ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸಾಕ್ಷಿ

ನಾನು ನಿನಗೆ ಮೊದಲ ಪತ್ರ ಬರೆದ ದಿನ ನೆನೆಪಿಲ್ಲದೇ ಇರಬೊಹುದು, ಆದರೆ ಆ ಸ್ಥಿತಿ ನೆನೆಪಿದೆ. ಆಗ ನಡೆದ ಯಾವುದೋ ಕಾರಣಕ್ಕೆ, ಯಾಕೋ ಎಲ್ಲವನ್ನೂ ತೊರೆಯಲು ಸಿದ್ದನಾಗಿ, ಹಾಗೆ ತೊರೆಯಲು ತೊಡಗಿದಾಗ ಹಲವರನ್ನು ತೊರೆದು ನಿನ್ನ ಸಂಗಡ ಬಯಸಿ ನಿನ್ನನ್ನ ಅಪ್ಪಿಕೊಂಡೆ. ಆಗ ನಿನಗೆ ನನ್ನ ಮೊದಲ ಪತ್ರ ಬರೆದಿದ್ದೆ. ನಿನ್ನಿಂದ ಯಾವ ಉತ್ತರವೂ ಬರುವುದಿಲ್ಲ ಅಂತ ಸ್ಪಷ್ಟವಾಗಿ ತಿಳಿದಿದ್ದರೂ ಬರೆದೆ. ನಿನ್ನ ಉತ್ತರಕ್ಕಿಂತ ಹೆಚ್ಚಾಗಿ ನೀನು ನನ್ನ ಮಾತನ್ನ ಕೇಳೆಬೇಕಿತ್ತು ಅಷ್ಟೆ. ಹೀಗೇ ಬರೆಯುತ್ತಾ ಹೋದೆ.ಕಂಡದ್ದನ್ನ, ಕಣ್ಣಿಗೆ ಕಂಡ ಪ್ರತಿಯೊಂದನ್ನ. ಕಂಡು ಅದನ್ನ ಅನುಭವಿಸಿ, ನಿನಗೆ ತಿಳಿಸುತ್ತಾ ಹೋದೆ. ಯಾವುದೋ ಕ್ಷಣ ನಿಂತುಬಿಟ್ಟೆ. ನಿನ್ನನ್ನು ಬಿಟ್ಟು ಹೊರಟು ಬಿಡುವ ಸಂದರ್ಭ ಒದಗಿತು, ಅಲ್ಲ ನಾನೇ ನಿರ್ಮಿಸಿಕೊಂಡೆ. ಹೊರಟು ಬಿಟ್ಟೆ. ಕಡೆಗೆ ನೀನೂ ನನಗೆ ಬೇಸರವಾಗಿ ಹೋಗಿದ್ದೆ. ನಿಜಕ್ಕೂ ಅದು ಬೇಸರವ! ಮತ್ತೇ ಮತ್ತೇ ಪ್ರಶ್ನಿಸಿಕೊಳ್ಳುತ್ತಲೇ ಇದ್ದೇನೆ.
ನಿನ್ನನ್ನೂ ನಿನ್ನ ಜೊತೆಗಿನ ಮಾತನ್ನೂ ಬಿಟ್ಟಾಗ ನಾನು ಎಲ್ಲರೊಡನೆಯೂ ಮಾತಾಡತೊಡಗಿದೆ. ಏನೋ ಮಾಡಬೇಕು. ಸಾದಿಸಬೇಕು. ಕಡಿದು ಕಟ್ಟೆ ಹಾಕಿಬಿಡಬೇಕು. ನನ್ನದು ಎಂದು ಏನನ್ನಾದರೂ ಸ್ಥಾಪಿಸಿಬಿಡಬೇಕು. ಎಲ್ಲರೊಳೊಗೊಂದಾಗಿ ಸೇರಲು ತೊಡಗಿದೆ. ಜಗತ್ತು ವಿಶಾಲವಾಗಿತ್ತು. ಎಲ್ಲರಿಗೂ ನಾನು ಬೇಕಿತ್ತು. ಅಥವಾ ನಾನು ಹಾಗೆ ಬಾವಿಸಿದೆ. ಈಗ ಅನ್ನಿಸುತ್ತೇ, ಅವರಿಗೆಲ್ಲರಿಗೂ ನಾನು ಬೇಕಿತ್ತು ಎಂಬೋದು ಮಾತ್ರ ಸ…

.............................

