಕುಡಿದು ಹೋದರು

ಒಂದು ಮುಗಿಯಿತು ಆದ್ದರಿಂದ ಮತ್ತೊಂದು

ನನಗೆ
ಅಕ್ಕಾ ತಂಗಿ ಯಾರೂ ಇಲ್ಲ
ನಾನು
ಸಾಮಾನ್ಯ ಒಂಟಿ
ಆದರೆ ಮೊನ್ನೆ ರಕ್ಷಾಬಂಧನದ ದಿನ
ಅದೆಲ್ಲೋ ದೂರದ ಊರಿಂದ
ಯಾರೋ ಕಾಣಾದ ಮುಖದಿಂದ
ಬಂದ ಒಂದು
ರಕ್ಷಾಬಂಧನ
ಕೈ ಅನ್ನು ಅಲಂಕರಿಸಿತು...

ನನಗೆ
       ಮೋಹ
ಅವಳಿಗೆ
       ಒಲವು

ಸದಾ
ಅರ್ಥಗಳ ನಿರರ್ಥಕತೆಯ ಸುಳಿಯಲ್ಲೋ
ಶೋಧದಲ್ಲೋ
ಅಥವ ಸಾರ್ಥಕತೆಯ ಹಂಬಲದಲ್ಲೊ
ಆದ್ದರಿಂದ
ನನಗೆ
      ಎರಡೂ
              ಅರ್ಥ
                   ಆಗಲೇ
                           ಇಲ್ಲ

ಮಳೆಯನ್ನ ಹುಟ್ಟೂ ಎಂದೂ ಕರೆಯಬಹುದು

ಸ್ಥಿತಿ ಎಂಬುದು ಒಂದು ನಿಯಮ
                                ಸ್ಥಿತಿಯೇ ಬದುಕಿನ ಸಹಜ ಸಾವಧಾನ ಕ್ರಿಯೆ.

.... ಕಡೆಗೆ ಒಂದು ಧೀನ ನೋಟದಲ್ಲಿ ಎರಡು ದೃಷ್ಠಿಯಾಗಿ ಸೇರಿ ಬೆಳೆದೂ ಬೆಳೆದೂ ಕ್ಷಣಮಾತ್ರಕ್ಕೆ ತಿಳಿಯದಾಗಿ ಕ್ಷಣವೇ ಅಳಿದುಹೋಗಿ ಹುಟ್ಟು ಸಂಭವಿಸಿತು.......

" ಅ
  ಛೆ
  ಪಾಪ
  ಅಯ್ಯೋ
  ಮುಂದೇನು
  ಪುನರಪಿ ಜನನ
  ಮತ್ತೇನೋ ಇದೆ"

  ... ಮತ್ತದೇನನ್ನೋ ಪಡೆವ ಬಗೆ ಸುಲುಭವಲ್ಲ ಜೀವ ಸುಲಭವಲ್ಲ  ಮಾಕಾಹಳ್ಳಿಯ ಬೀದಿಗುಂಟ ನಡೆದಂತಲ್ಲ
                                                                                                                         ಎಂದಾಗಲೆ....


ಯಃಕಶ್ಚಿತ್ ನೀನು
ಬಯಲಲ್ಲಿ ಮಂಡೆ ಸುಡುವ ಬಂಡೆಯ
ಬಿಸಿಲಲ್ಲಿ ಕುಳಿತು ನಕ್ಷತ್ರಗಳ ಲೆಕ್ಕ
ಧೃವ ಕರೀತಾನೆ

ಬೋಧಿ ಮರ ಪಕ್ಕದಲ್ಲೆ ಶಿಲುಬೆ
ಎದುರಿಗೇ ಕೂತವ ಮಹಾಭೂಪ
ಅಮೃತ ಶಿಲಾ ವಿಕಾಸಕ್ಕೆ
ಮೇಕೊಡೆಯುವ ಚಿಂತೆ

ಗುರುತ್ವಾಕರ್ಷಣೆಯು ಸಹಜ ಇದೆ
ವಿಕರ್ಷಣೆ ? ಹತ್ತು ಮೀರಿ ಹನ್ನೊಂ
ದರ ವೇಗ, ನನ್ನದೇ ಕೃತ್ಯ
ಸತ್ಯ ಧೃವ ನನ್ನವನು