(೧) ಮಧ್ಯ ರಾತ್ರೀಲಿ ಯಾವುದೋ ಕನಸ ಕಂಡು ಎದ್ದು ತಬ್ಬಿಬ್ಬಾಗಿ ಹೆದರಿ ಕತ್ತಲನ್ನ ಮುಟ್ಟಿ ಮುಟ್ಟಿ ನೋಡುತ್ತ ದೀಪವಾಕಿದಾಗ ಕನ್ನಡಿಯಲ್ಲಿ ನನ್ನದೊಂದು ಬಿಂಬವ ಕಂಡು ಯಾರೋ ಎಂದು ಗಾಬರಿಗೊಂಡು ಮೈ ಮುಟ್ಟಿ ಮುಟ್ಟಿ ಗಿಚ್ಚಿ ನೋವನ್ನನುಭವಿಸಿ "ನಿಜಕ್ಕೂ ನಾನೇನ ಅದು?"
ನಿಜದ ರಾತ್ರಿಗಳು ವಾಸ್ತವದ ಬಿಂಬದಲ್ಲಿ ಕೊನೆಗೊಂಡಿತು.
(೨)
ಬದುಕು ನನ್ನನ್ನ ಕವನದ ಸಾಲಿನ ರೂಪಕವನ್ನಾಗಿಸಿಬಿಟ್ಟಿತು.
ಮೊದಲ ರಾತ್ರಿ ಕಳೆದ ಆ ಹುಡುಗಿ ರಾತ್ರಿ ನಿದ್ರೆಯಿಲ್ಲದ ಆ ಕೆಂಪು ಕಣ್ಣುಗಳಿಂದಲೇ ನೇರ ನನ್ನ ಮುಂದೆ ನಿಂತು "ಬಾ ಹೋಗುವ" ಎಂದಾಗ ಕವನ ಬರೆಯಲು ಹೊರಟುಬಿಟ್ಟೆ.
ಹೀಗೆ ಹೊರಟವನ ದಾರಿಯಲ್ಲಿ ಯಾವುದೋ ಶವಯಾತ್ರೆ ಬಂದು ಸೇರಿ ಶವಕ್ಕೆ ಬುರುಗೆಸೆಯುತ್ತಿದ್ದವನೊಬ್ಬ ಯಾವುದೋ ಅನಿಮಿತ್ತ ಕಾರ್ಯಕ್ಕೆ ಹೋಗುತ್ತ ನಾ ನಿಮಿತ್ತವಾಗಿ ಇದೇ ಕಾರ್ಯಕ್ಕೆ ಬಂದವನೇನೋ ಎಂಬಂತೆ ನನ್ನ ಕೈಲಿ ಬುರುಗಿನ ಚೀಲವನ್ನ ಕೊಟ್ಟು ಚಲ್ಲಲೇಳಿ ಹೊರಟುಬಿಟ್ಟ.
ನನಗೆ ರೂಪಕಗಳಾಗುವುದು ಕಂಡೀತ ಬೇಕಿಲ್ಲ ಅದಕ್ಕಾಗಿ
(೩) ಚಿಟ್ಟೆಯ ಮೊಟ್ಟೆಗಳನ್ನುಡುಕಿ ಹೊರಟೆ ಕಂಡಿತು ಕೂತೆ ಮೊಟ್ಟೆಯೊಡೆದು ಮರಿ ಹೊರಬರುವ ತನಕ ಹೊರಬಂದ ಮರಿಹುಳು ತಿನ್ನಲು ಕೂತಿತು ತಾ ಪೂರ್ಣ ಬೆಳೆವರೆಗು ನಾ ನೋಡುತ್ತಾ ಕೂತೆ ವಿಕಾಸದೊಳಗಿನ ಪ್ರತೀ ಹಂತವನ್ನ ಪ್ರತೀ ಕ್ಷಣವನ್ನ ಯಾವುದೋ ರೆಂಬೆಗೆ ಕಚ್ಚಿ ಕೂತಿತು ಒಂದು ಕ್ಷಣಹಿಂತಿರುಗಿ ನೋಡುವಷ್ಟರಲ್ಲಿ ಮರಿಹುಳು ಕಾಣೆ ಮರಿಹುಳು ಪೊರೆಹುಳುವಾಗಿಹೋಗಿತ್ತು.
ನಾ ಚಿಟ್ಟೆಯನ್ನ ಕಾಣಲೇ ಬೇಕಿತ್ತು ಬದುಕಿನ ಪರಮೋ…

__

ನಾನು
       ಕೇವಲ
              ಸಾಕ್ಷಿ
                     ಮಾತ್ರ

ಸುಮ್ಮನೆ ನಡೀತಿದ್ದೆ
ಕಾಲ ಕೆಳಗೆ  ಒಂದು ಹುಳ ಸಿಕ್ಕು ಸತ್ತೋಯ್ತು.
ಒಮ್ಮೆ ಹಾಗೇ ದಿಟ್ಟಿಸಿ ನೋಡ್ದೆ
ಮತ್ತೇ ಮತ್ತೇ ನೋಡ್ದೆ
ಯಾಕೋ ಅನ್ನಿಸ್ತು
ನಾನು ಪರಮ ಪಾಪಿ, ಚಾಂಡಾಲ.    

ಹುಟ್ಟು ಹಬ್ಬದ್ದಿನ
ಸತ್ಮೇಲೆ ದೇಹಾನ  ದಾನ ಮಾಡೋ
ಒಪ್ಪಂದಕ್ಕೆ
ಸಹಿ ಹಾಕೋಣ ಅಂತಂದುಕೊಂಡು ಹೋದೆ,
ತೀರ ಹತ್ತಿರದ ಸಂಬಂಧಿಕರ ಅಪ್ಪಣೆ ಬೇಕು ಅಂದುಬಿಟ್ಟರು.

ನಾನು
       ಕೇವಲ
              ಸಾಕ್ಷಿ
                     ಮಾತ್ರ

ಆದರೆ.........

ಮುಖಾಮುಖಿ

"ಬೆಳಗಾಯ್ತು ಏಳೋ, ಇಗೋ ಏಳಲಿಲ್ಲ ಅಂದ್ರೆ ನೀರು ತಗೊಂಡು ಬಂದು ಸುರೀತೀನಿ"
ಅಂತ ಅಣ್ಣ(ಅಪ್ಪ) ಎಷ್ಟೇ ಹೇಳ್ತಾ ಇದ್ದರೂನೂ ಕಾಲ ಬಳಿ ಇದ್ದ ಹೊದಿಕೆಯೊಳಗೆ ಮುಖ ಅಡಗಿಸಿಟ್ಟು ಮಲಗಿಬಿಡೋನು. ಅಪ್ಪ ಬೇರೆ ಕಡೆ ಹೋದರೆ ಅಜ್ಜಿ ತನ್ನದೂ ಹೊದಿಕೆ ಹೊದ್ದಿಸಿ ಮುದ್ದಿಸೋಳು. ಆ ಚಳೀಲಿ ಬೆಚ್ಚಗೆ ಹೊದಿಕೆ ಹೊದ್ದು ಮಲಗಿರ್ಬೇಕಾದ್ರೆ ಅದೆಷ್ಟು ಕನಸುಗಳೋ, ಕಬ್ಬಡಿ ಆಡೋವಾಗ ನಾಲ್ಕು ಜನನ್ನ ಒಬ್ಬನೆ ಎತ್ತಿ ಕೆಡವಿದ ಹಾಗೆ, ಕೈಗಳನ್ನ ಪಟ ಪಟ ಅಂತ ಹಕ್ಕಿತರ ಹೊಡೀತ ಹೊಡೀತ ಮೇಲೆ ಹಾರ್ತ ಇರೋ ಹಾಗೆ, ಮಾಯಬಜಾರ್ ಸಿನಿಮಾದಲ್ಲಿ ಆಯಪ್ಪನ  ಬಾಯೊಳಗಡೆಗೆ ಅಷ್ಟೊಂದು ತಿಂಡಿ ಅದರಷ್ಟಕ್ಕೆ ಅದೇ ಹೋಗ್ತಿತ್ತಲ್ಲ ಆ ರೀತಿ, ಅಜ್ಜಿ ಅಮ್ಮ ತಿಂಡೀನ ತಂದಿಡ್ತಾ ಇದ್ದರೆ ಬಾಯೊಳಗೆ ನೇರವಾಗಿ ಹೋಗ್ತ ಇರೋ ರೀತಿ, ನಾಲ್ಕು ಏರೋಪ್ಲೇನ್ ಚಿಟ್ಟೆಗಳನ್ನ ಹಿಡ್ಕೊಂಡು ಆಡಿಸ್ತಾ ಇರೋ ರೀತಿ,  ಕನಸು ಕಾಣ್ತನೇ ಕನಸಿನಲ್ಲಿ ಕನವರಿಸ್ತಾ, ಏಡಿ ಅಂತಾನೋ, ಕಂಬಾಲಪ್ಪನ್ ಗುಡ್ಡ ಅಂತಾನೋ ಅಂದು ಬಿಡೋನು. ಅಮ್ಮಂಗೆ ಕೇಳಿಸಿದ್ರೆ
" ಯಾಕೋ ನೆನ್ನೆ ಏಡಿ ಹಿಡೀಲಿಕ್ಕೆ ಹೋಗಿದ್ಯ, ಇಲ್ಲ ಕಂಬಾಲಪ್ಪನ್ನ ಗುಡ್ಡಕ್ಕೆ ಹೋಗಿದ್ಯ, ನಿಮಣ್ಣಂಗೆ ಹೇಳ್ತೀನಿ, ಕಾಲು ಮುರೀತಾರೆ"
ಅಂತ ಬೆಳೆಗ್ಗೇನೆ ಶುರುಮಾಡಿಬಿಡುತ್ತಿದ್ದಳು. ಹೀಗೆ ಕನಸಿನ ಲೋಕಕ್ಕೂ ವಾಸ್ತವದ ಲೋಕಕ್ಕೂ ವ್ಯತ್ಯಾಸ ಅರಿಯದೆ, ಆ ಕನಸಿನಲ್ಲೆ ಇರಬೇಕಾದರೆ, "ವೆಂಕಟರಮಣ ಗೋವಿಂದಾ ಗೋssವಿಂದ" ಅಂತ ಜೋರು ಜಾಗಟೆ …

ಕವಿ, ಕವಿತೆ, ಮನುಷ್ಯ

ನೋಡೀ,
ಇದು ಕವಿತೆ ಅಲ್ಲ.

ಮನುಷ್ಯ ಕವಿತೇನ ಬರೀತಾನೆ
ಕವಿತೆ ಮನುಷ್ಯನ್ನ ಬರಿಯುತ್ತೆ
ಎರ್ಡೂ ತಪ್ಪು.
ಕವಿಯಾದ ದುರಂತದ ಪರಿಹಾರಕ್ಕೆ ನಾ ಕವಿತೆ ಬರೀತೀನಿ.

ಕವಿತೇನ ಹುಡುಕಿ ಹೋಗ್ಬೇಕಂತೆ,
ಮಧ್ಯರಾತ್ರೀಲಿ ಸ್ಮಶಾನಕ್ಕೆ ದಾಳಿ ಇಡೋ ಪ್ರೇತಾತ್ಮಗಳಂತೆ,
ಮೈ ಮೇಲೆ ಬರೋ ದೆವ್ವದಂತೆ,
ಸಾಯುವ ಮಗುವಿನ ಮಾಂಸಕ್ಕೆ ಕಾಯ್ವ ರಣಹದ್ದುವಿನಂತೆ,
ಹಾಗಂತೆ, ಹೀಗಂತೆ,
ಅದೇ
ಕವ್ನಾನಂತೆ.

ಮೈ ನಡುಗುತ್ತೆ. ಎದೆಯಲ್ಲೆಲ್ಲೋ ಜೋರು ನೋವಾಗುತ್ತೆ.
ಸತ್ತು ಹೋಗುತ್ತಿದ್ದೀನಿ ಅಂತನ್ನಿಸುತ್ತೆ.
ಪದದ ಪಕ್ಕ ಪದವಿಟ್ಟದ್ದು ಕವಿತೆಯಾದದ್ದಕ್ಕೆ
ಕಂಗಾಲಾಗುತ್ತೇನೆ.
ಯಾಕೆ ಹೀಗೆ?
ಪ್ರಶ್ನಿಸಿಕೊಳ್ಳುವವನ ಸರದಿಯಲ್ಲಿ ನಿಂತು ತಬ್ಬಿಬ್ಬಾದದ್ದರ  
ಕಾರಣಕ್ಕ?