  ....ಆಗ ಅದೇ ಮಾಕಹಲ್ಲಿಯ ದಾರಿಗುಂಟ ನಡೆದಾಗ ದಕ್ಕಿದ್ದಿದು ಪಡೆದಿದ್ದಿದು ಇದನ್ನೇ ನಾ ಮಳೆ ಅಂದದ್ದು.....
"ಕಲ್ಲಿನ ರಥ, ಭೂತವನ್ನು ಕಟ್ಟೋ ಶೃಂಗಾರ
 ಗೆದ್ದಲು ಎಂದೋ ತಿಂದ ಶವಕ್ಕೆ ಸುಗಂದ ಪೂ
 ಸಿ ಕೂರಿಸಿ
 ಉಘೇ ಉಘೇ

ಕೂಗುತ್ತಾ ಕೂಗುತ್ತಾ ಕೈ ಕಟ್ಟಿ ಕೂತಾಗ
ನೆರಳನ್ನೆ ಕೆತ್ತೊ ಉಮ…

ಹುತ್ತಗಟ್ಟದೆ.........

ಕಾವ್ಯ ಯಾತಕ್ಕೆ...? ಹಾಗು ಕಾವ್ಯ ಯಾವಾಗ...? ಈ ಪ್ರಶ್ನೆಗಳು ಕಾವ್ಯ ಮೀಮಾಂಸೆಯ ಪಠ್ಯದಲ್ಲಿ ಸುಳಿದಾಡುವ ನಿತ್ಯ ಪ್ರಶ್ನೆಗಳು. ನಾನು ಕಾವ್ಯ ಮಿಮಾಂಸೆಗಿಂತ ಹೊರತಾಗಿ ನನ್ನ ಅನುಭವದ ಘಟನೆಗಳನ್ನ ಇಟ್ಟುಕೊಂಡು ಕಾವ್ಯ ನನಗೆ ದಕ್ಕಿದ ಬಗೆಯನ್ನ ಹೇಳಿಕೊಳ್ಳುತ್ತೇನೆ. ನಮ್ಮ ಮನೆಯಲ್ಲಿ ಯಾವುದೇ ಕಾವ್ಯ ವಾತಾವರಣವಿರಲಿಲ್ಲ. ಚಿಕ್ಕವಯಸ್ಸಿನಿಂದಲೂ ನನಗೆ ಹಾಡುಗಳೆಂದರೆ ಇಷ್ಟ ಇತ್ತು ಅಷ್ಟೆ. ನಾನು ಹೈಸ್ಕೂಲಿನಲ್ಲಿದ್ದಾಗ ನಮ್ಮ ಮೇಸ್ಟ್ರೊಬ್ಬರು ಮೇಸ್ಟ್ರು ಅಂದ್ರೆ ಹೇಗಿರ್ಬೇಕು ಅಂತ ಬರ್ಕೊಂಡು ಬನ್ನಿ ಅಂತ ಹೇಳಿದ್ದ್ರು. ಎಲ್ರೂ ಲೇಖನ ಬರೀತಾ ಇದ್ದಾಗ ನಾನು ಸ್ವಲ್ಪ ಬಿನ್ನವಾಗಿ ಇರಲಿ ಅಂತ ಹೇಳಿ ವಚನದ ರೀತಿ ಏನನ್ನೋ ಬರೆದುಕೊಂಡುಹೋದೆ, ಅದಕ್ಕೆ ನನ್ನ ಮೇಸ್ಟ್ರು ಯಾರೋ ಬರ್ದಿರೋದನ್ನ ಕಾಪಿ ಹೊಡೀತೀಯ ಅಂತ ಬೈದಿದ್ದರು. ನನ್ನ ಮೊದಲ ಕಾವ್ಯ ಪ್ರಯತ್ನ ಆ ರೀತಿ ಹಾಳಾಗಿತ್ತು. ನಂತರ ನಾನು PU ಅಲ್ಲಿ ಓದೂ ಓದೂ ಅಂತ ಕಳ್ದುಬಿಟ್ಟೆ. ಆದ್ದರಿಂದ ನನಗೆ ಸಾಹಿತ್ಯದಬ್ಯಾಸ ಆಗಲೇ ಇಲ್ಲ. ಇಂಜನೀಯರಿಂಗನ್ನು ಬಿಟ್ಟು ಪದವಿ ತರಗತಿಗಳಿಗೆ ಸೇರಿದ ಮೇಲೆ ಮತ್ತೆ ನನ್ನ ಸಾಹಿತ್ಯದ ಅಬ್ಯಾಸ ಶುರು ಆಯಿತು. ಅದೇ ಸಮಯದಲ್ಲಿ ನಮ್ಮ ಮನೇಲಿ TV ಕೇಬಲ್ ಇಲ್ಲದ್ದರಿಂದ ಸಮಯ ಕಳೆಯಲು ಸಾಹಿತ್ಯ ಓದಲು ಆರಂಭಿಸಿದೆ. ಆಗೆಲ್ಲ ನನಗೆ ಏನನ್ನೋ ಸಾದಿಸಬೇಕು, ದೊಡ್ಡ ಹೆಸರು ಮಾಡಬೇಕು ಅಂತೆಲ್ಲ ಆಸೆಗಳಿತ್ತು. ಆಗ ನನಗೆ ಬರೆಯಲಿಕ್ಕೆ ಬರ್ತಾ ಇದ್ದದ್ದರಿಂದ ಬರವಣಿಗೆಯಲ್ಲಿ ಮುಂದುವರೆದರ…