ಗೊತ್ತಿಲ್ಲ.

ಎಲ್ಲಾ ಮುಗಿದುಬಿಟ್ಟಿದೆಯೆಂಬ ತೀರ್ಮಾನಕ್ಕೆ ಬರಲಿಕ್ಕಾಗುವುದಿಲ್ಲ.

ಅದಕ್ಕೇ ಇರಬೊಹುದು
"ಕ್ಷಮಿಸು ಹುಡುಗಿ,
ನಾ ಸೋತುಬಿಟ್ಟೆ, ಕಾರಣ
ನಾ ಕವಿಯಾಗಿಬಿಟ್ಟೆ"[ಮೇಲಿನ ಚಿತ್ರದ ಆಕರ http://www.passonapoem.com/re_learningpoetry.htm]

.......

ಮಳೆಗೆ ಮುಖವೊಡ್ಡಬೇಕು,
ಎದುರಿಗೆ ನದಿ ಹರಿಯುತ್ತಿರಬೇಕು, ಇಲ್ಲವ ಸಮುದ್ರವಿರಬೇಕು, ಅಥವಾ ದಟ್ಟ ಕಾಡಮಧ್ಯದಲ್ಲಿರಬೇಕು,
ನಿನ್ನೊಡಲಾಳದಲ್ಲಿ ಕಾವು ಪಡೆಯಲಿಕ್ಕೆ.
ಹುಡುಗೀ, ನಾನು ನೀನೇ ಇಟ್ಟ ಮೊಟ್ಟೆ
ಒಡೆಯಲಿ ಬಿಡು ಪ್ರಾಕೃತಿಕವಾಗಿ ನೀ ನೀಡ್ವ ಕಾವುಗೆ
ನೋಡು, ನೀನೇ ನೋಡು, ಮರಿಯಲ್ಲ,
ಸಹಸ್ರಾಕ್ಷ ಪುರುಷ ನಾನೇ ಅದು.
ಪ್ರಕೃತಿಯೆ ಸಾಕ್ಷಿ, ಅದುವೇ ಪ್ರಜ್ಞೆ

.......

ಬುದ್ಧ ಹಾಗೇ ಕೂತಿದ್ದ.
ಹೇ.., ತಥಾಗತ  ಹೇ.., ತಥಾಗತ
ಬುದ್ಧ ಹಾಗೇ ಕೂತಿದ್ದ.
ಮೃಣನ್ಮಯಿ, ಸಾಲಿನ ಅರ್ಥ ಕೇಳುತ್ತಾರೆ
ಬುದ್ಧನನ್ನ ಅಲ್ಲೇ ಬಿಟ್ಟು ನಾ ನೆಡೆದು ಬಿಟ್ಟೆ.

.......

ಅರ್ಥ ಎಂದರೆ?
ಕತ್ತಲ ರಾತ್ರಿಯಲ್ಲಿ,
ಎಲೆ ಉದುರಿದ ಮರದ ಕೆಳಗಲ್ಲಿ,
ನಿಂತು
ತಲೆಯಿತ್ತಿ ಕಂಡಾಗ
ನಕ್ಷತ್ರಗಳೆಲ್ಲಾ ಬಂದಿಸಲ್ಪಟ್ಟಂತೆ ಕಂಡವು

ಅನಂತ ಸ್ವಾತಂತ್ರ್ಯದೆಡೆಗೆ......

ನನ್ನ ಬದುಕಿನ ಅರ್ಥವೇನು? ಇಷ್ಟಕ್ಕೂ ಮನುಷ್ಯ ಬದುಕಿಗೆ ಅರ್ಥ ಎಂಬೋದು ಇದೆಯ? ಯಾವುದು ನನ್ನನ್ನು ಈ ಹುಟ್ಟಿನ ಸಾರ್ಥಕ್ಯವನ್ನ ನಿರೂಪಿಸುತ್ತದೆ? ಪ್ರತೀ ಬಾರಿಯೂ ನಾನು ಇಡುವ ಪ್ರತೀ ಹೆಜ್ಜೆಯ ದಿಕ್ಕನ್ನ ಈ ಪ್ರಶ್ನೆಗಳು ನಿಯಂತ್ರಿಸುತ್ತಿವೆ. ಬದುಕಿನ ಅರ್ಥವನ್ನ ಅರಿಯುವುದಲ್ಲದೆ ಈ ಬದುಕಿಗೆ ಉದ್ದೇಶವೇ ಇಲ್ಲ ಎಂದು ಒಂದು ದಿಕ್ಕಿನಲ್ಲಿ ಅನ್ನಿಸಿದರೆ, ಮತ್ತೊಂದು ದಿಕ್ಕಿನಲ್ಲಿ ಮನುಷ್ಯ ಬದುಕಿಗೆ ಅರ್ಥ ಎಂಬೋದು ಇದೆಯಾ ಅನ್ನೋ ಪ್ರಶ್ನೆಯೂ ಸೇರುತ್ತದೆ. ಒಟ್ಟಿನಲ್ಲಿ ಸದ್ಯ, ಬದುಕಿನ ಧ್ವನಿ ಗ್ರಹಿಕೆಯ ಮಾರ್ಗಗಳನ್ನ ಹುಡುಕಿ ಹೊರಟವನಿಗೆ ಧ್ವನಿ ಗ್ರಹಿಕೆಗೆ ಯಾವುದೇ ಮಾರ್ಗಗಳಿಲ್ಲ ಎಂಬೋ ಹಂತಕ್ಕೆ ಬಂದಿದ್ದೇನೆ. ಅದರೂ ಬದುಕು ಎಂಬೋದು ಅತ್ಯಂತ ನಿಗೂಢವೂ ಸಂಕೀರ್ಣವೂ ಆದ ಸಂರಚನೆಯಾಗಿದೆ. ಹೀಗೆ ಯಾವುದೋ ಧ್ವನಿಯ ಜಾಡನ್ನ ಹುಡುಕಿ ಹೊರಟವ ಹಲವು ಬಾರಿ ಒಂಟಿಯಾದೆ, ನನ್ನ ಮಾತು ಯಾರಿಗೂ ಕೇಳಲಿಲ್ಲ. ಹಲವು ಬಾರಿ ಹೇಳಲೂ ಕೂಡ ಆಗಲೇ ಇಲ್ಲ. ಆಗಲೇ ಬಹುಶಃ ನಾನು ಸಾಹಿತ್ಯ ಹಾಗು ಬರವಣಿಗೆಯನ್ನ ರೂಡಿಸಿಕೊಂಡೆ ಅಂತ ಅನ್ನಿಸುತ್ತೆ. ಏಕಾಂಗಿಯಾಗಿದ್ದೂ ಒಂಟಿತನವನ್ನ ಮೀರಲಿಕ್ಕೆ ನನಗೆ ಸಾಹಿತ್ಯ, ಬರವಣಿಗೆ ಬೇಕಾಯಿತು, ಆದ್ದರಿಂದ ಬರೆದೆ. ಈಗಲೂ ಬರೆಯುತ್ತಿದ್ದೇನೆ. ಅನುಭವ ನಿರೂಪಣೆ ಹಾಗು ಸಂವಹನದಿಂದ ಪಡೆವ ಅರಿವು ಮನುಷ್ಯನನ್ನ ಮನುಷ್ಯನನ್ನಾಗಿಸುತ್ತೆ. ನನ್ನ ಎಲ್ಲಾ ಅಹಂಕಾರವನ್ನ, ನಾನೆಂಬೋ ದರ್ಪವನ್ನ ಹೋಗಲಾಡಿಸಿ ಮೃಗಕ್ಕಿಂತಲೂ ಹೀನನಾಗುವ ಮನುಷ್ಯನ ಮನಸ…

ಕಥೆ ಸಂಖ್ಯೆ ೧

[ಮೇಲಿನ ಕಥೆಯ ಹೆಸರಿಗೆ ಯಾವುದೇ ನಿಗೂಢ ಅರ್ಥಗಳಾಗಲಿ, ಧ್ವನ್ಯಾರ್ಥಗಳಾಗಲಿ ಇರುವುದಿಲ್ಲ. ಈ ಕಥೆಗೆ ಹೆಸರಿನ ಅವಶ್ಯಕತೆಯಿಲ್ಲ. ಆದರೆ ಮುಂದೆ ಈ ಕಥೆಯನ್ನ ಗುರುತಿಸಬೇಕಾದರೆ ಇರಲಿ ಎಂದು, ಇದಕ್ಕ ಕಥೆ ಸಂಖ್ಯೆ ೧ ಎಂದು ಹೆಸರಿಸಿರುತ್ತೇನೆ]

ಬಸುರೀನ?
(ನಾನು ಅವಳ ಹೊಟ್ಟೆಯ ಕಡೆಗೆ ನೋಡುತ್ತಿದ್ದೆ)
ಇರಲಾರದು, ಇಲ್ಲವ ಇರಬೊಹುದು,
ನನಗೇನಂತೆ?

ಅವಳ ಮುಖದಲ್ಲಿ, ನನ್ನ ಮುಖದಲ್ಲಿ, ಇಬ್ಬರ ಮುಖದಲ್ಲೂ ಯಾವ ಕ್ರಿಯೆಯೂ ಇಲ್ಲದ, ಪರಿಚಿತರ? ಅಪರಿಚಿತರ? ಎಂಬೋ ಪ್ರಶ್ನೆಯೂ ಇಲ್ಲದ,  ನೋಟಗಳ ಮುಖಾಮುಖಿಗೆ ನಾನು ಸಾಕ್ಷಿಯಾದೆ. ಅವಳು ಸಾಕ್ಷಿಯಾದಳ?  

ಸ್ವಲ್ಪ ಹೊತ್ತಾದಮೇಲೆ ಅವಳು ಹೊರಟು ಹೋದಳು.
..............................................................................................
..............................................................................................
..............................................................................................

ಹುಟ್ಟು, ಹಸಿವು, ಎರಡರ  ಕೇಂದ್ರವಾದ ಹೊಟ್ಟೆ ನನ್ನನ್ನ ಸುಮ್ಮನೆ ಆಕರ್ಷಿಸಿರಲಿಲ್ಲವೇನೋ!!

ನಾನೇಕೆ ಅವಳ ಹೊಟ್ಟೆಯೆಡೆಗೆ ಆಕರ್ಷಿತನಾದೆ?
ಸಂಬಂಧಗಳ ಬಲೆ ಹರಡುವಾಗ ಅದರೊಳಗಿದ್ದು, ಅದರ ಹರಡುವಿಕೆಗೆ ಕೇವಲ ಪ್ರೇಕ್ಷಕನಾಗಿ ಇರಬೇಕೆ?.
ಆ ಬಗ್ಗೆ ಚಿಂತಿಸಿದೆ, ತಲ್ಲಣನಾಗಿದ್ದೆ. ಯಾಕೆ ತಲ್ಲಣ ಎಂಬುದರ ಕಾರಣ …