ಬೆತ್ತಲಾಗಿ ಬಯಲಾಗುವ ಮುನ್ನ

"ಸಾಕ್ಷಿಪ್ರಜ್ಞೆ--ಎಲ್ಲವನ್ನೂ ಸಾಕ್ಷಿಯಾಗಿ ನೋಡುವ ನಿಲುವು"                                                            ..ಕನ್ನಡ ನಿಘಂಟು "ತನ್ನತನದ ಅರಿವು ಮನುಷ್ಯತ್ವದ ವಿಶೇಷ ಲಕ್ಷಣ......ಮನುಷ್ಯತ್ವದ ವಿಶೇಷಲಕ್ಷಣವಾದ ಈ ಸಾಕ್ಷಿಪ್ರಜ್ಞೆಯ ಬೆಳವಣಿಗೆಯೆ ಮನುಷ್ಯನ ನಿಜವಾದ ಬೆಳವಣಿಗೆ ಎನ್ನಬಹುದು...."                                                             ಗೋಪಾಲಕೃಷ್ಣ ಅಡಿಗ     "ಸಾಕ್ಷಿಯ ಮುನ್ನುಡಿಯಲ್ಲಿ"

ಬರವಣಿಗೆಯನ್ನ ಆರಂಬಿಸಿದ್ದೇನೆ. ನನ್ನೊಡನೆ ನಡೆವ ನಿತ್ಯ ಮುಖಾಮುಖಿ. ಸಮಾಜದೊಡನೆ ಸಂವಾದ. ಸಾಕ್ಷಿಪ್ರಜ್ಞೆಯ ಹಾದಿ. ನಾನು ಯಾಕೆ ಬರೆಯುತ್ತೇನೆ ಇನ್ನೂ ಅಷ್ಟು ಸ್ಪಷ್ಟವಾಗಿಲ್ಲ. ಆದರೆ ಬರೆಯದೆ ಹೋದರೆ ಉಸಿರುಕಟ್ಟಿದಂತೆ ಆಗುತ್ತದೆ. ಆ ಕಾರಣಕ್ಕೆ ಬರೆಯುತ್ತೇನೆ. ಈಗ ಈ ಬ್ಲಾಗ್ ಅನ್ನು ಆರಂಬಿಸಿ ಅದರಲ್ಲಿ ನನ್ನ ವಿಚಾರಗಳನ್ನು ತಿಳಿಸಲು ಹೊರಟಿದ್ದೇನೆ. ನನ್ನೆಲ್ಲಾ ಗೆಳಯರಿಗೆ ಒಂದು ವಿಚಾರವನ್ನ ಹೇಳಬೇಕಿದೆ. ನಾನು  ಕಾಲ ಹರಣಕ್ಕೆ ಬರೆಯುತ್ತಿಲ್ಲ. ಆದ್ದರಿಂದ  ಕಾಲಾಹರಣಕ್ಕಾಗಿ ಓದಬೇಕೆಂದು ಬಯಸುವವರು ದಯವಿಟ್ಟು ಇದನ್ನ ಓದಬೇಡಿ. ನಿಮ್ಮ ಸಮಯ ವ್ಯರ್ಥ. ಬೇರೇನನ್ನಾದರೂ ಮಾಡಿ. ಬರವಣಿಗೆ ನನ್ನನ್ನು ಹುಡುಕಿಕೊಳ್ಳುವ ತವಕದ ಹಾದಿ. ಇಲ್ಲಿ ನನ್ನನ್ನೇ ನಾನು ಪ್ರಶ್ನಿಸಿಕೊಳ್ಳಬೇಕಿದೆ. ಆ ಪ್ರಶ್ನೆಗಳಿಗೆ ಹಾಗು ನನ್ನಲ್ಲೆ ನನಗೆ ಕಂಡ ಉತ್ತರಗಳಿಗಾಗಿ ಈ ಬರಹಗಳು. 
ಅ…