ಕಲ್ಲಲಿ ಕಂಡ ಚೈತನ್ಯ

ಮೊದಲಿಗೆ ನಾನು ಫೋಟೋಗ್ರಾಫಿಯನ್ನ ಇಷ್ಟ ಪಟ್ಟವನೇ ಅಲ್ಲ. ಅದಕ್ಕೆ ಕಾರಣವೂ ಇತ್ತು. ಕಣ್ಣೆದುರಿಗೆ ಕಾಣುತ್ತಿರುವುದನ್ನ ನೇರವಾಗಿ ಕಾಣಬೇಕು ಹಾಗು ಅನುಭವಿಸಬೇಕು ಎಂದೇ ಭಾವಿಸಿದ್ದೆ. ಆದ್ದರಿಂದ ಕ್ಯಾಮರ ಎಂಬೋದು ಎದುರುಗಿನ ವಾಸ್ತವವನ್ನ, ಸೌಂದರ್ಯವನ್ನ ಕಾಣಲು ಅಡ್ಡಿ ಎಂದು ನಂಬಿದ್ದೆ. ನಂತರ ಸಾಹಿತ್ಯ ಹಾಗು ನಾಟಕ, ಒಟ್ಟಾಗಿ ಕಲೆಯ ತಾತ್ವಿಕತೆಯಲ್ಲಿ, ಒಟ್ಟೂ ಕಲೆಯ ಪ್ರಸ್ಥುತತೆ, ಕಲೆಯು ನಮಗೇಕೆ ಎಂಬೋ ಪ್ರಶ್ನೆಯಲ್ಲಿದ್ದಾಗ ನನಗೆ ಒಂದು ಸಂದೇಹ ಶುರುವಾಯಿತು. ಎಲ್ಲಾ ಕಲೆಗಳು ನಮ್ಮದುರಿಗೆ ನಡೆದದ್ದನ್ನು, ಅಥವ ನಡೆದು ಹೋದದ್ದನ್ನು, ಮತ್ತೆ ನಮ್ಮೆದುರಿಗೆ ಇಡಲು ಕಾರಣವೇನು ಎಂಬೋದು.  ಸಾಹಿತ್ಯ, ಮುಖ್ಯವಾಗಿ ಕಾದಂಬರಿ ಅದು ಆಗಲೇ ನಡೆದು ಹೋದ ಅಥವ ನಮ್ಮೆದುರಿಗೆ ನಡೆಯುತ್ತಿರುವುದನ್ನ ಮತ್ತೆ ನಮ್ಮ ಮುಂದೆ ಇಡುತ್ತದೆ. ಇದೇ ರೀತಿ ನಾಟಕ ಕೂಡ ಅಲ್ಲವೆ ಅಂದೆನಿಸಿತು. ಅಂದರೆ ನನ್ನ ಗ್ರಹಿಕೆಗೆ ಕಲೆ ಸಾಹಿತ್ಯ ಎರೆಡೂ ನಡೆದದ್ದನ್ನ, ನಡೆಯುತ್ತಿರುವುದನ್ನ ಮತ್ತೆ ನಮ್ಮ ಎದುರಿಗೆ ಇಡುತ್ತವೆ . ಹೀಗಾಗಿ ಕಲೆ ಹಾಗು ಸಾಹಿತ್ಯ ಎರೆಡೂ ನಮಗೆ ನೀಡೋದು ಬದುಕಿನ ಫೋಟೋವನ್ನಲ್ಲವೆ ಎಂದೆನಿಸಿತು. ಆಗ ನೇರವಾಗಿ  ಕ್ಯಾಮರಾದಲ್ಲಿ ಯಾಕೆ ಕಾಣಬಾರದು, ಹಾಗೆ ಕ್ಯಾಮರಾ ಕಣ್ಣಿಂದ ಜಗತ್ತನ್ನ ಕಾಣೋದು ಕಲೆಯ, ಸಾಹಿತ್ಯದ ಬಗೆಗಿನ ಒಟ್ಟಾಗಿ, ಬದುಕಿನ ಬಗೆಗಿನ ಒಳನೋಟವನ್ನ ನೀಡಬಹುದಲ್ಲವೆ ಎಂದು ಕ್ಯಾಮರ ತೆಗೆದುಕೊಂಡು ಹೊರಟೆ.

ನಿತ್ಯವೂ ,ನಿರಂತರವೂ ಬದಲಾಗುತ್ತಿರುವ ಪ್…

ಶಿಕ್ಷಣ:: ಒಂದು ಸಂವಾದ

ವ್ಯವಸ್ಥಿತ ಚಿಂತನಾ ಕ್ರಮದಲ್ಲಿ ನಾವು ಚಿಂತಿಸಬೇಕಾದಾಗ, ವರ್ಥಮಾನವು ಭೂತ ಹಾಗು ಭವಿಷ್ಯತ್ತಿನೊಂದಿಗೆ ಸಮೀಕರಿಸಿಕೊಂಡೇ ಇರುತ್ತದೆ. ಹೀಗೆಂದು ಭಾರತೀಯ ಚಿಂತನಾ ಕ್ರಮದ ಬದಲಾವಣೆಯ ಪ್ರಮುಖ ಕಾಲಘಟ್ಟಗಳನ್ನೂ, ಆ ಕಾಲಘಟ್ಟದ ವ್ಯಕ್ತಿಗಳನ್ನೂ ಅಭ್ಯಯಿಸುತ್ತಿದ್ದೆ. ಹೀಗೆ ನನಗೆ ಪ್ರಮುಖರೆಂದೆನಿಸಿದವರು ರಾಜ ರಾಮ್ ಮೋಹನ್ ರಾಯ್ ರವರು. ಯಾವುದನ್ನ ನಾವು ಆಧುನಿಕ ಭಾರತ ಎಂದು ಕರೆಯುತ್ತೇವೆಯೋ ಅದರ ಆರಂಭವನ್ನ ೧೯ ನೇ ಶತಮಾನದ ಆದಿಗೆ ಸೇರಿಸಬೊಹುದು, ಹಾಗು ಆ ಕಾಲದ ಪ್ರಮುಖ ವ್ಯಕ್ತಿಯನ್ನಾಗಿ ರಾಮಮೋಹನರಾಯರನ್ನು ಗುರುತಿಸುತ್ತ ಆದುನಿಕ ಭಾರತದ ಪಿತಾಮಹ ಎಂದು ಇವರನ್ನ ಕರೆದಿದ್ದಾರೆ.
ರಾಮಚಂದ್ರ ಗುಹ ಬರೆದಿರುವ makers of modern india ಎಂಬ ಪುಸ್ತಕದಲ್ಲಿ ನೀಡಿದ್ದ, ರಾಮಮೋಹನ ರಾಯರು ಬ್ರಿಟೀಶರಿಗೆ ಬರೆದಿದ್ದ ಪತ್ರ ನನ್ನನ್ನು ಆಕರ್ಷಿಸಿತು. ೧೮೨೩ರಲ್ಲಿ ಬರೆದಿದ್ದ ಪತ್ರವದು. ಬ್ರಿಟೀಶ್ ಸರ್ಕಾರ ಭಾರತೀಯರ ವಿದ್ಯಾಬ್ಯಾಸಕ್ಕಾಗಿ ಸ್ವಲ್ಪ ಹಣವನ್ನು ಮೀಸಲಿಟ್ಟಿತ್ತು, ಆಗ ಬ್ರಿಟೀಶ್ ಸರ್ಕಾರ ಒಂದು ಸಂಸ್ಕೃತ ಶಾಲೆಯನ್ನು ಆರಂಬಿಸುವ ಉದ್ದೇಶ ಹೊಂದಿದ್ದರು. ಅದನ್ನು ವಿರೋದಿಸಿ ನಮಗೆ ಸಂಸ್ಕೃತ ಶಾಲೆಗಿಂತ ಆಧುನಿಕ  english ಶಿಕ್ಷಣವನ್ನ ಒತ್ತಿಹೇಳಿದ್ದರು.

"We were filled with sanguine hopes that this sum would be laid out in employing europian gentlemen of talents and education to instruct the natives…

ಮೃಣನ್ಮಯಿ ನಚೀಕೇತರ ಪ್ರೇಮ ಸಲ್ಲಾಪ - ಕವ್ನ ಎಂಬೋ ಹುಟ್ಟು

ಒಂಟಿ,
ಸೂಜಿ ಮೊನೆ ಮೇಲೆ ನಿಂತಿದ್ದೆ.
ರಕ್ತ ಹರೀದೆ ಅನ್ಬವಿಸೋ ಯಾತನೆ.
ನೋವು, ಹತಾಷೆ, ಸೋಲು, ದಿಗ್ಭ್ರಾಂತದಲ್ಲಿ ತಲ್ಲಣಗೊಂಡಿದ್ದೆ.
ನಾ ನಿಂತಿರೋದು
ಗೊತ್ತಿದ್ದೂ
ನಿಂತಿದ್ದೆ.(ಅದು ನನ್ನ ಕರ್ಮ ಅಂತ ಅನ್ಬೇಡಿ)
ಹಕ್ಕೀನ ಸ್ವಾತಂತ್ರ್ಯದ ಪ್ರತಿಮೆಯಾಗಿಸಿ
"ಮತ್ತೆ ಹಕ್ಕಿ ಹಾರಿತು ನೋಡ"
ಎಂಬ
ಕವ್ನ ಬರ್ದ
ನನ್ನ ಹೀನ ಸ್ಥಿತಿಯಲ್ಲಿ
ಮೃಣನ್ಮಯಿಯನ್ನ ಅಪ್ಪಿಕೊಂಡೆ.
ಇಬ್ರೂ ಹಾದಿ ಬದೀಲ್ ಬಿದ್ದ ಆಕಾಶ ಮಲ್ಲಿಗೇನ
ಕಂಡು
ಅದ್ನ ಹೆಕ್ಕೋಕ್ಕೋಗಿ
ಸಲ್ಲಾಪಕ್ಕಿಳಿದ್ವು
ಅದೇ ನಚೀಕೇತ ಮೃಣನ್ಮಯಿಯರ ಪ್ರೇಮ ಸಲ್ಲಾಪ - ಕವ್ನ ಎಂಬೋ ಹುಟ್ಟು."ಹುಡ್ಗೀ,
ನಿನ್ನ ಹೊಕ್ಕುಳ ಕಂಡರೆ ನಂಗಿಷ್ಟ
ಮತ್ತೆ
ಹುಟ್ಟಬೇಕೆನಿಸುತ್ತೆ"

"ಆಹಾ....
ಹೊಕ್ಕುಳಿಗೊಂದು ಬಂಧವುಂಟೋ ಹುಡ್ಗ
ಆ ಬಂಧದ ಸ್ವಚ್ಛಂದವು
ನೀನಾದಾಗ
ಮತ್ತೇ
ಹುಟ್ಟುತ್ತೀ"


"ಹುಡ್ಗೀ
ನನ್ನ ಹುಚ್ಚಿನ ಪೂರಕ ಕಣೇ ನೀನು
ಹುಚ್ಚಂಗೆ ಕವ್ನ ಬರ್ಯೋ ಹಕ್ಕಿಲ್ಲ
ನಾ ಕವ್ನ ಬರ್ಯೋಲ್ಲ"

"ಹುಡ್ಗ
ನೀನ್ಯಾಕೋ ಕವ್ನ ಬರೀತಿ
ಪದ್ಗಳ ಹಂಗು
ಹೊಕ್ಕುಳಿಗಂಟಿದ ಭಾವವಿರಬೇಕಾದರೆ"


ಮೃಣನ್ಮಯಿ
ನೀನು ಪೂರ್ಣ ಬೆರಗು
ತಿಳಿವ ಹುಚ್ಚು ಹಠಕ್ಕೆ ಅಚ್ಚರಿ
ಕ್ಷಣದ ಅವಗಾಹನೆಗೆ ಆವಾಹನೆ
ದೀರ್ಘಾವಲಂಬಿತ ಪ್ರಕ್ರಿಯೆಯ ಪ್ರತಿಕ್ರಿಯೆ

ನಚೀ
ಬೆರಗಾಗೋ ನಿನ್ನ ಬೆರಗೇ ಪೂರ್ಣ
ನಿನ್ನ ಅಚ್ಚರಿಯಲ್ಲಿನ ಸಹಜ - ಹುಚ್ಚು ಹಟ
ಹೊಕ್ಕುಳ ಗುಣಿಯಲ್ಲಿಟ್ಟಿದ್ದೀನಿ ಕ್ಷಣವನ್ನ
ಅವಲಂಬನವಲ್ಲಾ …

ನಮ್ಮ ಸವಾರಿ ನಾಟಕಕ್ಕೆ ಹೋದದ್ದು.........

ನಾಟಕ ಎಂಬೋದನ್ನ ಮನುಷ್ಯ ಯಾಕೆ ಮಾಡ್ತಾನೆ? ನಾಟಕ ಯಾಕೆ ಬೇಕು? ತನ್ನದೇ ಪರಿಸರದಿಂದ ಎತ್ತಿಕೊಂಡ ಕೆಲವು ಸನ್ನಿವೇಷಗಳನ್ನ ಆತ ಯಾಕೆ ಮತ್ತೇ ನೋಡಬೇಕು ಅಂತ ಅಂದುಕೊಳ್ಳುತ್ತಾನೆ? ಯಾಕೆ ಪ್ರಾಚೀನ ಕಥಾನಕಗಳನ್ನ ನೊಡಲು ಬಯಸುತ್ತಾನೆ? ಪಾತ್ರಗಳನ್ನ ಎದುರಿಗೆ ರಂಗದಲ್ಲಿ ಕಾಣಲು ಇಚ್ಚಿಸುತ್ತಾನೆ? ಇವೆಲ್ಲವೂ ಪ್ರಶ್ನೆಗಳಾಗಿ ಕೊರೆಯುತ್ತಾ ಇದ್ದ ವೇಳೆಯಲ್ಲಿಯೇ ಶ್ರೀ ಅಶೋಕ ವರ್ಧನರು ಉಡುಪಿಯಲ್ಲಿ ನೀನಾಸಂ ರವರ ನಾಟಕ ಇದೆಯೆಂದು ಹೇಳಿದರು. ಅದಕ್ಕೆ ಸರಿಯಾಗಿ ಸುಂದರ ರಾಯರು ಸೇರಿತ್ತಾರಾದ್ದರಿಂದ ಹೊರಡುವ ಎಂದು ತಯಾರಾದೆ. ಅಶೋಕರು, ಸುಂದರರಾಯರು, ನರೇಂದ್ರ ಪೈಗಳು ಎಲ್ಲಾ ಒಟ್ಟಿಗೆ ಪಯಣ ಶುರುವಾಯಿತು. ಅಶೋಕರ ಸಂಗಡ ಪಯಣ ಅಷ್ಟು ಉಲ್ಲಸಿತವಾಗಿರುತ್ತದೆ ಎಂದು  ಅಂದು ತಿಳಿಯಿತು. ಅವರೂ ಅವರ ಗೆಳಯರೂ ಆದ ಸುಂದರರಾಯರು "ಕಳೆದುಹೋದ" ಚಹರೆಗಳನ್ನ ನೆನೆಯುತ್ತಿರಬೇಕಾದರೆ, ಹೀಗೆ ನೆನೆಯುವುದು ತಪ್ಪ ಇನ್ನೇನು ಮಾಡೀರ ಎಂದು ರೇಗಿಸಿಕೊಳ್ಳುತ್ತಿದ್ದೆ. ದಾರಿಯುದ್ದಕ್ಕೂ ನಮಗೆಲ್ಲಾ ಹನುಮಂತ ಲಂಕೆಗೇಕೆ ಹೋದ, ಅಲ್ಲಿ ಏಕೆ ಆ ರೀತಿ "ಕೋತಿ" ಚೇಷ್ಟೇಗಳನ್ನೆಲ್ಲಾ ಮಾಡಿದ ಅಂತೆಲ್ಲಾ ಬಹಳ ಸುಂದರವಾಗಿ ಹೇಳುತ್ತಾ ಸಾಗಿದರು.  ಒಟ್ಟಿನಲ್ಲಿ ಉಡುಪಿ ಸೇರಿ ಅಲ್ಲಿ ಚಾ ಅನ್ನು ಬೇಗೆ ಕುಡೀಲಿಕ್ಕೆ ಆಗದೆ, ಈ ವಯಸ್ಸಾದವರೆಲ್ಲ ಬೇಗ ಕುಡಿದು ಮುಗಿಸಿಬಿಟ್ಟಾಗ ನಾನೂ ಬೇಗ ಕುಡಿಯಲು ಏನೇನೋ ಸರ್ಕಸ್ ಮಾಡಿ ಸ್ವಲ್ಪ ಚಾ ಅನ್ನು ನೆಲಕ್ಕೆ ಅರ್ಪಿಸಿ ದೈರ್ಯವಾ…